ಯುವಕರಿಗೂ ಭದ್ರತೆಯಿಲ್ಲ!; ಡ್ರಾಪ್ ಕೇಳಿದ್ದಕ್ಕೆ ಭಾರತದ ವ್ಲಾಗರ್ಗೆ ಇಟಲಿಯಲ್ಲಿ ಲೈಂಗಿಕ ಕಿರುಕುಳ
ಇಟಲಿಗೆ ಹೋಗಿದ್ದ ಭಾರತೀಯ ಯುವಕ ಅಲ್ಲಿ ವ್ಲಾಗ್ವೊಂದನ್ನು ಮಾಡುವಾಗ ವಿಚಿತ್ರವಾದ ಘಟನೆಯೊಂದು ನಡೆದಿದೆ. ರಸ್ತೆಯಲ್ಲಿ ಹೋಗುತ್ತಿದ್ದ ವಾಹನದ ಚಾಲಕನ ಬಳಿ ರಾತ್ರಿ ವೇಳೆ ಆ ಯುವಕ ಡ್ರಾಪ್ ಕೇಳಿದ್ದರು. ಆದರೆ, ಅದಕ್ಕೆ ಪ್ರತಿಯಾಗಿ ಆ ಚಾಲಕ ತನ್ನ ಜೊತೆ ಲೈಂಗಿಕತೆಗೆ ಸಹಕರಿಸುವಂತೆ ಡಿಮ್ಯಾಂಡ್ ಇಟ್ಟಿದ್ದ. ಈ ಘಟನೆ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಒಟ್ಟಾರೆ, ಪುರುಷರಿಗೂ ಲೈಂಗಿಕ ಕಿರುಕುಳದಿಂದ ಮುಕ್ತಿ ಇಲ್ಲದಂತಾಗಿದೆ.

ನವದೆಹಲಿ, ಡಿಸೆಂಬರ್ 13: ಭಾರತೀಯ ಟ್ರಾವೆಲ್ ವ್ಲಾಗರ್ ಪರಮವೀರ್ ಸಿಂಗ್ ಬೇನಿವಾಲ್ ಅವರಿಗೆ ಇಟಲಿಯಲ್ಲಿ ಹಿಚ್‌ಹೈಕಿಂಗ್ ಮಾಡುವಾಗ ಲೈಂಗಿಕ ಕಿರುಕುಳ (Harassment) ನೀಡಲಾಗಿದೆ. ಖುದ್ದು ಅವರೇ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಯೂಟ್ಯೂಬ್ ವೀಡಿಯೊವೊಂದರಲ್ಲಿ, ಟ್ರೆಂಟೊಗೆ ಹೋಗಲು ಡ್ರಾಪ್ ಕೇಳಿದಾಗ ಚಾಲಕನೊಬ್ಬ ಲೈಂಗಿಕ ಸಹಕಾರ ನೀಡುವಂತೆ ಡಿಮ್ಯಾಂಡ್ ಇಟ್ಟಿದ್ದಾನೆ. ಇದರಿಂದಾಗಿ ಪರಮವೀರ್ ಅವರು ವಿಚಲಿತರಾಗಿ ಅದಕ್ಕೆ ಒಪ್ಪದೆ ಆ ಚಾಲಕನನ್ನು ವಾಪಾಸ್ ಕಳುಹಿಸಿದ್ದಾರೆ.
ಈ ಘಟನೆಯು ಆನ್‌ಲೈನ್‌ನಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಹಿಚ್‌ಹೈಕಿಂಗ್ ಮಾಡುವಾಗ ತನಗೆ ಲೈಂಗಿಕ ಕಿರುಕುಳವಾಗಿದೆ ಎಂದು ಬಹಿರಂಗಪಡಿಸಿದ ನಂತರ ಭಾರತೀಯ ಪ್ರಯಾಣ ವ್ಲಾಗರ್ ಒಬ್ಬರ ಇತ್ತೀಚಿನ ಅನುಭವವು ಆನ್‌ಲೈನ್‌ನಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಪ್ಯಾಸೆಂಜರ್ ಪರಮವೀರ್ ಎಂಬ ಹೆಸರಿನಲ್ಲಿ ಯೂಟ್ಯೂಬ್‌ನಲ್ಲಿ ತಮ್ಮ ಪ್ರಯಾಣದ ವಿಡಿಯೋಗಳನ್ನು ದಾಖಲಿಸುವಲ್ಲಿ ಹೆಸರುವಾಸಿಯಾದ ಜನಪ್ರಿಯ ಟ್ರಾವೆಲ್ ಪರಮವೀರ್ ಸಿಂಗ್ ಬೇನಿವಾಲ್, ಈ ಆತಂಕಕಾರಿ ಘಟನೆಯನ್ನು ಹಂಚಿಕೊಂಡಿರುವ ವೀಡಿಯೊವೊಂದು ವೈರಲ್ ಆಗಿದೆ.
ಇದನ್ನೂ ಓದಿ: ಖ್ಯಾತ ನಟಿಗೆ ಲೈಂಗಿಕ ಕಿರುಕುಳ ನೀಡಿದ 6 ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ
The videohttps://t.co/9GFCUjbdZc
— Kaaliyug (@Kaaliyug) December 13, 2025
ಯೂಟ್ಯೂಬ್‌ನಲ್ಲಿ 2.56 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರನ್ನು ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 630,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಪರಮವೀರ್ ಇಟಲಿಯಲ್ಲಿ ಪ್ರಯಾಣಿಸುತ್ತಿದ್ದರು. ಅವರು ಟ್ರೆಂಟೊಗೆ ಸವಾರಿ ಮಾಡಲು ಪ್ರಯತ್ನಿಸುತ್ತಿದ್ದರು. “TRENTO” ಎಂದು ದಪ್ಪ ಕೆಂಪು ಅಕ್ಷರಗಳಲ್ಲಿ ಬರೆದ ಕಾರ್ಡ್‌ಬೋರ್ಡ್ ಫಲಕದೊಂದಿಗೆ ರಸ್ತೆಬದಿಯಲ್ಲಿ ನಿಂತು, ಅವರು ಸ್ಥಳೀಯ ಚಾಲಕನಿಂದ ಲಿಫ್ಟ್ ಅನ್ನು ಕೋರಿದ್ದರು.
ಆದರೆ, ಡ್ರಾಪ್ ಕೊಡಲು ಒಪ್ಪಿದ ಚಾಲಕ ಅದಕ್ಕೆ ಬದಲಿಯಾಗಿ ತನ್ನ ಜೊತೆ ಸಲಿಂಗ ಕಾಮಕ್ಕೆ ಸಹರಿಸಲು ಡಿಮ್ಯಾಂಡ್ ಇಟ್ಟಿದ್ದ. ಈ ಘಟನೆಯ ಬಗ್ಗೆ ಈ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:07 pm, Sat, 13 December 25




