ಹೈದರಾಬಾದ್: ಹೈದರಾಬಾದ್‌ನಲ್ಲಿ ಇಂದು ನಡೆದ ಗಣೇಶೋತ್ಸವದ ಬೃಹತ್ ಮೆರವಣಿಗೆಯಲ್ಲಿ ಹೈದರಾಬಾದ್ ಪೊಲೀಸರು ಸಂಭ್ರಮದಲ್ಲಿ ಪಾಲ್ಗೊಂಡರು. 63 ಅಡಿ ಎತ್ತರದ ಬೃಹತ್ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲು ನೀರಿನ ಟ್ಯಾಂಕ್ ಬಳಿ ಕೊಂಡೊಯ್ಯುವಾಗ ಸಾಂಪ್ರದಾಯಿಕ ಡೋಲಿನ ಬೀಟ್ಗೆ ಪೊಲೀಸ್ ಸಿಬ್ಬಂದಿ ಸಖತ್ ಆಗಿ ಹೆಜ್ಜೆ ಹಾಕುತ್ತಿರುವ ವಿಡಿಯೋ ವೈರಲ್ ಆಗಿದೆ.
ಇಂದು ತೆಲಂಗಾಣ ಮತ್ತು ಇತರ ರಾಜ್ಯಗಳಾದ್ಯಂತ ಗಣಪತಿ ಉತ್ಸವದ ಅಂತಿಮ ದಿನದ ಸಂಭ್ರಮ ಮೂಡಿತ್ತು. ಗಣಪತಿ ವಿಸರ್ಜನ್ ಮೆರವಣಿಗೆಯಲ್ಲಿ ನೂರಾರು ಭಕ್ತರ ಮಧ್ಯೆ ಪೊಲೀಸರು ಸಾಂಪ್ರದಾಯಿಕ ಡೋಲಿನ ಬೀಟ್‌ಗಳಿಗೆ ಸಂತಸದಿಂದ ನೃತ್ಯ ಮಾಡುವುದನ್ನು ವೈರಲ್ ವೀಡಿಯೊಗಳಲ್ಲಿ ಕಾಣಬಹುದು.
VIDEO | Police personnel dance during the ‘Ganesh Visarjan’ procession at Tank Bund in Hyderabad.#Ganeshotsav2023 #GaneshChaturthi2023 pic.twitter.com/8QPPowmAFx
— Press Trust of India (@PTI_News) September 28, 2023
ಇದನ್ನೂ ಓದಿ: ಹೈದರಾಬಾದ್ನ ಬಾಂಡ್ಲಗುಡ ಗಣೇಶ ಲಡ್ಡು 1.26 ಕೋಟಿ ರೂ.ಗೆ ಹರಾಜು!
ಗಣೇಶೋತ್ಸವದ ಕೊನೆಯ ದಿನವಾದ್ದರಿಂದ ತೆಲಂಗಾಣದ ರಾಜಧಾನಿ ಮತ್ತು ಅದರ ಸುತ್ತಮುತ್ತ 30,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. 9 ದಿನಗಳ ಕಾಲ ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಗಣಪತಿ ವಿಗ್ರಹಗಳ ವಿಸರ್ಜನೆ ಹೈದರಾಬಾದ್‌ನಲ್ಲಿ ಭಾರೀ ಭದ್ರತಾ ವ್ಯವಸ್ಥೆಗಳ ನಡುವೆ ನಡೆಯಿತು.
#Hyderabad police dance during Ganesh Shoba Yatra pic.twitter.com/rcWNY8wwbL
— Naveena (@TheNaveena) September 28, 2023
ಪ್ರತಿ ವರ್ಷ ಹೈದರಾಬಾದ್‌ನಲ್ಲಿ ಗಣೇಶ ಚತುರ್ಥಿ ಹಬ್ಬದ ಪ್ರಮುಖ ಆಕರ್ಷಣೆಯೆಂದರೆ ಹೈದರಾಬಾದ್ನ ಮಧ್ಯ ಭಾಗದಲ್ಲಿರುವ ಖೈರತಾಬಾದ್‌ನಲ್ಲಿ ಸ್ಥಾಪಿಸಲಾದ ಎತ್ತರದ ವಿಗ್ರಹ. ಸಂಘಟಕರು ಈ ವರ್ಷ 63 ಅಡಿ ಎತ್ತರದ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದರು. ಅದನ್ನು ಇಂದು (ಗುರುವಾರ) ಬೆಳಿಗ್ಗೆ ವಿಸರ್ಜನೆಗೆ ಕೊಂಡೊಯ್ಯಲಾಯಿತು.