ಭಾರತೀಯ ತಿಂಡಿ ತಿನಿಸುಗಳು ಬಹಳ ರುಚಿಕರವಾಗಿರುತ್ತವೆ. ಇವರು ಜತ್ತಿನ ಎಲ್ಲ ಜನರನ್ನು ಆಕರ್ಷಿಸುತ್ತವೆ. ಇದೇ ರೀತಿಯಾಗಿ ಅಮೇರಿಕಾದ ಉತ್ತರ ಕೆರೊಲಿನಾದ ಆಶೆವಿಲ್ಲೆಯಲ್ಲಿರುವ ಭಾರತೀಯ ಖಾದ್ಯಗಳನ್ನು ಮಾರುವ ರೆಸ್ಟೋರೆಂಟ್ ಈಗ ಅಮೆರಿಕದ ಅತ್ಯುತ್ತಮ ರೆಸ್ಟೋರೆಂಟ್ ಆಗಿ ಹೊರಹೊಮ್ಮಿದೆ. ಈ ರೆಸ್ಟೊರೆಂಟ್ಚಾಯ್-ಪಾನಿ ರೆಸ್ಟೋರೆಂಟ್ ಎಂದು ಪ್ರಖ್ಯಾತಿ ಪಡೆದಿದೆ. ಚಿಕಾಗೋದಲ್ಲಿ ನಡೆದ ಜೇಮ್ಸ್ ಬಿಯರ್ಡ್ ಫೌಂಡೇಶನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉತ್ತರ ಕೆರೊಲಿನಾ ಮೂಲದ ಉಪಾಹಾರ ಗೃಹವನ್ನು ಅಮೆರಿಕದ ಅತ್ಯುತ್ತಮ ರೆಸ್ಟೋರೆಂಟ್ ಎಂದು ಕರೆಯಲಾಯಿತು.
ಈ ಬಗ್ಗೆ ರೆಸ್ಟೋರೆಂಟ್ ಹೆಮ್ಮೆಪಡುತ್ತದೆ ಮತ್ತು ಅದರ ಭಾರತೀಯ ಪರಂಪರೆಯನ್ನು ಪ್ರದರ್ಶಿಸುತ್ತದೆ. ಇದು ತನ್ನ ಮೆನುವಿನ ಮೂಲಕ ಭಾರತೀಯ ಬೀದಿ ಆಹಾರಕ್ಕೆ ಹೆಚ್ಚಿನ ಪ್ರಾಶಸ್ತ್ಯ ತಂದಿದೆ. ಇದು ಗ್ರಾಹಕರಿಗೆ ಆಹಾರವನ್ನು ಆಯ್ಕೆ ಮಾಡಲು ಹೆಚ್ಚಿನ ವೈವಿಧ್ಯಮಯ ಭಾರತೀಯ ಭಕ್ಷ್ಯಗಳನ್ನು ಒದಗಿಸುತ್ತದೆ. ಚಾಟ್ಸ್ನಿಂದ ಹಿಡಿದು ಸಿಹಿಭಕ್ಷ್ಯದವರೆಗೆ ಈ ರೆಸ್ಟೋರೆಂಟ್ ತನ್ನ ಗ್ರಾಹಕರಿಗೆ ಆಧುನಿಕ ಟೇಸ್ಟ್‌ನೊಂದಿಗೆ ಭಾರತದ ರುಚಿಗಳನ್ನು ಸವಿಯಲು ಅವಕಾಶವನ್ನು ಒದಗಿಸುತ್ತದೆ. ರೆಸ್ಟೋರೆಂಟ್ ತನ್ನ ಹಲವಾರು ಗ್ರಾಹಕರು ಮತ್ತು ನಿಯತಕಾಲಿಕೆಗಳಿಂದ ಶ್ಲಾಘಿಸಲ್ಪಟ್ಟಿದೆ.
ಈ ರೆಸ್ಟೋರೆಂಟ್ನ ಬಾಣಸಿಗ ಮೆಹರ್ವಾನ್ ಇರಾನಿ ಐದು ಬಾರಿ ಜೇಮ್ಸ್ ಬಿಯರ್ಡ್ ನಾಮನಿರ್ದೇಶಿತ ಬಾಣಸಿಗ.