ಚುನಾವಣಾಧಿಕಾರಿಗಳ ಭರ್ಜರಿ ಭೇಟೆ; ಅಪಾರ ಪ್ರಮಾಣದ ಮದ್ಯ, ಡ್ರಗ್ಸ್, ನಗದು ಜಪ್ತಿ
ಲೋಕಸಭಾ ಚುನಾವಣೆ ಹಿನ್ನೆಲೆ ಚುನಾವಣಾಧಿಕಾರಿಗಳು ಮತ್ತು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಶನಿವಾರ ಬೆಳ್ಳಂಬೆಳಗ್ಗೆ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಅತಿ ಹೆಚ್ಚು ನಗದು ವಶಕ್ಕೆ ಪಡೆಯಲಾಗಿದೆ. ವಿವಿಧ ಚೆಕ್ ಪೋಸ್ಟ್ಗಳಲ್ಲಿ ಒಟ್ಟು 7 ಲಕ್ಷ ಹಣ ವಶಕ್ಕೆ ಪಡೆಯಲಾಗಿದೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹುನ್ನೂರ ಚೆಕ್ ಪೋಸ್ಟ್ನಲ್ಲಿ 6 ಲಕ್ಷ ರೂ. ಮತ್ತು ಹುಲ್ಯಾಳ ಚೆಕ್ ಪೋಸ್ಟನಲ್ಲಿ 1 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ.
ಬಾಗಲಕೋಟೆ, ಮಾರ್ಚ್.23: ಲೋಕಸಭಾ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ಅಕ್ರಮವಾಗಿ ಹಣ (Money) ಸಾಗಿಸುವವರ ಮೇಲೆ ಚುನಾವಣಾಧಿಕಾರಿಗಳು ಮತ್ತು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಇದುವರೆಗೆ ದಾಖಲೆ ಇಲ್ಲದೇ ವಾಹನಗಳಲ್ಲಿ ಸಾಗಿಸುತ್ತಿದ್ದ 7 ಲಕ್ಷ ರೂಪಾಯಿ ಜಪ್ತಿ ಮಾಡಲಾಗಿದೆ. ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ಬಳಿಕ ಮೊದಲ ಬಾರಿಗೆ ಬಾಗಲಕೋಟೆಯಲ್ಲಿ ಹೆಚ್ಚು ನಗದು ವಶಕ್ಕೆ ಪಡೆಯಲಾಗಿದೆ.
ಶನಿವಾರ ಬೆಳ್ಳಂಬೆಳಗ್ಗೆ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಅತಿ ಹೆಚ್ಚು ನಗದು ವಶಕ್ಕೆ ಪಡೆಯಲಾಗಿದೆ. ವಿವಿಧ ಚೆಕ್ ಪೋಸ್ಟ್ಗಳಲ್ಲಿ ಒಟ್ಟು 7 ಲಕ್ಷ ಹಣ ವಶಕ್ಕೆ ಪಡೆಯಲಾಗಿದೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹುನ್ನೂರ ಚೆಕ್ ಪೋಸ್ಟ್ನಲ್ಲಿ 6 ಲಕ್ಷ ರೂ. ಮತ್ತು ಹುಲ್ಯಾಳ ಚೆಕ್ ಪೋಸ್ಟನಲ್ಲಿ 1 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ ಎಂದು ಬಾಗಲಕೋಟೆ ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ಮಾಹಿತಿ ನೀಡಿದರು.
ಇನ್ನು ನೀತಿ ಸಂಹಿತೆ ಉಲ್ಲಂಘನೆ 9 ಪ್ರಕರಣ ದಾಖಲಾಗಿದೆ. ವಿವಿದೆಡೆ ಅಬಕಾರಿ ಇಲಾಖೆಯಿಂದ ದಾಳಿ ನಡೆಸಿ 77.70 ಲೀಟರ್ ಮದ್ಯ ಮತ್ತು 15.60 ಲೀಟರ್ ಬಿಯರ ವಶಕ್ಕೆ ಪಡೆಯಲಾಗಿದೆ. ಒಟ್ಟು 5.50 ಲಕ್ಷ ರೂ. ಮೌಲ್ಯದ ಮದ್ಯ ಮತ್ತು ಬಿಯರ್ ಸೀಜ್ ಆಗಿದೆ. ನಗರದ ಬಸವೇಶ್ವರ ವೃತ್ತದ ಬಳಿ ಆಟೋದಲ್ಲಿ ಸಾಗಿಸುತ್ತಿದ್ದ 2.89 ರೂ. ಮೌಲ್ಯದ 34.56 ಲೀಟರ್ ಮದ್ಯ, ಜಮಖಂಡಿ ಮತಕ್ಷೇತ್ರದ ಕುಂಚನೂರು ಗ್ರಾಮದ ಹತ್ತಿರ 8.64 ಲೀಟರ್ ಮದ್ಯ, ಬಾದಾಮಿ ಮತಕ್ಷೇತ್ರದ ಜಾಲಿಹಾಳ ಗ್ರಾಮದ ರಮಜಾನಸಾಬ್ ಹುಸೇನಸಾಬ ಮನೆ ಮೇಲೆ ದಾಳಿ ಮಾಡಿ 15.6 ಲೀಟರ್ ಬೀಯರ್ ಹಾಗೂ ಹುನಗುಂದ ಮತಕ್ಷೇತ್ರದ ಹೂವನೂರ ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ 71 ಸಾವಿರ ಮೌಲ್ಯದ 4.320 ಲೀಟರ್ ಮದ್ಯ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಶಾರ್ಟ್ ಸರ್ಕ್ಯೂಟ್ನಿಂದ ಹೊತ್ತಿಉರಿದ ಬಾಲಕರ ವಿದ್ಯಾರ್ಥಿ ನಿಲಯ; ಕಿಟಕಿ, ಬಾಗಿಲು, 30ಕ್ಕೂ ಹೆಚ್ಚು ಬೆಡ್ಗಳು ಸುಟ್ಟು ಭಸ್ಮ
ಮತ್ತೊಂದೆಡೆ ಮುಧೋಳ ಅಬಕಾರಿ ಪೊಲೀಸರು ದಾಳಿ ನಡೆಸಿ 354 ಲೀ ಸಾಮರ್ಥ್ಯದ 40 ಬಾಕ್ಸ್ ಮದ್ಯ ವಶಕ್ಕೆ ಪಡೆದಿದ್ದಾರೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಗ್ರಾಮವೊಂದರ ಅರುಣ ಕಲ್ಲೊಳ್ಳಿ ಎಂಬುವರ ಮನೆಯಲ್ಲಿ ಸಂಗ್ರಹಿಸಿದ್ದ 1.5 ಲಕ್ಷ ಮೌಲ್ಯದ ಮದ್ಯ ಜಪ್ತಿ ಮಾಡಿ ಅರುಣ್ನನ್ನು ಬಂಧಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 642 ಲೀಟರ್ ಮದ್ಯ ಹಾಗೂ ಡ್ರಗ್ಸ್ ಜಪ್ತಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿಯಾದ ಬಳಿಕ ಈವರೆಗೆ 642 ಲೀಟರ್ ಮದ್ಯ ವಶಕ್ಕೆ ಪಡೆಯಲಾಗಿದೆ. ಅಬಕಾರಿ ಅಧಿಕಾರಿಗಳು 3,75,022 ರೂ. ಮೌಲ್ಯದ ಮದ್ಯ, 5,43,500 ರೂ. ಮೌಲ್ಯದ 1.7 ಕೆಜಿ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ