AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈರುಳ್ಳಿ-ಬೆಳ್ಳುಳ್ಳಿ ಬಳಸಬಾರದೆಂಬ ಅಮ್ಮನ ನಿಯಮದಿಂದ ಗಂಡ-ಹೆಂಡತಿ ಮಧ್ಯೆ ಜಗಳ

ಮದುವೆಯಾದ ನಂತರ ಗಂಡನ ತಾಯಿ ಮನೆಯಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಬಳಸುವಂತಿಲ್ಲ ಎಂದು ತಾಕೀತು ಮಾಡಿದ್ದರು. ಇದರಿಂದ ಸೊಸೆಗೆ ಕಿರಿಕಿರಿಯಾಗಿತ್ತು. ಇದೇ ವಿಚಾರ ಗಂಡ-ಹೆಂಡತಿಯ ಸಂಬಂಧದಲ್ಲಿ ಬಿರುಕು ಮೂಡಿಸಿತು. ಈ ಬಗ್ಗೆ ಆ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಎಲ್ಲರ ಮನೆಯಲ್ಲೂ ಅದರಲ್ಲೂ ಅತ್ತೆ-ಸೊಸೆಯ ನಡುವೆ ಇರುವ ಸಣ್ಣ ಭಿನ್ನಾಭಿಪ್ರಾಯಗಳು ಹೇಗೆ ಆಗಾಗ ಉದ್ವಿಗ್ನತೆಗೆ ಕಾರಣವಾಗುತ್ತವೆ ಎಂಬುದನ್ನು ವಿವರಿಸಿದ್ದಾರೆ.

ಈರುಳ್ಳಿ-ಬೆಳ್ಳುಳ್ಳಿ ಬಳಸಬಾರದೆಂಬ ಅಮ್ಮನ ನಿಯಮದಿಂದ ಗಂಡ-ಹೆಂಡತಿ ಮಧ್ಯೆ ಜಗಳ
Husband And Wife
ಸುಷ್ಮಾ ಚಕ್ರೆ
|

Updated on: Oct 30, 2025 | 8:15 PM

Share

ನವದೆಹಲಿ, ಅಕ್ಟೋಬರ್ 30: ಎರಡು ಜಡೆಗಳು ಒಟ್ಟಿಗೇ ಇರಲು ಸಾಧ್ಯವಿಲ್ಲ ಎಂಬ ಗಾದೆಯೇ ಇದೆ. ಈ ಮಾತು ಹಳೆಯದಾದರೂ ಇಂದಿನ ಕಾಲಕ್ಕೂ ಇದು ಅನ್ವಯವಾಗುತ್ತದೆ. ಬಹುತೇಕ ಮನೆಗಳಲ್ಲಿ ಅತ್ತೆ-ಸೊಸೆ ನಡುವೆ ಹೊಂದಾಣಿಕೆ ಇರುವುದಿಲ್ಲ. ಮದುವೆಯ (Wedding) ನಂತರ ಪೋಷಕರೊಂದಿಗೆ ವಾಸಿಸುವುದು ಸುಲಭವಲ್ಲ. ದೆಹಲಿಯ ಒಬ್ಬ ವ್ಯಕ್ತಿಗೆ ಮದುವೆಯಾದ ನಂತರ ಸಣ್ಣ ವಿಷಯವೊಂದು ಅವರ ಪತ್ನಿ ಮತ್ತು ಅವರ ಪೋಷಕರ ನಡುವಿನ ಸಂಘರ್ಷದ ಮೂಲವಾಗಿ ಮಾರ್ಪಟ್ಟಿದೆ. ಅವರ ಮನೆಯಲ್ಲಿ ಈರುಳ್ಳಿ-ಬೆಳ್ಳುಳ್ಳಿ ತಿನ್ನುವುದಿಲ್ಲ ಎಂಬುದೇ ಈ ಸಮಸ್ಯೆಯ ಮೂಲ!

ಅವರು ಈ ಬಗ್ಗೆ ರೆಡ್ಡಿಟ್‌ನಲ್ಲಿ ತಮ್ಮ ಪರಿಸ್ಥಿತಿಯನ್ನು ಹಂಚಿಕೊಂಡಿದ್ದಾರೆ. “ನಾವು ನನ್ನ ಪೋಷಕರಿಂದ ದೂರ ಬದುಕಬೇಕೇ?” ಎಂಬ ಶೀರ್ಷಿಕೆಯ ಪೋಸ್ಟ್‌ನಲ್ಲಿ ಆ ವ್ಯಕ್ತಿ, ಅವರ ಜೀವನದಲ್ಲಿ ಮದುವೆಯ ನಂತರ ಎಷ್ಟೆಲ್ಲ ಬದಲಾವಣೆಯಾಯಿತು ಎಂಬುದರ ಬಗ್ಗೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ನಾಲ್ಕು ನಿಮಿಷ ಮೊದಲೇ ಯಾಕೆ ಲಾಗ್ ಔಟ್ ಆಗಿದ್ದೀರಿ? ಎಚ್​ಆರ್​​ ಪ್ರಶ್ನೆಗೆ ಉದ್ಯೋಗಿ ತಬ್ಬಿಬ್ಬು

ಆ ವ್ಯಕ್ತಿ 5 ವರ್ಷಗಳ ಹಿಂದೆ ವಿವಾಹವಾಗಿದ್ದರು. ಅವರ ಪತ್ನಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. “ನಾನು ಸುಮಾರು 5 ವರ್ಷಗಳ ಹಿಂದೆ ವಿವಾಹವಾದೆ. ನನ್ನ ಹೆಂಡತಿ ಶಿಕ್ಷಕಿ. ಹಾಗಾಗಿ, ನನ್ನ ಸಮಸ್ಯೆ ಏನೆಂದರೆ ನಾನು ಮದುವೆಯಾದಾಗಿನಿಂದ ನನ್ನ ಹೆತ್ತವರ ನಡವಳಿಕೆಯು ಮೊದಲಿಗಿಂತ ಬಹಳ ಬದಲಾಗಿದೆ” ಎಂದು ಅವರು ಬರೆದಿದ್ದಾರೆ.

“ನನ್ನ ತಾಯಿ ಮನೆಯಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ತಪ್ಪಿಸುವುದು ಸೇರಿದಂತೆ ಆಹಾರ ಮತ್ತು ಧಾರ್ಮಿಕ ನಿಯಮಗಳನ್ನು ಅನುಸರಿಸುತ್ತಾರೆ. ಅವರು ಮತ್ತು ಅವರ ಪತ್ನಿ ಈ ನಿಯಮಗಳನ್ನು ಗೌರವಿಸಲು ಪ್ರಯತ್ನಿಸಿದರೂ ಇದೇ ವಿಷಯಕ್ಕೆ ಆಗಾಗ ವಾದಗಳಿಗೆ ಕಾರಣವಾಗುತ್ತಿತ್ತು. ನನ್ನ ತಾಯಿ ಕೆಲವೊಮ್ಮೆ ನಮ್ಮ ಆಹಾರಕ್ರಮದ ಬಗ್ಗೆ ಅತಿಯಾಗಿ ಕಟ್ಟುನಿಟ್ಟಾಗಿರುತ್ತಾರೆ. ಅವರು ಮನೆಯಲ್ಲಿ ಈರುಳ್ಳಿ ಅಥವಾ ಬೆಳ್ಳುಳ್ಳಿಯನ್ನು ಬಳಸಲು ಒಪ್ಪುವುದಿಲ್ಲ. ನಾವು ಕೂಡ ಅದನ್ನು ಅನುಸರಿಸುತ್ತೇವೆ. ಆದರೆ, ನನ್ನ ಹೆಂಡತಿಗೆ ಇದು ಇಷ್ಟವಿರಲಿಲ್ಲ” ಎಂದು ಅವರು ರೆಡ್ಡಿಟ್​ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಬೆಂಗಳೂರು: 10 ನಿಮಿಷ ಕಾಯಿಸಿದ್ದಕ್ಕೆ ಮಹಿಳೆ ಮತ್ತು ಆಟೋ ಚಾಲಕನ ನಡುವೆ ಬಿಗ್​​ ಫೈಟ್

ಇಂತಹ ಸಣ್ಣಪುಟ್ಟ ವೈಮನಸ್ಸಿನ ಬಳಿಕ ಅವರ ಪತ್ನಿ ಈಗ ಅತ್ತೆ-ಮಾವನಿಂದ ಪ್ರತ್ಯೇಕವಾಗಿ ವಾಸಿಸಲು ಬಯಸುತ್ತಿದ್ದಾರೆ. ಈರುಳ್ಳಿ-ಬೆಳ್ಳುಳ್ಳಿ ಕಾರಣಕ್ಕೆ ನಾವು ಬೇರೆ ಮನೆ ಮಾಡುವಂತಾಗಿದೆ ಎಂದು ಅವರು ಪೋಸ್ಟ್ ಮಾಡಿದ್ದಾರೆ. ಹಲವು ಜನರು ಅವರು ಅಪ್ಪ-ಅಮ್ಮನಿಂದ ಪ್ರತ್ಯೇಕವಾಗಿ ವಾಸಿಸುವುದೇ ಉತ್ತಮ ಎಂದು ಸಲಹೆ ನೀಡಿದ್ದಾರೆ. ನಿಮ್ಮ ಹೆಂಡತಿ ಮತ್ತು ಮಗುವಿಗೆ ಉತ್ತಮ ಪರಿಸರ ಕಲ್ಪಿಸಿಕೊಡಿ ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ