Video: ಫುಡ್​​​ ನೀಡಲು ಮನೆಯ ಬಾಗಿಲಿಗೆ ಬಂದ ಡೆಲಿವರಿ ಬಾಯ್ಸ್‌ಗೆ ಗಿಫ್ಟ್ ನೀಡಿದ ವ್ಯಕ್ತಿ

ಬೇರೆಯವರ ಮುಖದಲ್ಲಿ ನಗು ತರಿಸುವ ಕೆಲಸಕ್ಕೆ ಕೈ ಹಾಕುವ ಕೆಲ ಜನರನ್ನು ನೋಡಿದಾಗ ನಿಜಕ್ಕೂ ಖುಷಿಯಾಗುತ್ತದೆ. ವ್ಯಕ್ತಿಯೊಬ್ಬರು ದೀಪಾವಳಿ ಹಬ್ಬದ ಪ್ರಯುಕ್ತ ಆನ್ಲೈನ್‌ನಲ್ಲಿ ಸಿಹಿ ತಿಂಡಿಗಳನ್ನು ಆರ್ಡರ್ ಮಾಡಿದ್ದಾರೆ. ಡೆಲಿವರಿ ವಿತರಕರು ಮನೆಬಾಗಿಲಿಗೆ ತಂದು ಕೊಡುತ್ತಿದ್ದಂತೆ, ಈ ವ್ಯಕ್ತಿ ಮಾಡಿದ ಕೆಲಸದಿಂದಾಗಿ ಡೆಲಿವರಿ ವಿತರಕರ ಮೊಗದಲ್ಲಿ ನಗು ಮೂಡಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಫುಡ್​​​ ನೀಡಲು ಮನೆಯ ಬಾಗಿಲಿಗೆ ಬಂದ ಡೆಲಿವರಿ ಬಾಯ್ಸ್‌ಗೆ ಗಿಫ್ಟ್ ನೀಡಿದ ವ್ಯಕ್ತಿ
ವೈರಲ್‌ ವಿಡಿಯೋ
Image Credit source: Instagram

Updated on: Oct 20, 2025 | 5:06 PM

ಹೈದರಾಬಾದ್‌, ಅಕ್ಟೋಬರ್ 20: ಕೆಲವರಿಗೆ ದುಡಿಯುವುದು ಅನಿವಾರ್ಯ. ಹೀಗಾಗಿ ಹಬ್ಬದ ಸಂಭ್ರಮ ಸಡಗರವಿರಲಿ, ಆ ಬಗ್ಗೆ ತಲೆ ಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಾವು ಕೆಲಸ ಮಾಡ್ತಾರೆ. ಈ ವಿಚಾರದಲ್ಲಿ ಡೆಲಿವರಿ ವಿತರಕರು (Delivery boy) ಹೊರತಾಗಿಲ್ಲ. ಈ ಸಮಯದಲ್ಲಿ ನೀವು ಏನೇ ಆರ್ಡರ್ ಮಾಡಿದ್ರೂ ಆ ಉತ್ಪನ್ನ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡ್ತಾರೆ ಈ ಡೆಲಿವರಿ ಬಾಯ್ಸ್‌. ಈ ಹಬ್ಬದ ಸಂದರ್ಭ ಅವರ ಮೊಗದಲ್ಲಿ ನಗು ತರಿಸಿದರೆ ಹೇಗಿರುತ್ತದೆ. ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಹೈದರಾಬಾದ್‌ನ ಗುಂಡೇಟಿ ಮಹೇಂಧರ್ ರೆಡ್ಡಿಯವರು (Gundeti Mahendhar Reddy) ಡೆಲಿವರಿ ಬಾಯ್ ಗಳ ಖುಷಿ ಪಡಿಸಲು ಪ್ರಯತ್ನಿಸಿದ್ದಾರೆ. ಆನ್ಲೈನ್ ಪ್ಲಾಟ್ ಫಾರ್ಮ್‌ಗಳಲ್ಲಿ ಸಿಹಿ ತಿಂಡಿಗಳನ್ನು ಆರ್ಡರ್ ಮಾಡಿ, ಮನೆಗೆ ತಲುಪಿಸಿದ ಡೆಲಿವರಿ ವಿತರರಿಗೆ ಉಡುಗೊರೆಯಾಗಿ ನೀಡಿ ಹಬ್ಬದ ಶುಭಾಶಯ ಕೋರಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು ನೆಟ್ಟಿಗರು ಈ ವ್ಯಕ್ತಿಯ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ.

ಗುಂಡೇಟಿ ಮಹೇಂಧರ್ ರೆಡ್ಡಿ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋಗೆ ಶೀರ್ಷಿಕೆ ನೀಡಲಾಗಿದ್ದು, ನಾವು ದೀಪಾವಳಿಗಾಗಿ ಸ್ವಿಗ್ಗಿ, ಬ್ಲಿಂಕಿಟ್, ಜೆಪ್ಟೋ ಮತ್ತು ಬಿಗ್‌ಬಾಸ್ಕೆಟ್‌ನಿಂದ ಸಿಹಿತಿಂಡಿಗಳನ್ನು ಆರ್ಡರ್ ಮಾಡಿ, ಅದನ್ನು ಮನೆಬಾಗಿಲಿಗೆ ತಂದ ಡೆಲಿವರಿ ವಿತರಕರಿಗೆ ಮರಳಿ ನೀಡಿದೆವು. ಈ ದೀಪಾವಳಿಗೆ, ನಮ್ಮ ಡೆಲಿವರಿಗಳನ್ನು ವಿಶೇಷವಾಗಿಸುವ ನಗುವನ್ನು ಸಿಹಿಗೊಳಿಸಲು ನಾವು ನಿರ್ಧರಿಸಿದ್ದೇವೆ.ವಿವಿಧ ಡೆಲಿವರಿ ಆಪ್‌ಗಳಿಂದ ಸಿಹಿತಿಂಡಿಗಳನ್ನು ಆರ್ಡರ್ ಮಾಡಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ
ಬೆಂಗಳೂರಿನ ಜೆಪ್ಟೋ ಡೆಲಿವರಿ ಬಾಯ್ ವಾರದ ಸಂಪಾದನೆ 21 ಸಾವಿರ ರೂ ಅಂತೆ
ಕುದುರೆ ಏರಿ ಬಂದು ಪ್ರವಾಸಿಗರಿಗೆ ಆಹಾರ ತಲುಪಿಸಿದ ಡೆಲಿವರಿ ಬಾಯ್
ಆನ್ಲೈನ್‌ನಲ್ಲಿ ಆರ್ಡರ್ ಮಾಡಿದ್ದು ಬೆಳ್ಳಿ ನಾಣ್ಯ, ಕೈ ಸೇರಿದ್ದು ಈ ಐಟಮ್ಸ್‌
ಆನ್ಲೈನ್ ಫುಡ್ ದರವು ಶೇ 80 ರಷ್ಟು ಹೆಚ್ಚು

ವೈರಲ್‌ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋದಲ್ಲಿ ಆನ್ಲೈನ್‌ನಲ್ಲಿ ಆರ್ಡರ್ ಮಾಡಿದ್ದ ಸಿಹಿ ತಿಂಡಿಗಳನ್ನು ನೀಡಲು ಡೆಲಿವರಿ ಬಾಯ್ಸ್‌ ಮನೆ ಬಾಗಿಲಿಗೆ ಬಂದಿರುವುದನ್ನು ಕಾಣಬಹುದು. ಆದರೆ ಈ ವ್ಯಕ್ತಿಯೂ ಈ ಸಿಹಿತಿಂಡಿಗಳಲ್ಲಿ ಫುಡ್‌ ಡೆಲಿವರಿ ಮಾಡುವವರಿಗೆ ನೀಡಿ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರುವುದನ್ನು ಕಾಣಬಹುದು.

ಇದನ್ನೂ ಓದಿ:Viral: ತಿಂಗಳಿಗೆ ಅಲ್ಲ, ವಾರಕ್ಕೆ 21 ಸಾವಿರ ರೂ ಸಂಪಾದನೆ; ಇದು ಬೆಂಗಳೂರಿನ ಜೆಪ್ಟೋ ಡೆಲಿವರಿ ಬಾಯ್ ಆದಾಯ

ಈ ವಿಡಿಯೋ ಇದುವರೆಗೂ ಹದಿನೈದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಒಬ್ಬ ಬಳಕೆದಾರ, ಒಳ್ಳೆಯ ಪ್ರಯತ್ನ, ಇತರರ ಮೊಗದಲ್ಲಿ ನಗು ಮೂಡಿಸಲು ಎಲ್ಲರಿಗೂ ಸಾಧ್ಯವಿಲ್ಲ ಎಂದಿದ್ದಾರೆ. ಮತ್ತೊಬ್ಬರು, ಅಂತಿಮವಾಗಿ ಯಾರೋ ಅವರ ಪ್ರಯತ್ನಗಳನ್ನು ಗುರುತಿಸಿ, ಉಡುಗೊರೆ ನೀಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ನೀವು ಡೆಲಿವರಿ ವಿತರಕರ ಮುಖ ತೋರಿಸದೇ ಇರುವುದಕ್ಕೆ ನಾನು ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ