AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾ ಊಟ ತಿನ್ನು; ಹಸಿದು ಬಂದ ಗೋವಿನ ಹೊಟ್ಟೆ ತುಂಬಿಸಿದ ಯೋಧ

ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ದೃಶ್ಯಗಳು ಮನಸ್ಸಿಗೆ ತುಂಬಾನೇ ನಾಟುಂವತಿರುತ್ತವೆ. ಇಲ್ಲೊಂದು ಅಂತಹದ್ದೇ ದೃಶ್ಯ ವೈರಲ್‌ ಆಗಿದ್ದು, ಹಸಿವು ಎಂದು ಬಂದ ಗೋವಿಗೆ ಯೋಧರೊಬ್ಬರು ತನ್ನ ತಟ್ಟೆಯ ಊಟವನ್ನು ನೀಡಿ ಮೂಕ ಜೀವಿಯ ಹಸಿವನ್ನು ನೀಗಿಸಿದ್ದಾರೆ. ಇವರ ಈ ಮಾನವೀಯತೆಗೆ ನೆಟ್ಟಿಗರು ತಲೆ ಬಾಗಿದ್ದಾರೆ.

ಬಾ ಊಟ ತಿನ್ನು; ಹಸಿದು ಬಂದ ಗೋವಿನ ಹೊಟ್ಟೆ ತುಂಬಿಸಿದ ಯೋಧ
ಗೋವಿನ ಹಸಿವು ನೀಗಿಸಿದ ಸೈನಿಕImage Credit source: Social Media
ಮಾಲಾಶ್ರೀ ಅಂಚನ್​
|

Updated on: Oct 07, 2025 | 12:10 PM

Share

ಇಂದಿನ ಈ ಕಾಲದಲ್ಲಿ ಮಾನವೀಯತೆ (Humanity) ಎನ್ನುವಂತಹದ್ದು ಸತ್ತು ಹೋಗಿದೆ ಅಂತಾನೇ ಹೇಳಬಹುದು. ಹೌದು ಮನುಷ್ಯ ಎಂಬ ಸ್ವಾರ್ಥಿ ತನ್ನ ಪ್ರಾಣಿ ಪಕ್ಷಿಗಳಿಗೆ ಊಟ ಹಾಕೋದು ಬಿಡಿ, ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಇತರರ ತಟ್ಟೆಯ ಊಟವನ್ನೇ ಕಸಿಯುತ್ತಿದ್ದಾನೆ.ಇಂತಹ ಸ್ವಾರ್ಥ ತುಂಬಿದ ಜನರ ನಡುವೆ ಒಂದಷ್ಟು ಒಳ್ಳೆಯ ಮನಸ್ಸಿನ ಜನರೂ ಇದ್ದಾರೆ. ಇದಕ್ಕೆ ಉದಾಹರಣೆಯಂತಿರುವ ವಿಡಿಯೋವೊಂದು ಇದೀಗ ವೈರಲ್‌ ಆಗುತ್ತಿದ್ದು, ಹಸಿವು ಎಂದು ತನ್ನ ಬಳಿ ಬಂದ ಗೋವಿಗೆ  ಭಾರತೀಯ ಸೇನೆಯ ಯೋಧರೊಬ್ಬರು ತನ್ನ ಊಟವನ್ನೇ ನೀಡಿ ಗೋವಿನ ಹಸಿವನ್ನು ನೀಗಿಸಿದ್ದಾರೆ. ತನ್ನ ಹೊಟ್ಟೆ ತುಂಬದಿದ್ದರೂ ಪರವಾಗಿಲ್ಲ, ಗೋ ಮಾತೆ ಹೊಟ್ಟೆ ತುಂಬ ಊಟ ಮಾಡಬೇಕೆಂದು ಹಸುವಿಗೆ ಊಟ ನೀಡಿದ್ದಾರೆ. ಈ ದೃಶ್ಯವನ್ನು ಕಂಡು ನೆಟ್ಟಿಗರು ಭಾವುಕರಾಗಿದ್ದಾರೆ.

ಹಸಿದು ಬಂದ ಗೋವಿನ ಹೊಟ್ಟೆ ತುಂಬಿಸಿದ ತುಂಬಿಸಿದ ಯೋಧ:

ಭಾರತೀಯ ಸೇನೆಯ ಯೋಧರೊಬ್ಬರು ಹಸಿವು ಎಂದು ತನ್ನ ಬಳಿಗೆ ಬಂದಂತಹ ಗೋವಿನ ಹಸಿವನ್ನು ನೀಗಿಸಿದ್ದಾರೆ. ಹೌದು ಅವರು ಊಟ ಮಾಡುತ್ತಿರುವಂತಹ ಸಂದರ್ಭದಲ್ಲಿ ಹಸುವೊಂದು ಬಂದಿದ್ದು, ಹಸಿದು ಬಂದ ಆ ಗೋವಿಗೆ ತನ್ನ ಬುತ್ತಿಯಲ್ಲಿದ್ದ ಊಟವನ್ನೆಲ್ಲಾ ತಿನ್ನಿಸಿದ್ದಾರೆ.

ಈ ವಿಡಿಯೋವನ್ನು Monty Fouji ಹೆಸರಿನ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಯೋಧರೊಬ್ಬರು ತನ್ನ ಬುತ್ತಿಯಲ್ಲಿದ್ದ ಊಟವನ್ನು ಹಸುವಿಗೆ ನೀಡುವಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ
Image
ತನ್ನ ವೃತ್ತಿ ಪ್ರಪಂಚದ ಬಗ್ಗೆ ಅಮ್ಮನಿಗೆ ಪರಿಚಯಿಸಿದ ಮಗ
Image
ದೇಶ ಸೇವೆಗೆ ಹೊರಟ ಮಗನ ಮುಂದೆ ಅಮ್ಮನ ಕಣ್ಣೀರು
Image
ಇಳಿವಯಸ್ಸಿನಲ್ಲಿ ಎಂಬಿಎ ಪದವಿ ಪಡೆದ ತಂದೆ, ಮಗನ ಸಂಭ್ರಮ ಹೇಗಿತ್ತು ನೋಡಿ
Image
ಮುದ್ದಿನ ಮಗನಿಗೆ ಕಷ್ಟ ಕೊಡದೇ ತಾನೇ ಹೋಮ್ ವರ್ಕ್ ಮಾಡಿದ ಅಮ್ಮ

ವೈರಲ್‌  ವಿಡಿಯೋ ಇಲ್ಲಿದೆ ನೋಡಿ:

ಆರ್ಮಿ ಮೆಡಿಕಲ್‌ ಕಾರ್ಪ್ಸ್‌ ಒಬ್ರು ಊಟ ಮಾಡುತ್ತಿದ್ದಂತ ವೇಳೆಯಲ್ಲಿ ಒಂದು ಗೋವು ಅವರ ಬಳಿಗೆ ಹೋಗಿದ್ದು, ಆ ಸಂದರ್ಭದಲ್ಲಿ ಬಾ ಹೊಟ್ಟೆ ತುಂಬಾ ಊಟ ಮಾಡು ನೀನು ಎಂದು ತನ್ನ ಬುತ್ತಿಯಲ್ಲಿದ್ದ ಊಟವನ್ನೆಲ್ಲಾ ಆ ಮೂಕ ಜೀವಿಗೆ ನೀಡಿದ್ದಾರೆ.

ಇದನ್ನೂ ಓದಿ: ತನ್ನ ವೃತ್ತಿ ಪ್ರಪಂಚದ ಬಗ್ಗೆ ಅಮ್ಮನಿಗೆ ಪರಿಚಯಿಸಿದ ಮಗ, ಇದೊಂದು ಅದ್ಭುತ ಕ್ಷಣ

ನಾಲ್ಕು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 11 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದ್ದಾರೆ. ಒಬ್ಬ ಬಳಕೆದಾರರು ʼತುಂಬಾ ಒಳ್ಳೆಯ ಕೆಲಸ ಸರ್‌, ನಿಮಗೆ ಆ ದೇವರು ಒಳ್ಳೆಯದು ಮಾಡಲಿʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಮ್ಮ ಹೆಮ್ಮೆಯ ಸೈನಿಕʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಗೋವಿನ ಹಸಿವನ್ನು ನೀಗಿಸಿದ ನಿಮಗೆ ದೇವರು ದೀರ್ಘಾಯುಷ್ಯ ಮತ್ತು ಎಲ್ಲಾ ರೀತಿಯ ಸಂತೋಷವನ್ನು ನೀಡಲಿʼ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ