ಗುಜರಾತ್ನ ಏಕತಾ ನಗರದಲ್ಲಿ 25 ಇ-ಬಸ್‌ಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ ಏಕತಾ ನಗರದಲ್ಲಿ 1,140 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ಏಕತಾ ನಗರವನ್ನು ತಲುಪಿದ ಅವರು ಈ ಪ್ರದೇಶದ ಪ್ರವಾಸಿಗರ ಅನುಕೂಲಕ್ಕಾಗಿ 25 ಇ-ಬಸ್‌ಗಳಿಗೆ ಚಾಲನೆ ನೀಡಿದರು. ಪ್ರಸ್ತುತ, ಏಕತಾ ನಗರದಲ್ಲಿ ಈಗಾಗಲೇ 30 ಇ-ಬಸ್‌ಗಳು ಸಂಚರಿಸುತ್ತಿವೆ. ಇದರಿಂದ ಇನ್ನುಮುಂದೆ ಒಟ್ಟು 55 ಇ-ಬಸ್‌ಗಳು ಪ್ರವಾಸಿಗರಿಗೆ ಸೇವೆ ಸಲ್ಲಿಸಲಿವೆ.
ಅಹಮದಾಬಾದ್, ಅಕ್ಟೋಬರ್ 30: ಪ್ರಧಾನಿ ನರೇಂದ್ರ ಮೋದಿ (PM Modi) ಇಂದು ಎರಡು ದಿನಗಳ ಭೇಟಿಗೆ ಗುಜರಾತ್‌ಗೆ ತೆರಳಿದ್ದಾರೆ. ಅಕ್ಟೋಬರ್ 31ರಂದು ಏಕತಾ ನಗರದಲ್ಲಿ ನಡೆಯುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮ ದಿನಾಚರಣೆಯ ಪ್ರಯುಕ್ತ ರಾಷ್ಟ್ರೀಯ ಏಕತಾ ದಿವಸ್ ಆಚರಣೆಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ. ಏಕತಾ ನಗರವನ್ನು ತಲುಪಿದ ಅವರು ಈ ಪ್ರದೇಶದ ಪ್ರವಾಸಿಗರ ಅನುಕೂಲಕ್ಕಾಗಿ 25 ಇ-ಬಸ್‌ಗಳಿಗೆ ಚಾಲನೆ ನೀಡಿದರು. ಪ್ರಸ್ತುತ, ಏಕತಾ ನಗರದಲ್ಲಿ ಈಗಾಗಲೇ 30 ಇ-ಬಸ್‌ಗಳು ಸಂಚರಿಸುತ್ತಿವೆ. ಇದರಿಂದ ಇನ್ನುಮುಂದೆ ಒಟ್ಟು 55 ಇ-ಬಸ್‌ಗಳು ಪ್ರವಾಸಿಗರಿಗೆ ಸೇವೆ ಸಲ್ಲಿಸಲಿವೆ. ಈ ಎಲ್ಲಾ ಇ-ಬಸ್‌ಗಳು ಪ್ರವಾಸಿಗರಿಗೆ ಉಚಿತ ಪ್ರಯಾಣ ಸೇವೆಗಳನ್ನು ಒದಗಿಸುತ್ತವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

