
ಹೈದರಾಬಾದ್, ಅಕ್ಟೋಬರ್ 21: ನಾವೆಲ್ಲರೂ ದೇವಸ್ಥಾನಕ್ಕೆ ಹೋದಾಗ ದೇವಸ್ಥಾನದ ಗರ್ಭಗುಡಿ ಸುತ್ತಲೋ ಅಥವಾ ದೇವಾಲಯದ ಆವರಣ ಸುತ್ತಲೋ ಬೆಸಸಂಖ್ಯೆಯಲ್ಲಿ ಪ್ರದಕ್ಷಿಣೆ ಹಾಕ್ತೇವೆ. ಆದರೆ ಈ ಸುದ್ದಿ ಕೇಳಿದ್ರೆ ನೀವು ನಿಮ್ಗೆ ನಂಬೋದಕ್ಕೆ ಕಷ್ಟವಾಗಬಹುದು. ಇಲ್ಲೊಂದು ಕಣ್ಣಿಲ್ಲದ ಕರುವೊಂದು (Blind calf) ಪ್ರತಿನಿತ್ಯ ಶ್ರೀಕೃಷ್ಣನ ವಿಗ್ರಹಕ್ಕೆ ಪ್ರದಕ್ಷಿಣೆ ಬರುವ ಮೂಲಕ ಎಲ್ಲರನ್ನೂ ನಿಬ್ಬೆರಾಗಿಸಿದೆ. ಹೈದರಾಬಾದ್‌ನ (Hyderabad) ಹೊರವಲಯದ ಬಟಸಿಂಗಾರಂನಲ್ಲಿರುವ ಯುಗತುಳಸಿ ಫೌಂಡೇಶನ್ ಗೋಮಹಾಕ್ಷೇತ್ರದಲ್ಲಿ (Yugatulasi Foundation Gomahakshetra) ಪ್ರತಿದಿನ ಈ ದೃಶ್ಯ ನೋಡಬಹುದಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ.
ಪ್ರತಿಷ್ಠಾನದ ಅಧ್ಯಕ್ಷ ಮತ್ತು ಟಿಟಿಡಿ ಮಂಡಳಿಯ ಮಾಜಿ ಸದಸ್ಯ ಕೋಲಿಸೆಟ್ಟಿ ಶಿವಕುಮಾರ್ ಕರುವು ಕೃಷ್ಣನ ವಿಗ್ರಹಕ್ಕೆ ಪ್ರದಕ್ಷಿಣೆ ಬರುವ ದೃಶ್ಯವನ್ನು ಚಿತ್ರೀಕರಸಿದ್ದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಕರುವೊಂದು ಶ್ರೀಕೃಷ್ಣನ ವಿಗ್ರಹಕ್ಕೆ ಪ್ರದಕ್ಷಿಣೆ ಬರುವುದನ್ನು ನೀವಿಲ್ಲಿ ನೋಡಬಹುದು.
ಇದನ್ನೂ ಓದಿ:Video: ಶೇರಿಂಗ್ ಇಸ್ ಕೇರಿಂಗ್; ಒಂದೇ ತಟ್ಟೆಯಲ್ಲಿ ಪುಂಗನೂರು ಕರುವಿನೊಂದಿಗೆ ಊಟ ಮಾಡಿದ ಮಾಲೀಕ
ಕಳೆದ ಎರಡು ವರ್ಷಗಳ ಹಿಂದೆ, ಕಸಾಯಿಖಾನೆಗೆ ಕರೆದೊಯ್ಯುತ್ತಿದ್ದ ಹಸುವನ್ನು ನಾವು ರಕ್ಷಿಸಿದ್ದೇವೆ. ಈ ಹಸು ಕೆಲವೇ ದಿನಗಳಲ್ಲಿ ಈ ಕರುವಿಗೆ ಜನ್ಮ ನೀಡಿತು. ಈ ಕರುವಿಗೆ ಸಂಧ್ಯಾ ಎಂದು ನಾಮಕರಣ ಮಾಡಿದೆವು. ಈ ಕುರುಡು ಕರು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಸುಮಾರು 15 ನಿಮಿಷಗಳ ಕಾಲ ಗೋಮಹಾ ಕ್ಷೇತ್ರದಲ್ಲಿರುವ ಕೃಷ್ಣನ ಪ್ರತಿಮೆಗೆ ಪ್ರದಕ್ಷಿಣೆ ಬರುತ್ತದೆ. ಈ ಕರುವಿಗೆ ಯಾರು ತರಬೇತಿ ನೀಡಿಲ್ಲ ಎಂದು ಪ್ರತಿಷ್ಠಾನದ ಅಧ್ಯಕ್ಷ ಮತ್ತು ಟಿಟಿಡಿ ಮಂಡಳಿಯ ಮಾಜಿ ಸದಸ್ಯ ಕೋಲಿಸೆಟ್ಟಿ ಶಿವಕುಮಾರ್ ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:26 pm, Tue, 21 October 25