AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಈ ಮಕ್ಕಳ ರೀಲ್ಸ್ ಮಾಡೋದು ಎಷ್ಟು ಕಷ್ಟ, ಈ ಟೀಚರಮ್ಮನ ಸಾಹಸಕ್ಕೆ ಒಂದು ಸಲಾಂ 

ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಪುಟಾಣಿ ಮಕ್ಕಳಿಗೆ ಸಂಬಂಧಿಸಿದ ಮುದ್ದಾದ ವಿಡಿಯೋಗಳು ಹೆಚ್ಚಿನವರ ಗಮನ ಸೆಳೆಯುತ್ತದೆ. ಸದ್ಯ ಅಂತಹದ್ದೇ ಕ್ಯೂಟ್ ವಿಡಿಯೋವೊಂದು ವೈರಲ್ ಆಗಿದ್ದು, ಪುಟಾಣಿ ಮಕ್ಕಳ ಮುದ್ದಾದ ನಗುವನ್ನು ಸೆರೆ ಹಿಡಿಯಲು ಟೀಚರಮ್ಮನ ಸಾಹಸ ಮತ್ತು ಕ್ರಿಯೆಟಿವಿಟಿಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

Viral Video: ಈ ಮಕ್ಕಳ ರೀಲ್ಸ್ ಮಾಡೋದು ಎಷ್ಟು ಕಷ್ಟ, ಈ ಟೀಚರಮ್ಮನ ಸಾಹಸಕ್ಕೆ ಒಂದು ಸಲಾಂ 
ವೈರಲ್ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on: Apr 26, 2024 | 2:44 PM

Share

ಇತ್ತೀಚಿನ ದಿನಗಳಲ್ಲಿ ರೀಲ್ಸ್ ಟ್ರೆಂಡ್ ಬಹಳನೇ ಹೆಚ್ಚಾಗಿದೆ. ರೀಲ್ಸ್ ವಿಡಿಯೋ ಮಾಡುತ್ತಲೇ ಸೋಷಿಯಲ್ ಮಿಡಿಯಾದಲ್ಲಿ ರಾತ್ರೋ ರಾತ್ರಿ ಫೇಮಸ್ ಆದ ಅದೆಷ್ಟೋ ಜನರಿದ್ದಾರೆ. ಆದರೆ ಈಗೀಗ ಈ ಸಾಮಾಜಿಕ ಜಾಲತಾಣದಲ್ಲಿ ಅತಿರೇಕದ ವರ್ತನೆಯ ವಿಡಿಯೋಗಳೇ ಹರಿದಾಡುತ್ತಿರುತ್ತವೆ. ಇವುಗಳ ಮಧ್ಯೆ ಇಲ್ಲೊಂದು ಮುದ್ದಾದ ವಿಡಿಯೋ ವೈರಲ್ ಆಗಿದ್ದು, ಪುಟಾಣಿ ಮಕ್ಕಳ ಮುದ್ದಾದ ನಗುವನ್ನು ಸೆರೆಹಿಡಿಯಲು ಟೀಚರಮ್ಮನ ಭರ್ಜರಿ ಸಾಹಸ ಮತ್ತು ಕ್ರಿಯೆಟಿವಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ಪುಟಾಣಿ ಮಕ್ಕಳ ಮುದ್ದಾದ ವಿಡಿಯೋವನ್ನು ತಮಿಳುನಾಡಿನ ಮಾಂಟೆಸ್ಸರಿ ಸ್ಕೂಲ್ ಶಿಕ್ಷಕಿಯೊಬ್ಬರು ಸೆರೆಹಿಡಿದಿದ್ದು,  ಮಕ್ಕಳ ನಿಷ್ಮಲ್ಮಶ ನಗುವಿನ ಈ ಮುದ್ದಾದ  ರೀಲ್ಸ್ ಮಾಡಿದ ಶಾಲಾ ಶಿಕ್ಷಕಿಯ ಕ್ರಿಯೆಟಿವಿಟಿ ನೆಟ್ಟಿಗರ ಗಮನ ಸೆಳೆಯುತ್ತಿದೆ. ಈ ವಿಡಿಯೋವನ್ನು ತಮಿಳುನಾಡಿನ ವೃಕ್ಷ ಮಾಂಟೆಸ್ಸರಿ ಇಂಟರ್ನ್ಯಾಷನಲ್ ಸ್ಕೂಲ್ (@vrikshamontessoriinternational) ನ ಅಧೀಕೃತ ಇನ್ಸ್ಟಾಗ್ರಾಮ್ ಪೇಜ್ ಅಲ್ಲಿ ಹಂಚಿಕೊಳ್ಳಲಾಗಿದ್ದು, “ಈ ರೀಲ್ಸ್ ಕೇವಲ ಈ ಮುದ್ದಾದ ನಗುವಿಗಾಗಿ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ :

ವೈರಲ್ ವಿಡಿಯೋದಲ್ಲಿ ಪುಟಾಣಿ ಮಕ್ಕಳು ಒಂದೆಡೆ ಸಾಲಾಗಿ ಕೂತಿರುವುದನ್ನು ಕಾಣಬಹುದು. ಈ ಮಕ್ಕಳ ಮುದ್ದಾದ ನಗುವನ್ನು ಸೆರೆ ಹಿಡಿಯಲು ಶಿಕ್ಷಕಿಯೊಬ್ಬರು ನೆಲದ ಮೇಲೆ ಮಲಗಿ ವಿಡಿಯೋ ಮಾಡುತ್ತಾರೆ, ಅವರು ವಿಡಿಯೋ ಮಾಡುತ್ತಿದ್ದಂತೆ ಇನ್ನೊಬ್ಬ ಶಿಕ್ಷಕಿ ವಿಡಿಯೋ ಮಾಡುತ್ತಿದ್ದಂತಹ ಶಿಕ್ಷಕಿಯ ಕಾಲನ್ನು ಎಳೆದುಕೊಂಡು ಹೋಗುತ್ತಾರೆ. ಆ ಸಂದರ್ಭದಲ್ಲಿ ಮಕ್ಕಳು ಖುಷಿಯಿಂದ  ನಗುತ್ತಾ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

ಇದನ್ನೂ ಓದಿ: ಮೋದಿಯ ನಿಂದಿಸದಿರೋ ಅಣ್ಣಗಳಿರಾ, ಸಂತನ ನಿಂದಿಸದಿರೋ, ಮೋದಿಗಾಗಿ ಕನ್ನಡ ಹಾಡು ಬರೆದ ವೃದ್ಧೆ

ಕೆಲದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 20.8 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 1.5 ಮಿಲಿಯನ್ ಲೈಕ್ಸ್ ಗಳನ್ನು ಪಡೆದುಕೊಂಡಿದ್ದು, ಮುದ್ದಾದ ಮಕ್ಕಳ ನಗು ಹಾಗೂ ಶಿಕ್ಷಕಿಯ ಕ್ರಿಯೆಟಿವಿಟಿಗೆ ನೆಟ್ಟಿಗರು ಭಾರಿ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ