
ಪಾಕಿಸ್ತಾನವೂ ಭಾರತದ (India) ಮೇಲೆ ಸಾಕಷ್ಟು ಬಾರಿ ದಾಳಿ ನಡೆಸಿದೆ. ನಮ್ಮ ಭಾರತೀಯ ಸೇನೆಯೂ (Indian Army) ಇಂತಹ ಸಂದರ್ಭ ಏರ್ಪಟ್ಟಾಗಲು ತಕ್ಕ ಉತ್ತರ ನೀಡಿ ಪಾಕ್ ನ ಸೊಕ್ಕಡಗಿಸಿದೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಪಾಕಿಸ್ತಾನವು ಭಾರತದ ಮೇಲೆ ದಾಳಿ ಮಾಡಿದ್ರೆ ಭಾರತೀಯ ಸೇನೆಯೂ ನೀಡುವ ಉತ್ತರ ಹೇಗಿರುತ್ತದೆ ಎನ್ನುವುದನ್ನು ತಮಾಷೆಗಾಗಿ ಬಿಂಬಿಸಲಾಗಿದೆ. ಈ ದೃಶ್ಯವು ಭಾರತೀಯ ಸೇನೆಯೂ ಯಾವುದಕ್ಕೂ ಬಗ್ಗಲ್ಲ ಎನ್ನುವುದನ್ನು ಸಾರಿ ಹೇಳುವಂತಿದೆ. ತಮಾಷೆಯೆನಿಸುವ ಈ ವಿಡಿಯೋ ಬಳಕೆದಾರರ ಮೊಗದಲ್ಲಿ ನಗು ತರಿಸಿದೆ.
Voice of Hindus ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದ್ದು, ವ್ಯಕ್ತಿಯೊಬ್ಬ ರಾಕೆಟ್ನ್ನು ಬಿಟ್ಟಿದ್ದು, ಅದನ್ನು ಎದುರಿಗಿದ್ದ ವ್ಯಕ್ತಿಯೊಬ್ಬನು ಪ್ಯಾಂಟ್ ಒಳಗೆ ಹಾಕಿಕೊಂಡಿದ್ದಾನೆ. ಇದು ಪಾಕ್ ಸೇನೆ ಏನೇ ಮಾಡಿದ್ರು ಭಾರತೀಯ ಸೇನೆ ನೀಡುವ ಪ್ರತ್ಯುತ್ತರ ಹೀಗಿರುತ್ತದೆ ಎಂದು ಪರೋಕ್ಷವಾಗಿ ಹೇಳಿದ್ದಂತಿದೆ.
Pakistani Fans tried to mess with Indian Fans! pic.twitter.com/AEYFqipDeD
— Voice of Hindus (@Warlock_Shubh) September 29, 2025
ಇದನ್ನೂ ಓದಿ:Video: ಇದು ಮ್ಯಾಜಿಕ್ ಅಲ್ಲ ಮೋಸ, ಪಾರಿವಾಳ ಹೇಗೆ ಬಂತು ನೋಡಿ
ಸೆಪ್ಟೆಂಬರ್ 29 ರಂದು ಶೇರ್ ಮಾಡಲಾದ ಈ ವಿಡಿಯೋ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಒಬ್ಬ ವ್ಯಕ್ತಿಯೂ ಇಡೀ ಪಾಕಿಸ್ತಾನವನ್ನ ನಾಶ ಮಾಡಿದನು ಎಂದು ತಮಾಷೆಯಾಗಿಯೇ ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ ಒಂಥರಾ ಖುಷಿಯಿದೆ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರ ಭಾರತವು ರೋಸ್ಟಿಂಗ್ ಮೂಡ್ ನಲ್ಲಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ