ಕೆಲವೊಮ್ಮೆ ಕೆಲವು ಹೃದಯಸ್ಪರ್ಶಿ ಸನ್ನಿವೇಷಗಳು ನಮ್ಮ ನೋವಿನ ದಿನಗಳನ್ನು ನೆನಪಿಸಿಬಿಡುತ್ತವೆ. ಬದುಕಿನಲ್ಲಿ ಮರೆಯಲಾಗದ ಅಹಿತಕರ ಘಟನೆಗಳ ಪುಟ ತಿರುವಿಕೊಂಡು ಯೋಚನೆಗೆ ಬೀಳುವಂತೆ ಮಾಡುತ್ತದೆ. ಅದು ಆತ್ಮೀಯರ, ನಮ್ಮವರೆಂದುಕೊಂಡವರ ಮರಣವಿರಬಹುದು, ಅಂತ್ಯಕ್ರಿಯೆ ಅಥವಾ ಬದುಕಿನ ಪಯಣ ಮುಗಿಸಿದವರ ಅಂತಿಮಯಾತ್ರೆಯ ಮೆರವಣಿಗೆಯ ದೃಶ್ಯಗಳಿರಬಹುದು. ಅಂತಹ ಸನ್ನಿವೇಶ ಮತ್ತೆ ಎದುರಾದರೆ ಬೇಡವೆಂದರೂ ಕಣ್ಣಾಲಿಯಲ್ಲಿ ನೀರನ್ನು ತುಂಬುತ್ತದೆ. ಇಲ್ಲೊಂದು ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಐಸ್ ಕ್ರೀಮ್ ಟ್ರಕ್ಗಳು ತಮ್ಮ ಜತೆ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಮೆರವಣಿಗೆ ಮೂಲಕ ಕರೆದೊಯ್ದು ವಿದಾಯ ಹೇಳುವ ವೀಡಿಯೋ ವೈರಲ್ ಆಗಿದೆ.
ದಕ್ಷಿಣ ಲಂಡನ್ ನ ಲೂಯಿಸಾ ಡೇವಿಸ್ ಎನ್ನುವವರು ವ್ಯಕ್ತಿಯೊಬ್ಬರ ಅಂತಿಮ ಯಾತ್ರೆಯ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ವೀಡಿಯೋ ಜತೆಗೆ ಅದರ ಬಗ್ಗೆ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ. ನಾನು ಬೆಳಗ್ಗೆ ವಿಚಿತ್ರ ಶಬ್ದಗಳಿಂದ ಎಚ್ಚರಗೊಂಡೆ. ಕಿಟಕಿಯಲ್ಲಿ ನೋಡಿದಾಗ ಸಾಲು ಸಾಲು ಐಸ್ಕ್ರೀಮ್ ಗಾಡಿಗಳು ಸಾಗುತ್ತಿರುವುದು ಕಾಣಿಸಿತು. ಆಶ್ಚರ್ಯಗೊಂಡೆ, ಬಳಿಕ ತಿಳಿಯಿತು ಈ ಎಲ್ಲಾ ಐಸ್ ಕ್ರೀಮ್ ಗಾಡಿಗಳು ತನ್ನ ಭಾಗವಾಗಿದ್ದ ವ್ಯಕ್ತಿಯ ಅಂತ್ಯಕ್ರಿಯೆಲ್ಲಿ ಭಾಗವಹಿಸುತ್ತಿವೆ ಎನ್ನುವ ವಿಚಾರ. ನನಗೂ ದುಃಖವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.
just witnessed an ice cream man’s funeral and all the ice cream vans came and followed in solidarity I AM SOBBING pic.twitter.com/bJhyJj4JoK
— Louisa Davies (@LouisaD__) December 17, 2021
ಲೂಯಿಸಾ ಅವರ ಭಾವನಾತ್ಮಕ ಪೋಸ್ಟ್ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೋ 13.4 ಮಿಲಿಯನ್ ವೀಕ್ಷಣೆ ಪಡೆದಿದೆ. ಹಲವರು ತಮ್ಮವರನ್ನು ಕಳೆದುಕೊಂಡ ದಿನಗಳನ್ನು ನೆನಪಿಸಿಕೊಂಡು ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ:
Viral : 60ರ ಹರೆಯದ ವೃದ್ಧೆಯ ಬ್ರಾಂಡ್ ಫೋಟೋಶೂಟ್: ವೃದ್ಧೆಯ ಸ್ಟೈಲಿಷ್ ಲುಕ್ಗೆ ನೆಟ್ಟಿಗರು ಫಿದಾ
Published On - 2:40 pm, Tue, 21 December 21