ತುಮಕೂರು ಶೆಟ್ಟಪ್ಪನಹಳ್ಳಿಯಲ್ಲಿ ಗಣೇಶ ವಿಸರ್ಜನೆ ವೇಳೆ ಪ್ರಸಾದ ಸೇವಿಸಿದ್ದ 25ಕ್ಕೂ ಹೆಚ್ಚು ಜನ ಅಸ್ವಸ್ಥ
ಜಯಲಕ್ಷ್ಮೀ, ಬೋರಮ್ಮ, ಭೈರಪ್ಪ, ಗಂಗಮ್ಮ, ನಂಜಮ್ಮಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ 20ಕ್ಕೂ ಹೆಚ್ಚು ಮಂದಿ ಅಸ್ವಸ್ಥರಿಗೆ ಗೂಳೂರು ಪಿಹೆಚ್ಸಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ತುಮಕೂರು, ಸೆಪ್ಟೆಂಬರ್ 26: ಕಲುಷಿತ ಆಹಾರ ಸೇವಿಸಿ 25ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡ ಘಟನೆ ತುಮಕೂರು (Tumkur) ತಾಲೂಕಿನ ಶೆಟ್ಟಪ್ಪನಹಳ್ಳಿಯಲ್ಲಿ (Shettappanahalli) ನಡೆದಿದೆ. ವಾಂತಿ ಭೇದಿಯಿಂದ ಬಳಲುತ್ತಿರುವ 25ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾನುವಾರ ಗಣೇಶ ವಿಸರ್ಜನೆ ವೇಳೆ ಪ್ರಸಾದ ಸೇವಿಸಿದ್ದ ಗ್ರಾಮಸ್ಥರು ಅಸ್ವಸ್ಥಗೊಂಡಿದ್ದಾರೆ. ತೀವ್ರ ಅಸ್ವಸ್ಥರಾಗಿರುವ ಐವರಿಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಯಲಕ್ಷ್ಮೀ, ಬೋರಮ್ಮ, ಭೈರಪ್ಪ, ಗಂಗಮ್ಮ, ನಂಜಮ್ಮಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಉಳಿದ 20ಕ್ಕೂ ಹೆಚ್ಚು ಮಂದಿ ಅಸ್ವಸ್ಥರಿಗೆ ಗೂಳೂರು ಪಿಹೆಚ್ಸಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ತುಮಕೂರು ಬಳಿ ಭೀಕರ ಅಪಘಾತ: ಸ್ಥಳದಲ್ಲೇ ಮೂವರು ಸಾವು, ಕಾರು ನಜ್ಜುಗುಜ್ಜು
ಲಾರಿ, ಕಾರು ಡಿಕ್ಕಿ: ಮೂವರ ಸಾವು
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಬಳಿ ಲಾರಿ ಹಾಗೂ ಕಾರು ಡಿಕ್ಕಿಯಾಗಿ ಮೂವರು ಮೃತಪಟ್ಟಿದ್ದಾರೆ. ಆಕಾಶ್ 20, ಹೇಮಂತ್ 28, ಶಿವಕುಮಾರ್ ಮೃತರು ಎಂದು ಗುರುತಿಸಲಾಗಿದೆ. ಕಾರು ಬೆಂಗಳೂರಿನಿಂದ ಪಾವಗಡ ಕಡೆ ತೆರಳುವಾಗ ಪಾವಗಡದಿಂದ ತುಮಕೂರು ಕಡೆ ಬರುತ್ತಿದ್ದ ಲಾರಿಗೆ ಮುಖಾಮುಖಿ ಡಿಕ್ಕಿಯಾಗಿದೆ. ಗಾಯಾಳುಗಳನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ರಾಜ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 4:32 pm, Tue, 26 September 23