ಶಿವಮೊಗ್ಗದಲ್ಲಿಂದು ಹಿಂದೂ ಮಹಾಸಭಾ ಗಣೇಶ ಮೂರ್ತಿ ವಿಸರ್ಜನೆ: ಫುಲ್​ ಪೊಲೀಸ್ ಬಂದೋಬಸ್ತ್

ಶಿವಮೊಗ್ಗದ ಹಿಂದೂ ಮಹಾಸಭಾ ಗಣೇಶ್ ನಿಗೆ ಗಲಾಟೆ ಗಣೇಶ್ ಎಂದೇ ಪ್ರಖ್ಯಾತಿ ಹೊಂಡಿದೆ. ಐತಿಹಾಸಿಕ ಹಿಂದೂ ಮಹಾಸಭಾ ಸಂಘಟನೆಯ ಗಣಪತಿಯ ವಿಸರ್ಜನಾ ಪೂರ್ವ ಮೆರವಣಿಗೆ ನಾಳೆ ನಡೆಯಲಿದೆ. ಗಣಪತಿ ವಿಸರ್ಜನೆ ಹಿನ್ನೆಲೆಯಲ್ಲಿ ಇಡೀ ಶಿವಮೊಗ್ಗ ಸಂಪೂರ್ಣ ಕೇಸರಿಮಯವಾಗಿದ್ದು, ಮೆರವಣಿಗೆ ಸಾಗುವ ಮಹಾದ್ವಾರದಲ್ಲಿ 35 ಅಡಿ ಎತ್ತರದ ಉಗ್ರ ನರಸಿಂಹ ರಾರಾಜಿಸುತ್ತಿದ್ದರೆ, ಇತ್ತ ವಿವಾದಕ್ಕೆ ಕಾರಣವಾಗಿದ್ದ ವಿಷಯಗಳೇ ಇಲ್ಲಿ ಹೈಲೈಟ್ಸ್ ಮಾಡಲಾಗಿದೆ. ಅದೇನು? ಹೇಗಿದೆ ಕೇಸರಿಮಯ ಶಿವಮೊಗ್ಗ ಅಂತೀರಾ? ಇಲ್ಲಿದೆ ನೋಡಿ.

ಶಿವಮೊಗ್ಗದಲ್ಲಿಂದು ಹಿಂದೂ ಮಹಾಸಭಾ ಗಣೇಶ ಮೂರ್ತಿ ವಿಸರ್ಜನೆ: ಫುಲ್​ ಪೊಲೀಸ್ ಬಂದೋಬಸ್ತ್
ಶಿವಮೊಗ್ಗ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Sep 28, 2023 | 7:23 AM

ಶಿವಮೊಗ್ಗ, ಸೆ.28: ದೇಶಾದ್ಯಂತ ಅದ್ದೂರಿ ಗಣೇಶೋತ್ಸವ ನಡೆದಿದ್ದು, ಅದರಂತೆ ಇಂದು(ಸೆ.28) ಶಿವಮೊಗ್ಗ ಹಿಂದೂ ಮಹಾಸಭಾ ಗಣೇಶ(Hindu Mahasabha Ganapati) ಮೂರ್ತಿ ವಿಸರ್ಜನೆ ನೆರವೇರಲಿದೆ. ಈ ಹಿನ್ನಲೆ ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ(Shivamogga) ನಗರದಲ್ಲಿ ಪೊಲೀಸರು ಪಥಸಂಚಲನ ನಡೆಸಿದ್ದಾರೆ. ಹೌದು, ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ಸಂದರ್ಭದಲ್ಲಿ ಹಲವಾರು ಬಾರಿ ಅಹಿತಕರ ಘಟನೆಗಳು ನಡೆದಿರುವ ಉದಾಹರಣೆಯಿದ್ದು, ಎಂದಿನಂತೆಯೇ, ಈ ಗಣಪತಿ ರಾಜಬೀದಿ ಉತ್ಸವವನ್ನು ಜಿಲ್ಲಾ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ನಗರದ ಕೋಟೆ ಭೀಮೇಶ್ವರ ದೇವಾಲಯದಲ್ಲಿ ಸುಂದರ ಮತ್ತು ಸರಳವಾಗಿ ಪ್ರತಿಷ್ಟಾಪಿಸಲಾಗಿರುವ ಈ ಗಣಪತಿ ನೋಡಲು ಬಹಳ ಶಾಂತವಾಗಿ ಕುಳಿತಿದೆ. ಆದರೆ, ಇದೇ ಗಣಪತಿ ವಿಸರ್ಜನಾ ಸಂದರ್ಭದಲ್ಲಿ ಮಾತ್ರ ಅಷ್ಟೇ ಜನಜಂಗುಳಿ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿರುತ್ತದೆ.

ಈ ಹಿನ್ನೆಲೆಯಲ್ಲಿ, ಜಿಲ್ಲಾ ಪೊಲೀಸ್ ಇಲಾಖೆ, ಈ ಬಾರಿಯೂ, ಸಕಲ ರೀತಿಯಲ್ಲಿಯೂ ಬಂದೋಬಸ್ತ್ ವ್ಯವಸ್ಥೆ ಮಾಡಿದೆ. ಮೆರವಣಿಗೆ ಶಾಂತ ರೀತಿಯಿಂದ ಸಾಗಲು ಹಲವಾರು ಸಂಘಟನೆಗಳಿಗೆ ಮತ್ತು ನಗರದ ಮುಖಂಡರಿಗೆ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಮನವಿ ಸಹ ಮಾಡಿಕೊಂಡಿದೆ. ಇಡೀ ರಾಜ್ಯವೇ ಶಿವಮೊಗ್ಗ ಹಿಂದೂ ಮಹಾಸಭಾ ಗಣೇಶನ ವಿಸರ್ಜನೆ ಮೆರವಣಿಗೆಗೆ ಕಾತುರದಿಂದ ಕಾಯುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಶಿವಮೊಗ್ಗ ಸೇರಿದಂತೆ ಸುತ್ತುಮತ್ತಲಿನ ಜಿಲ್ಲೆಯಲ್ಲಿ ಜನ ಸಾಗರವು ವಿಸರ್ಜನೆ ಮೆರವಣಿಗೆಯಲ್ಲಿ ಹರಿದು ಬರುತ್ತದೆ. ಇಂದು ವಿಸರ್ಜನಾ ಮೆರವಣಿಗೆಯು ಯಾವುದೇ ಅಹಿತಕರ ಘಟನೆ ನಡೆಯದಂತೆ. ಶಾಂತಿಯಿಂದ ನೆರವೇರಿಸುವುದೇ ಪೊಲೀಸ್ ಇಲಾಖೆಗೆ ಈಗ ಬಹುದೊಡ್ಡ ಸವಾಲು. ಈ ಹಿನ್ನೆಲೆಯಲ್ಲಿ ಇಂದಿನ ವಿಸರ್ಜನಾ ಮೆರವಣಿಗೆಗೆ ನಗರದ ಪೂರ್ಣ ಖಾಕಿ ಕೋಟೆ ನಿರ್ಮಾಣವಾಗಿದೆ.

ಇದನ್ನೂ ಓದಿ:ನಾವು ಯಾರಿಗೂ ಕಮ್ಮಿ ಇಲ್ಲ: ಗಣೇಶ ವಿಸರ್ಜನೆ ವೇಳೆ ಭರ್ಜರಿ ಡ್ಯಾನ್ಸ್​ ಮಾಡಿದ ಪೊಲೀಸರು

ಶಿವಮೊಗ್ಗ ನಗರದ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ಬಂದೋಬಸ್ತ್

ಹೌದು, ಶಿವಮೊಗ್ಗದ ಗಲಾಟೆ ಗಣಪತಿ ಎಂದೇ ಪ್ರಖ್ಯಾತಿ ಹೊಂದಿರುವ ಹಿಂದು‌ ಮಹಾಸಭಾ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ಶಾಂತಿಯುತವಾಗಿ ಸಾಗಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, 05 ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 14 ಪೊಲೀಸ್ ಉಪಾಧೀಕ್ಷಕರು, 40 ಪೋಲಿಸ್ ನಿರೀಕ್ಷಕರು, 75 ಪೊಲೀಸ್ ಉಪನಿರೀಕ್ಷಕರು, 2,500 ಎಎಸ್ಐ, ಹೆಚ್.ಸಿ, ಪಿಸಿ ಮತ್ತು ಹೋಂ ಗಾರ್ಡ್ ಸಿಬ್ಬಂದಿಗಳು, 10 ಡಿಎಆರ್ ತುಕಡಿ, 15 ಕೆಎಸ್ಆರ್.ಪಿ ತುಕಡಿ, 02 ಆರ್.ಎ.ಎಫ್ ಕಂಪನಿಗಳು 100 ವಿಡಿಯೋ ಕ್ಯಾಮರಾಗಳು ಮತ್ತು 08 ಡ್ರೋಣ್ ಕ್ಯಾಮರ್. ಮೆರವಣಿಗೆ ಮಾರ್ಗ ಮತ್ತು ಪ್ರಮುಖ ಸ್ಥಳಗಳಲ್ಲಿ 500 ಕ್ಕೂ ಹೆಚ್ಚು ಸಿಸಿ ಟಿವಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ.

ಜೊತೆಗೆ ನಗರದಲ್ಲಿ ಎಸ್ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ಪೊಲೀಸ್ ರು ಮತ್ತು ಅಧಿಕಾರಿಗಳು ರೂಟ್ ಮಾರ್ಚ್ ಮಾಡುವ ಮೂಲಕ  ಹಿಂದೂ ಮಹಾಸಭಾ ಗಣೇಶ್ ನ ವಿಸರ್ಜನೆ ಹಬ್ಬ ಶಾಂತಿ ಮತ್ತು ಸೌಹಾರ್ಧತೆಯಿಂದ ಆಚರಿಸಬೇಕು. ಈ ಹಿನ್ನಲೆಯಲ್ಲಿ ಅನಗತ್ಯವಾಗಿ ಯಾರು ಭಯಪಡಬಾರದರು. ಪೊಲೀಸರು ಎಲ್ಲ ಪರಿಸ್ಥಿತಿ ನಿಯಂತ್ರಿಸಲು ಸಮರ್ಥವಾಗಿದ್ದರೆನ್ನುವ ಸಂದೇಶ ರೂಟ್ ಮಾರ್ಚ್ ಮೂಲಕ ಶಿವಮೊಗ್ಗ ಎಸ್ಪಿ ನೀಡಿದ್ದಾರೆ.

ಇದನ್ನೂ ಓದಿ:ಶಿವಮೊಗ್ಗ: ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಮಸೀದಿ ಮುಂದೆ ಪಟಾಕಿ ಸಿಡಿಸಿದ ಯುವಕರು, ಗಲಾಟೆ

ಸಂಪೂರ್ಣ ಕೇಸರಿಮಯವಾದ ಶಿವಮೊಗ್ಗ

ಇನ್ನು ಗಣಪತಿ ವಿಸರ್ಜನೆ ಹಿನ್ನೆಲೆಯಲ್ಲಿ ಶಿವಮೊಗ್ಗ ಸಂಪೂರ್ಣ ಕೇಸರಿಮಯ ಮಾಡಲಾಗಿದೆ. ನಗರದ ಗಾಂಧಿ ಬಜಾರ್ ನಲ್ಲಿ 30 ಅಡಿ ಎತ್ತರದ ಉಗ್ರ ನರಸಿಂಹ ಸ್ವಾಮಿ ಪ್ರತಿಕೃತಿಯ ಮಹಾದ್ವಾರ ನಿರ್ಮಿಸಲಾಗಿದೆ. ಕ್ರೇನ್ ಮೂಲಕ ಪ್ರತಿಕೃತಿ ಅಳವಡಿಸಲಾಗಿದ್ದು, ಕೋಟೆ ರಸ್ತೆ, ರಾಮಣ್ಣ ಶ್ರೇಷ್ಟಿ ಪಾರ್ಕ್, ಗಾಂಧಿ ಬಜಾರ್, ನೆಹರೂ ರಸ್ತೆಯಲ್ಲಿ ಅಲಂಕಾರ ಮಾಡಲಾಗಿದೆ. ಎಲ್ಲೆಡೆ ಕೇಸರಿ ಬಂಟಿಂಗ್ಸ್, ಕಟೌಟ್ ಹಾಗೂ ತೋರಣಗಳನ್ನು ಅಳವಡಿಸಲಾಗಿದ್ದು, ಇವೆಲ್ಲವೂ ಜನಾಕರ್ಷಣೆಯ ಕೇಂದ್ರ ಬಿಂದುವಾಗಿದೆ. ಅಷ್ಟೇ ಅಲ್ಲ, ಶಿವಪ್ಪನಾಯಕ ಪ್ರತಿಮೆ ಬಳಿ ಶ್ರೀರಾಮ, ಆಂಜನೇಯ ಹಾಗೂ ಶಿವಾಜಿ ಮಹಾರಾಜ ಪ್ರತಿಮೆ ನಿಲ್ಲಿಸಲಾಗಿದ್ದು, ಅದರಲ್ಲೂ, ಚಂದ್ರಯಾನ-3 ರ ರಾಕೇಟ್ ಪ್ರತಿಕೃತಿ ಹಾಗೂ ವಿಕ್ರಮ್ ಲ್ಯಾಂಡರ್ ಹಾಗೂ ರೋವರ್ ಪ್ರತಿಕೃತಿಗಳು, ಸ್ವಾತಂತ್ರ ಸಂಗ್ರಾಮದಲ್ಲಿ ಭಾಗವಹಿಸಿದ್ದ ವೀರ ಹೋರಾಟಗಾರರ ಭಾವಚಿತ್ರಗಳು ಕಣ್ಮನ ಸೆಳೆಯುತ್ತಿವೆ.  ಅದರಂತೆ ಇಂದು ಖಾಕಿ ಭದ್ರ ಕೋಟೆಯಲ್ಲಿ ಹಿಂದೂ ಮಹಾಸಭಾ ಗಣೇಶನ ಅದ್ಧೂರಿ ವಿಸರ್ಜನಾ ಮೆರಣಿಗೆಯು ನಡೆಯಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:23 am, Thu, 28 September 23