7000 ಪ್ರಯಾಣಿಕರು,40 ರೆಸ್ಟೋರೆಂಟ್​​ಗಳನ್ನು ಒಳಗೊಂಡ ವಿಶ್ವದ ಅತಿ ದೊಡ್ಡ ಹಡಗುಯಾನ ಆರಂಭ

ವಿಶ್ವದ ಅತಿ ದೊಡ್ಡ ಹಡಗು, ಐಕಾನ್ ಆಫ್ ದಿ ಸೀಸ್. ಇದು ರಾಯಲ್ ಕೆರಿಬಿಯನ್ ಗ್ರೂಪ್‌ಗೆ ಸೇರಿದ ದೈತ್ಯ ಹಡಗು. ಈ ಹಡಗಿನಲ್ಲಿ ಒಂದು ಬಾರಿಗೆ 7 ಸಾವಿರದ 100 ಜನರು ಪ್ರಯಾಣಿಸಬಹುದು. ಹಡಗಿನಲ್ಲಿ 7 ಈಜುಕೊಳಗಳು ಮತ್ತು 40 ಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳನ್ನು ಒಳಗೊಂಡಿದೆ.

7000 ಪ್ರಯಾಣಿಕರು,40 ರೆಸ್ಟೋರೆಂಟ್​​ಗಳನ್ನು ಒಳಗೊಂಡ ವಿಶ್ವದ ಅತಿ ದೊಡ್ಡ ಹಡಗುಯಾನ ಆರಂಭ
Icon of the Seas
Image Credit source: Pinterest

Updated on: Jan 31, 2024 | 4:57 PM

ಜಗತ್ತಿನ ಅತಿ ದೊಡ್ಡ ಹಡಗು ಎಂದಾಕ್ಷಣ ಮೊದಲು ನೆನಪಿಗೆ ಬರುವುದು ಟೈಟಾನಿಕ್​​ ಹಡಗು. ಆದ್ರೆ ಅದಕ್ಕಿಂತ 5 ಪಟ್ಟು ದೊಡ್ಡದಾದ ಹಡಗಿನ ಬಗ್ಗೆ ನಿಮಗೆ ತಿಳಿದಿದೆಯಾ? ಸುಮಾರು 40 ರೆಸ್ಟೋರೆಂಟ್‌ಗಳು, 7100 ಜನರ ಆಸನ ಸಾಮರ್ಥ್ಯವನ್ನು ಹೊಂದಿರುವ ವಿಶ್ವದ ಅತಿ ದೊಡ್ಡ ಹಡಗು ಎಂಬ ಖ್ಯಾತಿ ಪಡೆದು ಹಡಗುಯಾನ ಇತ್ತೀಚೆಗಷ್ಟೇ ಆರಂಭವಾಗಿದೆ. ಈ ದೈತ್ಯ ಹಡಗು 1200 ಅಡಿ ಉದ್ದ ಮತ್ತು 20 ಮಹಡಿ ಎತ್ತರದ ಈ ವಿಹಾರ ಎಲ್ಲಾ ಐಷಾರಾಮಿ ಸೌಕರ್ಯಗಳನ್ನು ಹೊಂದಿದ್ದು, ಈಗಾಗಲೇ ಜನವರಿ 27 ರಂದು ಮಿಯಾಮಿ ಬೀಚ್‌ನಿಂದ ತನ್ನ ಮೊದಲ ಪ್ರಯಾಣವನ್ನು ಪ್ರಾರಂಭಿಸಿದೆ.

ವಿಶ್ವದ ಅತಿ ದೊಡ್ಡ ಹಡಗು:

ವಿಶ್ವದ ಅತಿ ದೊಡ್ಡ ಹಡಗು, ಐಕಾನ್ ಆಫ್ ದಿ ಸೀಸ್. ಇದು ರಾಯಲ್ ಕೆರಿಬಿಯನ್ ಗ್ರೂಪ್‌ಗೆ ಸೇರಿದ ದೈತ್ಯ ಹಡಗು. ಈ ಹಡಗಿನಲ್ಲಿ ಒಂದು ಬಾರಿಗೆ 7 ಸಾವಿರದ 100 ಜನರು ಪ್ರಯಾಣಿಸಬಹುದು. ಹಡಗಿನಲ್ಲಿ 7 ಈಜುಕೊಳಗಳು ಮತ್ತು 6 ನೀರಿನ ಸ್ಲೈಡ್‌ಗಳಿವೆ. 40 ಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳನ್ನು ಒಳಗೊಂಡಿದೆ. ಬಾರ್ ಮತ್ತು ಲಾಂಜ್ ಕೂಡ ಇದೆ. ಐಕಾನ್ ಆಫ್ ದಿ ಸೀಸ್ ನಿರ್ಮಿಸಲು 149 ಶತಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಜನವರಿ 27 ರಂದು ಫ್ಲೋರಿಡಾದ ಮಿಯಾಮಿಯಿಂದ ಹಡಗು ತನ್ನ ಮೊದಲ ಪ್ರಯಾಣವನ್ನು ಪ್ರಾರಂಭಿಸಿತು. ಹಡಗು ಕೆರಿಬಿಯನ್ ಸಮುದ್ರದ ವಿವಿಧ ದ್ವೀಪಗಳಿಗೆ ಭೇಟಿ ನೀಡಲಿದೆ. ನೀವು ಈ ವಿಹಾರದಲ್ಲಿ ಪ್ರಯಾಣಿಸಲು ಬಯಸಿದರೆ, ನೀವು 1.5 ಲಕ್ಷದಿಂದ 2.24 ಲಕ್ಷ ರೂಪಾಯಿಗಳ ನಡುವೆ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: ಹೆಂಡತಿಯನ್ನು ಎತ್ತಿಕೊಳ್ಳಲು ಹೋಗಿ ಸೊಂಟ ಮುರಿದುಕೊಂಡ ಗಂಡ; ವಿಡಿಯೋ ವೈರಲ್

ಪರಿಸರವಾದಿಗಳ ವಿರೋಧ:

ಹಡಗು ಅತ್ಯಂತ ಐಷಾರಾಮಿಯಾಗಿದ್ದರೂ, ಇದನ್ನು ಅನೇಕ ಪರಿಸರವಾದಿಗಳು ಟೀಕಿಸಿದ್ದಾರೆ. ಹಡಗು ಎಲ್ಎನ್ಜಿ ಇಂಧನದಿಂದ ಚಲಿಸುತ್ತದೆ ಆದರೆ ಮೀಥೇನ್ ಅನಿಲವನ್ನು ಹೊರಸೂಸುತ್ತದೆ. ಇದರಿಂದ ಪರಿಸರ ಹಾಳಾಗುತ್ತದೆ ಎಂದು ಪರಿಸರವಾದಿಗಳು ಹೇಳುತ್ತಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ