AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೈದರಾಬಾದ್​ನ ಬಾಂಡ್ಲಗುಡ ಗಣೇಶ ಲಡ್ಡು 1.26 ಕೋಟಿ ರೂ.ಗೆ ಹರಾಜು!

ಕಳೆದ ವರ್ಷದ ಹರಾಜಿನಲ್ಲಿ ಬಾಂಡ್ಲಗುಡ ಗಣೇಶ ಲಡ್ಡು 60.08 ಲಕ್ಷ ರೂ.ಗೆ ಮಾರಾಟವಾಗಿತ್ತು. ಈ ಬಾರಿ 1.26 ಕೋಟಿ ರೂ.ಗೆ ಹರಾಜಾಗುವ ಮೂಲಕ ಅತ್ಯಂತ ದುಬಾರಿ ಲಡ್ಡು ಎನಿಸಿಕೊಂಡಿದೆ. ಬಾಂಡ್ಲಗುಡ ಗಣೇಶ ಲಡ್ಡು 12 ಕೆ.ಜಿ ಇರುತ್ತದೆ.

ಹೈದರಾಬಾದ್​ನ ಬಾಂಡ್ಲಗುಡ ಗಣೇಶ ಲಡ್ಡು 1.26 ಕೋಟಿ ರೂ.ಗೆ ಹರಾಜು!
ಬಾಂಡ್ಲಗುಡ ಲಡ್ಡು
ಸುಷ್ಮಾ ಚಕ್ರೆ
|

Updated on: Sep 28, 2023 | 6:18 PM

Share

ಹೈದರಾಬಾದ್: ತೆಲಂಗಾಣದ ಬಾಂಡ್ಲಗುಡದ ಕೀರ್ತಿ ರಿಚ್ಮಂಡ್ ವಿಲ್ಲಾಸ್‌ನ ಗಣಪತಿಯ ಲಡ್ಡುಗೆ ಪ್ರತಿವರ್ಷ ಭಾರೀ ಬೇಡಿಕೆ ಇರುತ್ತದೆ. ಈ ವಿಶೇಷ ಲಡ್ಡುವನ್ನು ಈ ಬಾರಿಯೂ ಇಂದು ಹರಾಜು ಹಾಕಲಾಗಿದ್ದು, ದಾಖಲೆಯ 1.26 ಕೋಟಿ ರೂ.ಗೆ ಮಾರಾಟವಾಗುವ ಮೂಲಕ ಈ ಲಡ್ಡು ಹೊಸ ದಾಖಲೆ ನಿರ್ಮಿಸಿದೆ. ಈ ಹಿನ್ನೆಲೆಯಲ್ಲಿ ಹೈದರಾಬಾದ್‌ನ ಐಕಾನಿಕ್ ‘ಬಾಳಾಪುರ್ ಗಣೇಶ್ ಲಡ್ಡು’ಗಿದ್ದ ಅತ್ಯಂತ ದುಬಾರಿ ಲಡ್ಡು ಎಂಬ ಪಟ್ಟ ಈಗ ಬಾಂಡ್ಲಗುಡದ ಗಣೇಶ ಲಡ್ಡುವಿಗೆ ಸಿಕ್ಕಿದೆ.

ತೆಲುಗು ರಾಜ್ಯಗಳಲ್ಲಿ ಅತಿ ಹೆಚ್ಚು ಬೆಲೆಗೆ ಹರಾಜಾದ ಲಡ್ಡು ಇದೆಂದು ಹೇಳಲಾಗುತ್ತಿದೆ. ಕೀರ್ತಿ ರಿಚ್ಮಂಡ್ ವಿಲ್ಲಾಸ್ ನಿವಾಸಿಗಳು ಒಟ್ಟಾಗಿ ಈ ಲಡ್ಡುವನ್ನು ಖರೀದಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಕಳೆದ ವರ್ಷದ ಹರಾಜಿನಲ್ಲಿ ಬಾಂಡ್ಲಗುಡ ಲಡ್ಡು 60.08 ಲಕ್ಷ ರೂ.ಗೆ ಮಾರಾಟವಾಗಿತ್ತು. ಈ ಲಡ್ಡುವಿನ ಹರಾಜಿನಿಂದ ಬರುವ ಆದಾಯವನ್ನು ದತ್ತಿ ಉದ್ದೇಶಗಳಿಗೆ ಮೀಸಲಿಡಲಾಗುವುದು ಎಂದು ರಿಚ್ಮಂಡ್ ವಿಲ್ಲಾಸ್ ನಿವಾಸಿಗಳು ಹೇಳುತ್ತಾರೆ. ವಿವಿಧ ಕಲ್ಯಾಣ ಚಟುವಟಿಕೆಗಳಲ್ಲಿ ತೊಡಗಿರುವ ಸ್ವಯಂಸೇವಾ ಸಂಸ್ಥೆಗಳನ್ನು ಬೆಂಬಲಿಸಲು ಈ ಹಣವನ್ನು ವಿನಿಯೋಗಿಸಲಾಗುತ್ತದೆ.

ಇದನ್ನೂ ಓದಿ: Viral Video: ಗಣೇಶೋತ್ಸವ ಮೆರವಣಿಗೆಯಲ್ಲಿ ಬುರ್ಖಾ ಧರಿಸಿ ನೃತ್ಯ; ತಮಿಳುನಾಡಿನ ವ್ಯಕ್ತಿಯ ಬಂಧನ

ಈ ವರ್ಷದ ಬಾಳಾಪುರ ಗಣೇಶ ಲಡ್ಡು 27 ಲಕ್ಷ ರೂ.ಗೆ ತುರ್ಕಯಾಮಜಲ್ ಗ್ರಾಮದ ನಿವಾಸಿ ದಾಸರಿ ದಯಾನಂದ ರೆಡ್ಡಿ ಅವರಿಗೆ ಮಾರಾಟವಾಗಿದೆ. ಬಾಂಡ್ಲಗುಡ ಗಣೇಶ ಲಡ್ಡು 12 ಕೆ.ಜಿ ಇರುತ್ತದೆ. ಬಾಳಾಪುರದ ಗಣಪತಿ ಲಡ್ಡು 21 ಕೆ.ಜಿಯ ಲಡ್ಡುವಾಗಿದೆ.

ಪ್ರತಿ ವರ್ಷ ಗಣೇಶ ಚತುರ್ಥಿಯ ಸಮಯದಲ್ಲಿ ರಿಚ್‌ಮಂಡ್‌ ವಿಲ್ಲಾಸ್‌ ನಿವಾಸಿಗಳು ಗಣಪತಿಯ ಕೈನಲ್ಲಿ ಇರಿಸಲಾದ ಲಡ್ಡುವಿನ ಹರಾಜು ಪ್ರಕ್ರಿಯೆ ನಡೆಸುತ್ತಾರೆ. 1994ರಿಂದ ಹರಾಜು ಪದ್ಧತಿ ಜಾರಿಯಲ್ಲಿದೆ. ಬಾಳಾಪುರ ಗಣೇಶ ಲಡ್ಡು ಹರಾಜು ಪ್ರಕ್ರಿಯೆ 1994ರಿಂದ ನಡೆಯುತ್ತಿದೆ. ಬಾಳಾಪುರ ಗಣೇಶ ಉತ್ಸವ ಸಮಿತಿ ಇದರ ನೇತೃತ್ವ ವಹಿಸುತ್ತದೆ. ಹರಾಜಿನಿಂದ ಬಂದ ಹಣವನ್ನು ಗಣೇಶ ಉತ್ಸವ ಸಮಿತಿಯು ವಿವಿಧ ಅಭಿವೃದ್ಧಿ ಚಟುವಟಿಕೆಗಳಲ್ಲಿ ತೊಡಗಿರುವ ಸ್ವಯಂಸೇವಾ ಸಂಸ್ಥೆಗಳಿಗೆ ನೀಡುತ್ತದೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿಂದು ಹಿಂದೂ ಮಹಾಸಭಾ ಗಣೇಶ ಮೂರ್ತಿ ವಿಸರ್ಜನೆ: ಫುಲ್​ ಪೊಲೀಸ್ ಬಂದೋಬಸ್ತ್

ಬಾಳಾಪುರ ಗಣೇಶ ಲಡ್ಡುವಿನ ಮೊದಲು ಹರಾಜು ಪ್ರಕ್ರಿಯೆಯಲ್ಲಿ ಈ ಲಡ್ಡು 450 ರೂ.ಗೆ ಮಾರಾಟವಾಗಿತ್ತು. 2021ರಲ್ಲಿ ಬಾಳಾಪುರ ಗಣೇಶ ಲಡ್ಡು 18.90 ಲಕ್ಷಕ್ಕೆ ಹರಾಜಾಗಿತ್ತು. 2020ರಲ್ಲಿ ಕೊವಿಡ್​ನಿಂದಾಗಿ ಗಣೇಶ ಉತ್ಸವ ನಡೆದಿರಲಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ