ಚಾರ್ಜಿಂಗ್ ಪಾಯಿಂಟ್​​​ನಲ್ಲಿ ಉಂಟಾದ ಸಮಸ್ಯೆಯನ್ನು 15 ನಿಮಿಷದಲ್ಲಿ ಪರಿಹರಿಸಿದ ಭಾರತೀಯ ರೈಲ್ವೆ ಇಲಾಖೆ

ಭಾರತೀಯ ರೈಲ್ವೆಯ ದಕ್ಷ ಸೇವೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ರೈಲಿನಲ್ಲಿ ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಕಾರ್ಯನಿರ್ವಹಿಸದಿದ್ದಾಗ, ಪ್ರಯಾಣಿಕರೊಬ್ಬರು ರೈಲ್ವೆ ಸಹಾಯವಾಣಿಗೆ ಕರೆ ಮಾಡಿದರು. ಕೇವಲ 15 ನಿಮಿಷಗಳಲ್ಲಿ ಎಲೆಕ್ಟ್ರಿಷಿಯನ್ ಬಂದು ಸಮಸ್ಯೆಯನ್ನು ಪರಿಹರಿಸಿದ್ದಾರೆ. ಭಾರತೀಯ ರೈಲ್ವೆಯ ಪ್ರಯಾಣಿಕ ಸ್ನೇಹಿ ಸೇವೆ ಮತ್ತು ಸಿಬ್ಬಂದಿಯ ಕಾರ್ಯಕ್ಷಮತೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

ಚಾರ್ಜಿಂಗ್ ಪಾಯಿಂಟ್​​​ನಲ್ಲಿ ಉಂಟಾದ ಸಮಸ್ಯೆಯನ್ನು 15 ನಿಮಿಷದಲ್ಲಿ ಪರಿಹರಿಸಿದ ಭಾರತೀಯ ರೈಲ್ವೆ ಇಲಾಖೆ
ವೈರಲ್​​ ವಿಡಿಯೋ

Updated on: Oct 31, 2025 | 10:20 AM

ಭಾರತೀಯ ರೈಲ್ವೆಯಲ್ಲಿ ಸೌಲಭ್ಯದ ವಿಚಾರಕ್ಕೆ ಬಂದರೆ ಹಲವು ಬದಲಾವಣೆಗಳು ಆಗಿವೆ. ರೈಲ್ವೆ ಸಿಬ್ಬಂದಿಗಳು ಕೂಡ ಪ್ರಯಾಣಿಕರಿಗೆ ರೈಲಿನಲ್ಲಿ ಆಗುವ ಸಮಸ್ಯೆಗಳಿಗೆ ತಕ್ಷಣಕ್ಕೆ ಪತ್ರಿಕ್ರಿಯೆ ನೀಡುತ್ತಾರೆ. ಇದೀಗ ಅಂತಹದೇ ಒಂದು ಘಟನೆ ರೈಲಿನಲ್ಲಿ ನಡೆದಿದೆ. ರೈಲ್ವೆ ಇಲಾಖೆಯಲ್ಲಿ ಪ್ರಯಾಣಿಕರ ಸುರಕ್ಷತೆ ಜತೆಗೆ ಅವರಿಗೆ ರೈಲಿನಲ್ಲಿ ಬೇಕಾದ ಎಲ್ಲ ವ್ಯವಸ್ಥೆಗಳನ್ನು ತ್ವರಿತವಾಗಿ ಮಾಡಲಾಗುತ್ತದೆ. ಇದೀಗ ವಿಡಿಯೋವೊಂದು ವೈರಲ್​ ಆಗಿದ್ದು, ರೈಲಿನಲ್ಲಾದ ಚಿಕ್ಕ ಸಮಸ್ಯೆಗಳು ಕ್ಷಿಪ್ರವಾಗಿ ಪ್ರತಿಕ್ರಿಯೆ ನೀಡುವ ಮೂಲಕ ದಕ್ಷ ಸೇವೆಗೆ ಸಾಕ್ಷಿಯಾಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆಗೆ ಕಾರಣವಾಗಿದೆ. ಟೆನ್ ಜಾಮ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಕರೊಬ್ಬರು ತನ್ನ ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ರೈಲ್ವೆ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಕೇವಲ 15 ನಿಮಿಷಗಳಲ್ಲಿ, ಎಲೆಕ್ಟ್ರಿಷಿಯನ್ ಬಂದು ಸಮಸ್ಯೆಯನ್ನು ಪರಿಹರಿಸಿದ್ದಾರೆ.

ಈ ವಿಡಿಯೋ ಎಕ್ಸ್​​​​​ ಖಾತೆಯಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿ ಕೇರಳದ ಯುವಕರ ಗುಂಪೊಂದು ರೈಲಿನಲ್ಲಿ ಪ್ರಯಾಣಿಸುವಾಗ ಚಾರ್ಜಿಂಗ್ ಪಾಯಿಂಟ್​​​ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಈ ವೇಳೆ ಸಹಾಯಕ್ಕಾಗಿ ರೈಲ್ವೆ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರೈಲ್ವೆ, ಒಬ್ಬ ಎಲೆಕ್ಟ್ರಿಷಿಯನ್​​​ನ್ನು ಸಮಸ್ಯೆ ಇರುವ ಬೋಗಿಗೆ ಕಳುಹಿಸಿದ್ದಾರೆ. ಎಲೆಕ್ಟ್ರಿಷಿಯನ್ ಬಂದು ಸಮಸ್ಯೆಯನ್ನು ಪರಿಹರಿಸಿರುವುದನ್ನು ಈ ವಿಡಿಯೋದಲ್ಲಿ ತೋರಿಸಿದ್ದಾರೆ. ಚಾರ್ಜಿಂಗ್ ಪಾಯಿಂಟ್​​ನಲ್ಲಿ ಕಂಡು ಬಂದ ಸಮಸ್ಯೆಯನ್ನು ಕೇವಲ 15 ನಿಮಿಷಗಳಲ್ಲಿ, ಒಬ್ಬ ಎಲೆಕ್ಟ್ರಿಷಿಯನ್ ಸರಿ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಗೆ ಕಾರಣವಾಗಿದೆ. ನಂತರ ಪ್ರಯಾಣಿಕರು ಎಲೆಕ್ಟ್ರಿಷಿಯನ್ ಅವರು ಕೆಲಸಕ್ಕೆ ಧನ್ಯವಾದ ಹೇಳಿದ್ದಾರೆ.

ಇದನ್ನೂ ಓದಿ: ಗ್ಲಾಸ್‌ನಲ್ಲಿದ್ದ ನೀರು ಚೆಲ್ಲದೇ ಕಿತ್ತಳೆ ಹಣ್ಣು ಹೊರತೆಗೆದ ಬಾಲಕಿ, ಈಕೆ ಬಳಸಿದ ಟ್ರಿಕ್ಸ್ ನೋಡಿ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ

ಇನ್ನು ಈ ಪೋಸ್ಟ್​ಗೆ ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರು ಕಮೆಂಟ್​​ ಮಾಡಿದ್ದಾರೆ. 15 ನಿಮಿಷಗಳಲ್ಲಿ ಸಮಸ್ಯೆಗಳನ್ನು ಪರಿಹಾರ ಮಾಡಿರುವುದು ದೊಡ್ಡ ಕೆಲಸ ಎಂದು ಹೇಳಿದ್ದಾರೆ. ಒಬ್ಬ ಬಳಕೆದಾರ ನಿಜವಾಗಿಯೂ ಉತ್ತಮ ಕೆಲಸ ಇದು ನ್ಯೂ ಇಂಡಿಯಾ ರೈಲ್ವೆ ವೇಗವಾಗಿ ಸ್ಪಂಧಿಸುವ ಹಾಗೂ ಪ್ರಯಾಣಿಕ ಸ್ನೇಹಿ ಎಂದು ಹೇಳಿದ್ದಾರೆ. ಸಮಸ್ಯೆಯನ್ನು ನಿಮಿಷಗಳಲ್ಲಿ ಪರಿಹರಿಸಿದ ಎಲೆಕ್ಟ್ರಿಷಿಯನ್​ಗೆ ಧನ್ಯವಾದಗಳು ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ. ಭಾರತೀಯ ರೈಲ್ವೆಯ ಉತ್ತಮ ಸೇವೆ, ಇದು ದಕ್ಷತೆಗೆ ಸಾಕ್ಷಿ ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

 

Published On - 10:18 am, Fri, 31 October 25