“ನನ್ನ ಆದರ್ಶ ವ್ಯಕ್ತಿಗೆ ಪತ್ರ” ಅಂಚೆ ಇಲಾಖೆಗೆ ಪತ್ರ ಬರೆಯಿರಿ… 50 ಸಾವಿರ ರೂ. ಬಹುಮಾನ ಗೆಲ್ಲಿ!

ಇಂದು ಜನರಲ್ಲಿ ಪತ್ರ ಬರೆಯುವ ಅಭ್ಯಾಸ, ಹವ್ಯಾಸ ಎರಡೂ ಕಡಿಮೆಯಾಗುತ್ತಿದ್ದು, ಅದನ್ನು ಮತ್ತೆ ಉತ್ತೇಜಿಸಲು ಅಂಚೆ ಇಲಾಖೆ ಪತ್ರ ಬರೆಯುವ ಸ್ಪರ್ಧೆಯನ್ನು ಘೋಷಿಸಿದೆ. ʼನನ್ನ ಆದರ್ಶ ವ್ಯಕ್ತಿಗೆ ಪತ್ರʼ ಎಂಬ ವಿಷಯದ ಕುರಿತು ಪತ್ರ ಬರೆಯುವ ಸ್ಪರ್ಧೆಯನ್ನು ಆಯೋಜಿಸಿದೆ. ಸೆಪ್ಟೆಂಬರ್‌ 8 ರಂದು ಈ ಸ್ಪರ್ಧೆ ಆರಂಭವಾಗಿದ್ದು ಡಿಸೆಂಬರ್‌ 8 ರೊಳಗೆ ಪತ್ರ ಬರೆದು ಅಂಚೆ ಇಲಾಖೆಗೆ ನೀವು ಕಳುಹಿಸಬೇಕು. ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದವರಿಗೆ 50, ಸಾವಿರ ರೂ. ಬಹುಮಾನ ಸಿಗಲಿದೆ.

“ನನ್ನ ಆದರ್ಶ ವ್ಯಕ್ತಿಗೆ  ಪತ್ರ” ಅಂಚೆ ಇಲಾಖೆಗೆ ಪತ್ರ ಬರೆಯಿರಿ… 50 ಸಾವಿರ ರೂ. ಬಹುಮಾನ ಗೆಲ್ಲಿ!
ಅಂಚೆ ಇಲಾಖೆಗೆ ಪತ್ರ ಬರೆಯಿರಿ

Updated on: Sep 26, 2025 | 4:16 PM

ಇಂದಿನ ಈ ಡಿಜಿಟಲ್‌ ಯುಗದಲ್ಲಿ ಜನರಲ್ಲಿ ಪತ್ರ ಬರೆಯುವ ಅಭ್ಯಾಸ, ಹವ್ಯಾಸ ಎರಡೂ ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ಭಾರತೀಯ ಅಂಚೆ ಇಲಾಖೆಯು (India Post) ಪತ್ರ ಬರೆಯುವ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ರಾಷ್ಟ್ರೀಯ ಪತ್ರ ಬರೆಯುವ ಸ್ಪರ್ಧೆಯನ್ನು ಆಯೋಜಿಸುತ್ತದೆ. ಡಿಜಿಟಲ್ ಯುಗದಲ್ಲಿ ಪತ್ರಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಅಂಚೆ ಇಲಾಖೆಯು ಇಂತಹ ಸ್ಪರ್ಧೆಯನ್ನು ಪ್ರತಿವರ್ಷ ನಡೆಸುತ್ತದೆ. ಅದೇ ರೀತಿ ಈ ಬಾರಿ ʼನನ್ನ ಆದರ್ಶ ವ್ಯಕ್ತಿಗೆ ಪತ್ರʼ ಎಂಬ ವಿಷಯದ ಕುರಿತು ಪತ್ರ ಬರೆಯುವ ಸ್ಪರ್ಧೆಯನ್ನು ಆಯೋಜಿಸಿದೆ. ಸೆಪ್ಟೆಂಬರ್‌ 8 ರಂದು ಈ ಸ್ಪರ್ಧೆ ಆರಂಭವಾಗಿದ್ದು ಡಿಸೆಂಬರ್‌ 8 ರೊಳಗೆ ಪತ್ರ ಬರೆದು ಅಂಚೆ ಇಲಾಖೆಗೆ ನೀವು ಕಳುಹಿಸಬೇಕು. ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದವರಿಗೆ 50, ಸಾವಿರ ರೂ. ಬಹುಮಾನ ಸಿಗಲಿದೆ.

ಭಾರತೀಯ ಅಂಚೆ ಇಲಾಖೆಯಿಂದ ಪತ್ರ ಬರೆಯುವ ಸ್ಪರ್ಧೆ:

ದೂರಸಂಪರ್ಕ ಸಾಧನಗಳು ಮತ್ತು ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆಯ ಕಾರಣದಿಂದಾಗಿ ಇಂದು ಅಂಚೆ ಸೇವೆಗಳನ್ನು ಬಳಸುವ ಜನರ ಸಂಖ್ಯೆ ಗಣನೀಯವಾಗಿ ಕುಗ್ಗಿದೆ. ವಿಶೇಷವಾಗಿ ಯುವ ಪೀಳಿಗೆಗೆ ಅಂಚೆ ಸೇವೆಗಳ ಬಗ್ಗೆ ಹೆಚ್ಚಿನ ಅರಿವಿಲ್ಲ. ಒಂದು ಕಾಲದಲ್ಲಿ ಬಹಳ ಮುಖ್ಯವಾದ ಸ್ಥಾನವನ್ನು ಹೊಂದಿದ್ದ ಅಂಚೆ ಸೇವೆ ಇತ್ತೀಚಿನ ದಿನಗಳಲ್ಲಿ ಕುಗ್ಗಿದೆ. ಹಾಗಾಗಿ ಪತ್ರ ಬರೆಯುವುದನ್ನು ಉತ್ತೇಜಿಸಲು ಅಂಚೆ ಇಲಾಖೆ ಈ ಒಂದು ಅಭಿಯಾನವನ್ನು ನಡೆಸುತ್ತಿದೆ.

ಭಾರತೀಯ ಅಂಚೆ ಇಲಾಖೆ ಆಯೋಜಿಸಿರುವ ರಾಷ್ಟ್ರಮಟ್ಟದ ಪತ್ರ ಬರೆಯುವ ಸ್ಪರ್ಧೆಯು ಸೆಪ್ಟೆಂಬರ್ 8 ರಿಂದ ಡಿಸೆಂಬರ್ 8 ರವರೆಗೆ ನಡೆಯುತ್ತಿದೆ. 18 ವರ್ಷ ಮೇಲ್ಪಟ್ಟವರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಈ ವರ್ಷದ ಅಭಿಮಾಯನ ವಿಷಯ “ನನ್ನ ಆದರ್ಶ ವ್ಯಕ್ತಿಗೆ ಪತ್ರ” ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ಕನ್ನಡ, ಹಿಂದಿ, ತಮಿಳು ಅಥವಾ ಇಂಗ್ಲಿಷ್‌ ಭಾಷೆಯಲ್ಲಿ ಪತ್ರವನ್ನು ಬರೆಯಬಹುದು. ನೀವು ಬರೆದ ಪತ್ರಗಳನ್ನು ಪೋಸ್ಟ್‌ ಮಾಡಲು ಕೊನೆಯ ದಿನಾಂಕ ಡಿಸೆಂಬರ್‌ 8, 2025.

ಇದನ್ನೂ ಓದಿ: ಕಳೆದುಹೋದ ಮೊಬೈಲನ್ನು ಹತ್ತೇ ನಿಮಿಷದಲ್ಲಿ ಹುಡುಕಿ ಕೊಟ್ಟ ಬೆಂಗಳೂರು ಪೊಲೀಸರು! ಯುವತಿಯ ಪೋಸ್ಟ್ ವೈರಲ್

ಪ್ರಬಂಧಗಳನ್ನು ಕೈಬರಹದಲ್ಲಿಯೇ ಬರೆಯತಕ್ಕದ್ದು. ಇನ್‌ಲ್ಯಾಂಡ್‌ ಲೆಟರ್‌ ಕಾರ್ಡ್‌ (ಐಎಲ್‌ಸಿ) ಉಪಯೋಗಿಸುವವರು 500 ಪದಗಳಿಗೆ ಮೀರದಂತೆ ಹಾಗೂ ಎನ್‌ವಲಪ್‌ ಉಪಯೋಗಿಸುವವರು 1000 ಪದಗಳಿಗೆ ಮೀರದಂತೆ A4 ಶೀಟ್‌ನಲ್ಲಿ ಪತ್ರಬರೆದು ಎನ್‌ವಲಪ್‌ ಒಳಗೆ ಹಾಕಿ ನಿಮ್ಮ ಹತ್ತಿರದ ಅಂಚೆ ಕಚೇರಿಗೆ ತಲುಪಿಸಬೇಕು. 18 ವರ್ಷ ಮೇಲ್ಪಟ್ಟ ಯಾರು ಬೇಕಾದರೂ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಈ ಪತ್ರವನ್ನು “ನನ್ನ ಮಾದರಿ ವ್ಯಕ್ತಿಗೆ ಪತ್ರ” ಎಂಬ ಶೀರ್ಷಿಕೆಯಡಿಯಲ್ಲಿ ಬರೆಯಬೇಕೆಂದು ತಿಳಿಸಲಾಗಿದೆ. ಸಾರ್ವಜನಿಕರು, ಕಾಲೇಜು ವಿದ್ಯಾರ್ಥಿಗಳು ಮತ್ತು ಉದ್ಯೋಗಸ್ಥರು ಯಾರು ಬೇಕಾದರೂ ಭಾಗವಹಿಸಬಹುದು ಎಂದು ಅಂಚೆ ಇಲಾಖೆ ತಿಳಿಸಿದೆ.

50 ಸಾವಿರ ರೂ. ಬಹುಮಾನ ಮೊತ್ತ:

ರಾಷ್ಟ್ರಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದವರಿಗೆ 50 ಸಾವಿರ ರೂ., ದ್ವಿತೀಯ ಬಹುಮಾನ ಪಡೆದವರಿಗೆ 25 ಸಾವಿರ ರೂ., ತೃತೀಯ ಬಹುಮಾನ ಪಡೆದವರಿಗೆ 10 ಸಾವಿರ ರೂ. ನೀಡಲಾಗುವುದು ಎಂದು ಘೋಷಿಸಲಾಗಿದೆ. ಅದೇ ರೀತಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದವರಿಗೆ 25 ಸಾವಿರ ರೂ., ದ್ವಿತೀಯ ಬಹುಮಾನ ಪಡೆದವರಿಗೆ 10 ಸಾವಿರ ರೂ., ತೃತೀಯ ಬಹುಮಾನ ಪಡೆದವರಿಗೆ 5 ಸಾವಿರ ರೂ. ನೀಡಲಾಗುವುದು.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ