Monday Blues: ರೆಮಾ ಹಾಗೂ ಸೆಲೆನಾ ಗೋಮೆಝ್ ಎಂಬ ಪಾಪ್ ಹಾಡುಗಾರರ ‘ಕಾಮ್ ಡೌನ್’ (Calm Down) ಕೇಳದೇ ಇದ್ದವರು ವಿರಳ. ಕೇಳಿದವರೆಲ್ಲರನ್ನೂ ಕುಣಿತಕ್ಕೆ ಹಚ್ಚುವಷ್ಟು ಆಕರ್ಷಣೆ ಈ ಹಾಡಿಗಿದೆ. ನಿಮ್ಮ ಮನೆಯಲ್ಲಿ ಮಕ್ಕಳಿದ್ದರಂತೂ ಅವುಗಳು ಈ ಹಾಡಿಗೆ ಕುಣಿಯುತ್ತ ಹುಚ್ಚೆಬ್ಬಿಸುತ್ತಿರುತ್ತವೆ. ಇದೀಗ ಶ್ರೀಯಾ ಎಂಬ ನೃತ್ಯ ಕಲಾವಿದೆ, ರೂಪದರ್ಶಿ, ‘ನಾನು ಬೆಲ್ಲಿ ಡಾನ್ಸ್ ಮಾಡಿದಾಗಲೆಲ್ಲ ಶಾಂತಗೊಳ್ಳುತ್ತೇನೆ’ ಎಂದು ಹೇಳಿ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ಧಾರೆ. ನೋಡಿ ಈ ಕೆಳಗಿನ ವಿಡಿಯೋ.
ಅನೇಕರು ತಮ್ಮತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸಿ ಮರುನಿರೂಪಿಸಿರುವ ಈ ಕಾಮ್ ಡೌನ್ ಹಾಡಿಗೆ ಶ್ರೀಯಾ ಹೀಗೆ ನರ್ತಿಸುವ ಮೂಲಕ ಈ ‘ಶಾಂತಸಾಗರ’ಕ್ಕೆ ತಮ್ಮದೂ ಒಂದು ಬಿಂದು ಸೇರಿಸಿದ್ಧಾರೆ. ಕಳೆದ ಎರಡು ತಿಂಗಳಲ್ಲಿ ಶ್ರೀಯಾ ಅವರ ಈ ವಿಡಿಯೋವನ್ನು 2 ಮಿಲಿಯನ್ನಷ್ಟು ಜನರು ನೋಡಿ ಮರುಳಾಗಿದ್ದಾರೆ. ಆಹಾ ಏನು ಅದ್ಭುತ!, ಎಷ್ಟು ಛದ!, ವಾವ್! ನಾನಿದನ್ನು ಬಿಟ್ಟೂಬಿಡದೆ ನೋಡಬಲ್ಲೆ, ಅಷ್ಟು ಚೆನ್ನಾಗಿದೆ, ಇದೇ ಮೊದಲಾಗಿ ನೆಟ್ಟಿಗರು ಉದ್ಗರಿಸಿದ್ದಾರೆ.
ಇದನ್ನೂ ಓದಿ : Viral Video: ಬಸ್ಸಿನಲ್ಲಿ ಬಿಸಿಬಿಸಿ ಕಜ್ಜಾಯ ತಿಂದ ಪೋಲಿ; ಮಂಡ್ಯದ ಮಹಿಳೆಗೆ ಭಲೇ ಎಂದ ನೆಟ್ಟಿಗರು
ಶ್ರೀಯಾ ಅವರಿಗೆ ಬೆಲ್ಲಿ ಡ್ಯಾನ್ಸ್ ಹಾದಿ ತೋರಿಸಿದಂತೆ ಮನಸ್ಸನ್ನು ನಿರಾಳಗೊಳಿಸಿಕೊಳ್ಳಲು ನೀವು ಕಂಡುಕೊಂಡಿರುವ ಮಾರ್ಗ ಯಾವುದು? ಯಾವ ಆಚರಣೆಗಳು ಅಥವಾ ಹವ್ಯಾಸಗಳು ನಿಮ್ಮ ಮನಸನ್ನು ಮುದಗೊಳಿಸುತ್ತವೆ? ವಿಶೇಷವಾಗಿ ವಾರಾಂತ್ಯದ ಸುಖದ ನಂತರ ಬರುವ ಮಂಡೇಯಂದು (Monday) ಹೇಗೆ ಮಂಡೆ ಬಿಸಿ ಇಳಿಸಿಕೊಳ್ಳುತ್ತೀರಿ?
ಸದ್ಯಕ್ಕಂತೂ ಶ್ರೀಯಾರ ಬೆಲ್ಲಿ ಡ್ಯಾನ್ಸ್ ನೋಡಿ ಚಿಯರ್ ಅಪ್ ಆಗಿ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:36 am, Mon, 5 June 23