Viral Video: ಸಾವಿನ ದವಡೆಯಿಂದ ಪಾರಾದ ಪೆಂಗ್ವಿನ್, ಇದು ಆತ್ಮವಿಶ್ವಾಸದ ಶಕ್ತಿ 

ದೋಣಿ ಸಾಗಿಸಲು ಹರಿಗೋಲು ಎಷ್ಟು ಮುಖ್ಯವೋ ನಮ್ಮ ಜೀವನ ಸಾಗಿಸಲು ಆತ್ಮವಿಶ್ವಾಸವು ಅಷ್ಟೇ ಮುಖ್ಯ. ಹೌದು ಆತ್ಮವಿಶ್ವಾಸವೊಂದಿದ್ದರೆ, ಜೀವನದಲ್ಲಿ ಬರುವ ಎಂತಹ ಸವಾಲುಗಳನ್ನು ಸಹ ನಾವು ದೈರ್ಯದಿಂದ ಎದುರಿಸಿ, ಅದನ್ನು ಜಯಿಸಲು ಸಾಧ್ಯವಾಗುತ್ತದೆ. ಅದೇ ರೀತಿ ಇಲ್ಲೊಂದು ಪೆಂಗ್ವಿನ್ ಸ್ವಾರ್ಥ  ತುಂಬಿರುವ ಈ ಪ್ರಪಂಚದಲ್ಲಿ ನಮ್ಮ ಬದುಕನ್ನು ಸಾಗಿಸಲು ಆತ್ಮವಿಶ್ವಾಸ ಎಷ್ಟು ಮುಖ್ಯ ಎಂಬ ಜೀವನ ಪಾಠವನ್ನು ಕಲಿಸಿಕೊಟ್ಟಿದೆ. ಈ ಕುರಿತ ವಿಡಿಯೋ ಇಲ್ಲಿದೆ ನೋಡಿ.

Viral Video: ಸಾವಿನ ದವಡೆಯಿಂದ ಪಾರಾದ ಪೆಂಗ್ವಿನ್, ಇದು ಆತ್ಮವಿಶ್ವಾಸದ ಶಕ್ತಿ 
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Jan 02, 2024 | 6:50 PM

ದೋಣಿ ಸಾಗಿಸಲು ಹರಿಗೋಲು ಎಷ್ಟು ಮುಖ್ಯವೋ, ನಮ್ಮ ಜೀವನ ಸಾಗಿಸಲು, ಜೀವನದಲ್ಲಿ ಏನಾದರೂ ಸಾಧನೆ ಮಾಡಲು ಆತ್ಮವಿಶ್ವಾಸವು ಅಷ್ಟೇ ಮುಖ್ಯ.  ಆತ್ಮವಿಶ್ವಾಸವೊಂದಿದ್ದರೆ, ಜೀವನದಲ್ಲಿ ಎದುರಾಗುವಂತಹ ಸವಾಲುಗಳನ್ನು ದೈರ್ಯದಿಂದ ಎದುರಿಸಿ, ಆ ಸವಾಲನ್ನು ಜಯಿಸಲು ಸಾಧ್ಯವಾಗುತ್ತದೆ. ಹೀಗೆ ಎಂಹತ  ಸಂದಿಗ್ಧ ಪರಿಸ್ಥಿತಿ ಎದುರಾದರೂ ನಾನು ಸೋತು ಹೋದೆ, ಇದನ್ನು ನನ್ನಿಂದು ಜಯಿಸಲು ಸಾಧ್ಯವಿಲ್ಲ ಎಂದು ಎದೆಗುಂದದೆ  ಆತ್ಮವಿಶ್ವಾಸದಿಂದ ಆ ಸಮಸ್ಯೆಯ ವಿರುದ್ಧ ಹೋರಾಡಬೇಕು. ಆಗ ಮಾತ್ರ ಯಾವುದೇ ಸಮಸ್ಯೆಯಿಂದಲೂ  ಮುಕ್ತಿ ಮತ್ತು ಯಾವುದೇ ಕೆಲಸದಲ್ಲಿ ನಿಮಗೆ ಯಶಸ್ಸು ಸಿಗಲು ಸಾಧ್ಯ. ಅದೇ ರೀತಿ ಇಲ್ಲೊಂದು ಪೆಂಗ್ವಿನ್ ಯಾವುದೇ ಸಂದಿಗ್ಧ ಪರಿಸ್ಥಿತಿಯಲ್ಲೂ ದೃತಿಗೆಡದೆ, ಆತ್ಮವಿಶ್ವಾಸ ಮತ್ತು ಧೈರ್ಯದಿಂದ ಆ ಕಷ್ಟದ ವಿರುದ್ಧ ಹೇಗೆ ಹೋರಾಡಬೇಕು ಎಂಬ ಜೀವನ ಪಾಠವನ್ನು ಕಲಿಸಿದೆ. ಈ ಕುರಿತ ವಿಡಿಯೋ ಇದೀಗ ವೈರಲ್ ಆಗಿದೆ.

ಈ ವಿಡಿಯೋವನ್ನು @explore_animal ಎಂಬ ಇನ್ಸ್ಟಾಗ್ರಾಮ್ ಪೇಜ್ ಅಲ್ಲಿ ಹಂಚಿಕೊಳ್ಳಲಾಗಿದ್ದು,   ವಿಡಿಯೋದಲ್ಲಿ ಸಾಗರದಲ್ಲಿ ದೈತ್ಯ ಮೀನೊಂದರ, ದಾಳಿಯಿಂದ ಪೆಂಗ್ವಿನ್  ಬುದ್ಧಿವಂತಿಕೆಯಿಂದ ತಪ್ಪಿಸಿಕೊಂಡು ತನ್ನ ಜೀವವನ್ನು ಹೇಗೆ ಉಳಿಸಿಕೊಳ್ಳುತ್ತೆ ಎಂಬ ರೋಚಕ ದೃಶ್ಯಾವಳಿಯನ್ನು ಕಾಣಬಹುದು.

ಈ ವೈರಲ್​​​ ವಿಡಿಯೋ ಇಲ್ಲಿದೆ:

ವೈರಲ್ ವಿಡಿಯೋದಲ್ಲಿ ಒಂದು ಪೆಂಗ್ವಿನ್ ಆಹಾರವನ್ನರಸುತ್ತಾ, ಸಮುದ್ರದೊಳಗೆ ಹೋಗುತ್ತೆ, ಆದ್ರೆ ನೀರಿನಲ್ಲಿ ಪೆಂಗ್ವಿನ್ ಈಜಾಡುತ್ತಿರುವುದನ್ನು ಕಂಡ ದೈತ್ಯ ಮೀನೊಂದು, ಇವತ್ತಿಗೆ ಭರ್ಜರಿ ಊಟ ಸಿಕ್ತು ಎಂದು, ಆ ಪುಟ್ಟ ಪೆಂಗ್ವಿನ್ ಅನ್ನು ಬೇಟೆಯಾಡಲು ಬರುತ್ತೆ, ಆದ್ರೆ ಈ ಕಠಿಣ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ಎದೆಗುಂದದೆ ಪೆಂಗ್ವಿನ್ ವೇಗವಾಗಿ ಈಜಿಕೊಂಡು  ಹೋಗುತ್ತಾ, ಸಾವಿನ ದವಡೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಪಡುತ್ತೆ, ಆದ್ರೆ ಮೀನು ಇನ್ನೂ ವೇಗವಾಗಿ ಈಜಿಕೊಂಡು ಹೋಗಿ, ಒಮ್ಮೆಲೆ ಪೆಂಗ್ವಿನ್ ಅನ್ನು ಬಾಯಲ್ಲಿ ಹಚ್ಚಿ ಹಿಡಿದುಕೊಳ್ಳುತ್ತೆ, ಈ ಸಂದರ್ಭದಲ್ಲಿ ಪೆಂಗ್ವಿನ್ ಸತ್ತಂತೆ ನಾಟಕವಾಡಿ, ಥಟ್ಟನೆ ಸಾವಿನ ದವಡೆಯಿಂದ ತಪ್ಪಿಸಿಕೊಂಡು ವೇಗವಾಗಿ ಅತ್ತಿಂದ ಇತ್ತ ಈಜುತ್ತಾ ದಡ ಸೇರಿ, ಅಬ್ಬಬ್ಬಾ ಬದುಕಿತು ಬಡಜೀವ ಎಂದು ನಿಟ್ಟುಸಿರು ಬಿಡುವ  ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ:  ಜಪಾನಿನ ಮ್ಯಾಜಿಕ್ ಬೌಲ್ ನೋಡಿದ್ದೀರಾ

ಡಿಸೆಂಬರ್ 28 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3.3 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 2 ಲಕ್ಷಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದುಬಂದಿವೆ. ಒಬ್ಬ ಬಳಕೆದಾರರು ʼಈ ವಿಡಿಯೋ ಯಾವತ್ತೂ ಧೈರ್ಯವನ್ನು ಕಳೆದುಕೊಳ್ಳಬಾರದು ಎಂಬ ಉತ್ತಮ ಪಾಠವನ್ನು ಕಲಿಸಿದೆʼ ಅಂತ ಹೇಳಿದ್ದಾರೆ.  ಇನ್ನೊಬ್ಬ ಬಳಕೆದಾರರು ʼಈ ದೃಶ್ಯವಾವಳಿ ನಿಜಕ್ಕೂ ಅದ್ಭುತವಾಗಿದೆʼ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 6:01 pm, Tue, 2 January 24

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್