Answer Sheet: ವಿದ್ಯಾರ್ಥಿಗಳು ಉತ್ತರ ಪತ್ರಿಕೆಗಳಲ್ಲಿ ನೋಟುಗಳನ್ನಿಟ್ಟು ಮೌಲ್ಯಮಾಪಕರಿಗೆ ಲಂಚ ನೀಡಲು ಪ್ರಯತ್ನ ನಡೆಸುವುದು ಇದೇ ಮೊದಲೇನಲ್ಲ. ಉತ್ತಮ ಅಂಕ ಗಳಿಸಲು ವಿದ್ಯಾರ್ಥಿಗಳು ಇಂಥ ಅಸಹ್ಯಕರ ಪ್ರಯತ್ನಗಳನ್ನು ಮಾಡುವುದು ಭಾರತದಲ್ಲಿ ಸಾಮಾನ್ಯವೆನ್ನಿಸುವ ಮಟ್ಟಿಗಿದೆ. ಇತ್ತಿಚೆಗೆ ಭಾರತೀಯ ಪೊಲೀಸ್ ಸೇವಾ ಅಧಿಕಾರಿ ಅರುಣ್ ಬೋತ್ರಾ ರೂ. 100, ರೂ. 200, ರೂ. 500 ನೋಟುಗಳಿರುವ ಫೋಟೋ ಅನ್ನು X (Twitter) ನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : Viral Video: ಬಾಹ್ಯಾಕಾಶದಲ್ಲಿ ಹನಿ ಸ್ಯಾಂಡ್ವಿಚ್ ತಯಾರಿಸಿ ಸವಿದ ಗಗನಯಾತ್ರಿ
‘ಇದು ಶಿಕ್ಷಕರೊಬ್ಬರು ಕಳಿಸಿರುವ ಫೋಟೋ. ವಿದ್ಯಾರ್ಥಿಗಳು ಈ ನೋಟುಗಳನ್ನು ಉತ್ತರಪತ್ರಿಕೆಯೊಳಗೆ ಇಟ್ಟು, ಉತ್ತೀರ್ಣಗೊಳ್ಳಲು ಬೇಕಾದ ಅಂಕಗಳನ್ನು ದಯಪಾಲಿಸಬೇಕೆಂದು ಕೇಳಿಕೊಂಡಿದ್ದಾರೆ. ಈ ಚಿತ್ರವು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ಬಗ್ಗೆ ಸಾಕಷ್ಟು ಸಂಗತಿಗಳನ್ನು ತಿಳಿಯಪಡಿಸುತ್ತಿದೆ’ ಎಂಬ ಒಕ್ಕಣೆಯನ್ನು ಬೋತ್ರಾ ಬರೆದಿದ್ದಾರೆ.
Pic sent by a teacher. These notes were kept inside answer sheets of a board exam by students with request to give them passing marks.
Tells a lot about our students, teachers and the entire educational system. pic.twitter.com/eV76KMAI4a
— Arun Bothra 🇮🇳 (@arunbothra) August 21, 2023
ನೆಟ್ಟಿಗರು ಈ ಪೋಸ್ಟ್ನಡಿ ತಮ್ಮ ಅನುಭವಗಳನ್ನು ಹಂಚಿಕೊಂಡು ಚರ್ಚಿಸಿದ್ದಾರೆ. ಪತ್ರಿಕೆ ಮೌಲ್ಯಮಾಪನಕ್ಕೆಂದು ಹೋದಾಗ ಸುಮಾರು ಮೂರು ಸಲ ನಾನು ಇಂಥದನ್ನು ಎದುರಿಸಿದ್ದೇನೆ ಎಂದಿದ್ದಾರೆ ಒಬ್ಬರು. ಹಣವಷ್ಟೇ ಅಲ್ಲ, ವಿದ್ಯಾರ್ಥಿಗಳು ತಮ್ಮ ಪರಿಸ್ಥಿತಿಯ ಬಗ್ಗೆ ಕಥೆಗಳನ್ನೂ ಬರೆದಿರುತ್ತಾರೆ ಎಂದಿದ್ದಾರೆ ಇನ್ನೊಬ್ಬರು. ಹೀಗೆಲ್ಲ ಮಾಡಿದ ವಿದ್ಯಾರ್ಥಿಗಳು ಸಾಮಾನ್ಯವಾಗಿ ಫೇಲ್ ಆಗುತ್ತಾರೆ ಎಂದಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : Viral Video: ಬಾಂಗ್ಲಾಭಕ್ಷ್ಯ; ಅವಲಕ್ಕಿಯ ಕೊಲೆಯಾಗಿದೆ ಇಲ್ಲಿ! ಆಕ್ರೋಶಗೊಂಡ ನೆಟ್ಟಿಗರು
ಇದು ಹತ್ತಿಪ್ಪತ್ತು ವರ್ಷಗಳಿಂದ ನಡೆಯುತ್ತಲೇ ಇದೆ. ಕೆಲವು ವಿದ್ಯಾರ್ಥಿಗಳು ಇದಕ್ಕಾಗಿಯೇ ಹಣವನ್ನು ಕೂಡಿಡುತ್ತಾರೆ. ನಮ್ಮ ಕಾಲದಲ್ಲಿ ಕೆಲವರು ಉತ್ತರ ಪತ್ರಿಕೆಗಳಲ್ಲಿ ತಮ್ಮ ಫೋನ್ ನಂಬರುಗಳನ್ನು ಬರೆಯುತ್ತಿದ್ದರು. ಅಕಸ್ಮಾತ್ ಮೌಲ್ಯಮಾಪಕರು ಆ ನಂಬರಿಗೆ ಫೋನ್ ಮಾಡಿದರೆ ಆಯಾ ವಿದ್ಯಾರ್ಥಿಗಳು ಅವರಿಗೆ ಹಣ ತಲುಪಿಸುತ್ತಿದ್ದರು ಎಂದಿದ್ದಾರೆ ಒಬ್ಬರು.
Standrad has really fallen low… Tape laga note kaise chalega?! Despicable! pic.twitter.com/0Uv6meAIfH
— Mr B (@maddyb65) August 21, 2023
ಆಸಕ್ತಿಯಿಲ್ಲದೇ ಗಳಿಸಿದ ಅಂಕಗಳಿಂದ ವಿದ್ಯಾರ್ಥಿಗಳು ತಮ್ಮ ಬದುಕನ್ನು ಹೇಗೆ ಕಟ್ಟಿಕೊಳ್ಳುತ್ತಾರೆ? ಜ್ಞಾನವಿಲ್ಲದೇ ಉದ್ಯೋಗದ ಸಂದರ್ಶನದಲ್ಲಿ ಹೇಗೆ ಭಾಗಿಯಾಗುತ್ತಾರೆ? ಎಂದು ಕೇಳಿದ್ದಾರೆ ಒಬ್ಬರು. ಭಾರತದಲ್ಲಿ ಹಣದಿಂದ ಏನನ್ನೂ ಪಡೆಯಬಹುದು ಎನ್ನುವುದು ವಿದ್ಯಾರ್ಥಿಗಳಿಗೆ ತಿಳಿದಿದೆ ಎಂದಿದ್ದಾರೆ ಇನ್ನೊಬ್ಬರು.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 11:39 am, Tue, 22 August 23