ತುಮಕೂರು: ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ; ಇಬ್ಬರು ಸವಾರರು ದುರ್ಮರಣ
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಮಂಗಳವಾಡ ಗ್ರಾಮದಲ್ಲಿ ನಡೆದಿದೆ. ಕೋಟಬಂಡೆ ಗ್ರಾಮದ ಈಶ್ವರಪ್ಪ(36) ಹಾಗೂ ನಾಗರಾಜು(42) ಮೃತ ರ್ದುದೈವಿಗಳು. ಇನ್ನು ಮತ್ತೋರ್ವ ವ್ಯಕ್ತಿ ದರ್ಶನ್(28) ಎಂಬಾತನಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.
ತುಮಕೂರು, ಸೆ.27: ಬೈಕ್ಗಳ ನಡುವೆ ಡಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತುಮಕೂರು(Tumakuru) ಜಿಲ್ಲೆಯ ಪಾವಗಡ ತಾಲೂಕಿನ ಮಂಗಳವಾಡ ಗ್ರಾಮದಲ್ಲಿ ನಡೆದಿದೆ. ಕೋಟಬಂಡೆ ಗ್ರಾಮದ ಈಶ್ವರಪ್ಪ(36) ಹಾಗೂ ನಾಗರಾಜು(42) ಮೃತ ರ್ದುದೈವಿಗಳು. ಇನ್ನು ಮತ್ತೋರ್ವ ವ್ಯಕ್ತಿ ದರ್ಶನ್(28) ಎಂಬಾತನಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಗೌರಸಂದ್ರ ಮಾರಮ್ಮ ಜಾತ್ರೆ ಮುಗಿಸಿ ಹಿಂದಿರುಗುವಾಗ ಈ ಅಪಘಾತ ಸಂಭವಿಸಿದೆ. ಈ ಕುರಿತು ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಕಾಲೇಜು ವಿದ್ಯಾರ್ಥಿಗಳ ಕಾರು ಅಪಘಾತ
ಆನೇಕಲ್: ಕಾಲೇಜು ವಿದ್ಯಾರ್ಥಿಗಳ ಕಾರು ಅಪಘಾತಕ್ಕೀಡಾದ ಘಟನೆ ಆನೇಕಲ್- ಚಂದಾಪುರ ಮುಖ್ಯರಸ್ತೆಯ ಕರ್ಪೂರ್ ಗೇಟ್ ಬಳಿ ನಡೆದಿದೆ. ಬೆಂಗಳೂರು ಹೊರವಲಯದ ಆನೇಕಲ್ ಅಲಯನ್ಸ್ ಕಾಲೇಜಿನ LLB ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು, ಬೆಳಿಗ್ಗೆ ಕಾಲೇಜಿಗೆ ಬರುವಾಗ ಈ ದುರ್ಘಟನೆ ನಡೆದಿದೆ. ಇನ್ನು ಓವರ್ ಸ್ವೀಡ್ನಿಂದಾಗಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದ್ದು, ರಸ್ತೆ ಪಕ್ಕದಲ್ಲಿದ್ದ ಮಣ್ಣು ಗುಡ್ಡೆ ಎಗರಿಸಿ ಕಾರು ಪಲ್ಟಿಯಾಗಿ ಮರಕ್ಕೆ ಡಿಕ್ಕಿ ಹೊಡೆದಿದೆ.
ಐವರ ಪೈಕಿ ಓರ್ವನಿಗೆ ಗಂಭೀರ ಗಾಯ
ಇನ್ನು ಕಾರಿನಲ್ಲಿದ್ದ ಐವರು ವಿದ್ಯಾರ್ಥಿಗಳ ಪೈಕಿ ಓರ್ವನಿಗೆ ಗಂಭೀರ ಗಾಯಗಳಾಗಿದ್ದು, ನಾಲ್ಕು ಮಂದಿ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಿಂದ ಪರಾಗಿದ್ದಾರೆ. ಇನ್ನು ಅಪಘಾತ ನಡೆಯುತ್ತಿದ್ದಂತೆ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಕೇರಳ ಮೂಲದ ಟೊಯೋಟೊ ಇಟಿಯೋಸ್ ಕಾರು ಇದಾಗಿದ್ದು, ಸ್ಥಳಕ್ಕೆ ಆನೇಕಲ್ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ