Lok Sabha Election 2024: ಚುನಾವಣಾ ಅಕ್ರಮ, ಚಿತ್ರದುರ್ಗದಲ್ಲಿ 1.44 ಕೋಟಿ ರೂ. ಜಪ್ತಿ

ಚುನಾವಣಾ ಅಧಿಕಾರಿಗಳು ಅಕ್ರಮ ಹಣ, ಚಿನ್ನ ಹಾಗೂ ಉಚಿತ ಉಡುಗೊರೆ ಹಂಚುವುದು ಮತ್ತು ಸಾಗಾಟದ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ನಿನ್ನೆ (ಮಾ.22) ರಂದು ನಗದು, ಮದ್ಯ, ಡ್ರಗ್ಸ್​ ಬೆಲೆಬಾಳುವ ಲೋಹ ಮತ್ತು ಉಚಿತ ಉಡುಗೊರೆ ವಶಪಡಿಸಿಕೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ 402 ಎಫ್​ಐಆರ್​ ದಾಖಲಾಗಿವೆ.

Lok Sabha Election 2024: ಚುನಾವಣಾ ಅಕ್ರಮ, ಚಿತ್ರದುರ್ಗದಲ್ಲಿ 1.44 ಕೋಟಿ ರೂ. ಜಪ್ತಿ
ಅಧಿಕಾರಿಗಳಿಂದ ಹಣ ಜಪ್ತಿ
Follow us
TV9 Web
| Updated By: ವಿವೇಕ ಬಿರಾದಾರ

Updated on: Mar 23, 2024 | 7:16 PM

ಚಿತ್ರದುರ್ಗ, ಮಾರ್ಚ್​ 23: ಹಿರಿಯೂರು (Hiriyur) ತಾಲೂಕಿನ ಜವನಗೊಂಡನಹಳ್ಳಿ ಸೂಕ್ತ ದಾಖಲೆಗಳು ಇಲ್ಲದೆ ಸಾಗಿಸುತ್ತಿದ್ದ 1.44 ಕೋಟಿ ಹಣವನ್ನು ಚುನಾವಣಾ ಅಧಿಕಾರಿಗಳು (Election Officers) ಜಪ್ತಿ ಮಾಡಿಕೊಂಡಿದ್ದಾರೆ. 1.44 ಕೋಟಿ ನಗದಯ ಎಟಿಎಂಗೆ ಹಣ ತುಂಬುವ ಸಿಎಂಸಿ ಏಜೆನ್ಸಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಆದರೆ ಸೂಕ್ತ ದಾಖಲೆಗಳು ಇಲ್ಲದ ಕಾರಣ ಹಿರಿಯೂರು ತಹಶೀಲ್ದಾರ್ ರಾಜೇಶ್ ಕುಮಾರ್ ನೇತೃತ್ವದ ಅಧಿಕಾರಿಗಳು ಹಣ ವಶಕ್ಕೆ ಪಡೆದುಕೊಂಡಿದ್ದಾರೆ.

ಮತ್ತೊಂದಡೆ ಚಿತ್ರದುರ್ಗ ತಾಲೂಕಿನ ತುರುವನೂರು ಚೆಕ್‌ಪೋಸ್ಟ್‌ ಬಳಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1.5 ಲಕ್ಷ ಹಣವನ್ನು ಚುನಾವಣಾ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಕೊಪ್ಪಳದ ಇರ್ಫಾನ್‌ ಎಂಬುವರು ಹಣ ಸಾಗಿಸುತ್ತಿದ್ದರು.

ಶುಕ್ರವಾರ ದಾಖಲಾದ ದೂರುಗಳು

ಚುನಾವಣಾ ಅಧಿಕಾರಿಗಳು ಅಕ್ರಮ ಹಣ, ಚಿನ್ನ ಹಾಗೂ ಉಚಿತ ಉಡುಗೊರೆ ಹಂಚುವುದು ಮತ್ತು ಸಾಗಾಟದ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ನಿನ್ನೆ (ಮಾ.22) ರಂದು ನಗದು, ಮದ್ಯ, ಡ್ರಗ್ಸ್​ ಬೆಲೆಬಾಳುವ ಲೋಹ ಮತ್ತು ಉಚಿತ ಉಡುಗೊರೆ ವಶಪಡಿಸಿಕೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ 402 ಎಫ್​ಐಆರ್​ ದಾಖಲಾಗಿವೆ. 65,432 ಶಸ್ತ್ರಾಸ್ತ್ರಗಳನ್ನು ಠೇವಣಿ ಮಾಡಲಾಗಿದೆ. 831 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 8 ಶಸ್ತ್ರಾಸ್ತ್ರ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. CRPCಯ ತಡೆಗಟ್ಟುವ ವಿಭಾಗಗಳ ಅಡಿಯಲ್ಲಿ 3,853 ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 4,136 ವ್ಯಕ್ತಿಗಳನ್ನು ಒಳಪಟ್ಟ ಪ್ರಕರಣಗಳನ್ನು ದಾಖಲಾಗಿವೆ.

ಘೋರ ಅಪರಾಧ ಅಡಿಯಲ್ಲಿ 471 ಪ್ರಕರಣಗಳನ್ನು ಅಬಕಾರಿ ಇಲಾಖೆ ದಾಖಲಿಸಿಕೊಂಡಿದೆ. ಪರವಾನಗಿ ಉಲ್ಲಂಘನೆ ಅಡಿಯಲ್ಲಿ 359 ಪ್ರಕರಣ ದಾಖಲಾಗಿವೆ. NDPS ಅಡಿಯಲ್ಲಿ 24 ಪ್ರಕರಣಗಳನ್ನು ಮತ್ತು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಸೆಕ್ಷನ್ 15(a) ಅಡಿಯಲ್ಲಿ 1,477 ಪ್ರಕರಣಗಳು ದಾಖಲಾಗಿವೆ ಮತ್ತು 284 ವಿವಿಧ ರೀತಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಚರಣೆ; 7 ಕೋಟಿ ರೂ. ಮೌಲ್ಯದ ಮದ್ಯ ಜಪ್ತಿ

ವಶಪಡಿಸಿಕೊಂಡ ಹಣ

ಚಿತ್ರದುರ್ಗ ಲೋಕಸಭಾ ಕ್ಷೇತ್ರ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ನಾಯಕನಹಳ್ಳಿ ಕ್ರಾಸ್ ಚೆಕ್ ಪೋಸ್ಟ್​​ನಲ್ಲಿ 38,00,000 ರೂ. ಅನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಗುಲ್ಬರ್ಗ ಲೋಕಸಭಾ ಕ್ಷೇತ್ರ ಕಲಬುರ್ಗಿ ಜಿಲ್ಲೆಯ ಹಿರೋಳ್ಳಿ ಚೆಕ್‌ಪೋಸ್ಟ್​ನಲ್ಲಿ 12,68,000 ರೂ. ಜಪ್ತಿ ಮಾಡಿದ್ದಾರೆ.

ಗುಲ್ಬರ್ಗ ಲೋಕಸಭಾ ಕ್ಷೇತ್ರ ಕಲಬುರ್ಗಿ ಜಿಲ್ಲೆ ಚಿಗರಹಳ್ಳಿ ಚೆಕ್ ಪೋಸ್ಟ್​​ನಲ್ಲಿ 33,00,000 ರೂ. ಮೌಲ್ಯದ ವಿಮಲ್ ಪಾನ್ ಮಸಾಲ ಗುಟ್ಟ 180 ಚೀಲ ವಶಪಡಿಸಿಕೊಳ್ಳಲಾಗಿದೆ.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಚಿಕ್ಕಮಗಳೂರು ಜಿಲ್ಲೆ ಮಾಗಡಿ ಚೆಕ್‌ಪೋಸ್ಟ್​​ನಲ್ಲಿ 13,20,000 ರೂ. ಮೌಲ್ಯದ 243.56 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಧಾರವಾಡ ಲೋಕಸಭಾ ಕ್ಷೇತ್ರ ಧಾರವಾಡ ಜಿಲ್ಲೆ ಗರಗ ಪೊಲೀಸ್​ ಠಾಣೆ ಸಿಬ್ಬಂದಿ 38,50,000 ರೂ. ಮೌಲ್ಯದ 0.778 ಕೇಜಿ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ರೂ.28,75,400 ನಗದನ್ನು ಸಂಪಂಗಿ ರಾಮನಗರ, ಬೆಂಗಳೂರು ನಗರ ಜಿಲ್ಲೆ ಇಲ್ಲಿ ವಶಪಡಿಸಿಕೊಂಡಿದ್ದಾರೆ.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ರೂ.24,00,000 ನಗದನ್ನು ಕೋರಮಂಗಲ, ಬೆಂಗಳೂರು ನಗರ ಜಿಲ್ಲೆ ಇಲ್ಲಿ ವಶಪಡಿಸಿಕೊಂಡಿದ್ದಾರೆ.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ರೂ.86,50,000 ನಗದನ್ನು ಕೋರಮಂಗಲ, ಬೆಂಗಳೂರು ನಗರ ಜಿಲ್ಲೆ ಇಲ್ಲಿ ವಶಪಡಿಸಿಕೊಂಡಿದ್ದಾರೆ.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 71,16,480 ರೂ. ಮೌಲ್ಯದ 983.71 ಗ್ರಾಂ ಚಿನ್ನವನ್ನು ಮತ್ತು 9,00,000 ಮೌಲ್ಯದ 21.17 ಕ್ಯಾರೇಟ್​ ವಜ್ರವನ್ನು ಮುರುಗೇಶಪಾಳ್ಯ, ಬೆಂಗಳೂರು ನಗರ ಜಿಲ್ಲೆಯಲ್ಲಿ ವಶಪಡಿಸಿಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ