AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ತಂದೆಯ ಫೋಟೋವಿದ್ದ ವ್ಯಾಲೆಟ್ ಕೈ ಸೇರಿತು; ಕ್ಯಾಬ್ ಡ್ರೈವರ್ ಮಾಡಿದ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿದ ಮಹಿಳೆ

ಕೆಲವು ವ್ಯಕ್ತಿಗಳು ನಮ್ಮ ಜತೆಗೆ ದೈಹಿಕವಾಗಿ ಇಲ್ಲದೇ ಇರಬಹುದು. ಆದರೆ ಅಗಲಿದ ವ್ಯಕ್ತಿಗಳ ಕೆಲ ವಸ್ತುಗಳನ್ನು ನಮ್ಮ ಜತೆಗೆ ಇಟ್ಟುಕೊಳ್ಳುತ್ತೇವೆ. ಅಂತಹ ಅಮೂಲ್ಯ ವಸ್ತು ಕಳೆದು ಹೋದರೆ ಆ ಸನ್ನಿವೇಶ ಹೇಗಿರಬಹುದು ಎಂದು ಊಹಿಸಿದ್ದೀರಾ. ಅಗಲಿದ ತಂದೆಯ ಕೊನೆಯ ಫೋಟೋವಿದ್ದ ವ್ಯಾಲೆಟ್ ಕಳೆದು ಹೋಗಿದೆ. ಭಾರತೀಯ ಮಹಿಳೆ ವಕ್ತಿಕಾ ಶರ್ಮಾ ತನಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ. ಕೊನೆಗೆ ಚಾಲಕನ ಒಳ್ಳೆತನವನ್ನು ನೆನಪಿಸಿಕೊಂಡಿದ್ದಾರೆ. ಈ ಹೃದಯಸ್ಪರ್ಶಿ ಘಟನೆ ಎಲ್ಲರ ಗಮನ ಸೆಳೆದಿದೆ.

Viral: ತಂದೆಯ ಫೋಟೋವಿದ್ದ ವ್ಯಾಲೆಟ್ ಕೈ ಸೇರಿತು; ಕ್ಯಾಬ್ ಡ್ರೈವರ್ ಮಾಡಿದ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿದ ಮಹಿಳೆ
ಸಾಂದರ್ಭಿಕ ಚಿತ್ರImage Credit source: Getty Images
ಸಾಯಿನಂದಾ
|

Updated on: Oct 06, 2026 | 6:42 PM

Share

ಕೆಲವರಿಗೆ ತಮ್ಮ ಆತ್ಮೀಯ ವ್ಯಕ್ತಿಗಳ ಫೋಟೋ ಪರ್ಸ್‌ನಲ್ಲಿಟ್ಟುಕೊಳ್ಳುವ ಅಭ್ಯಾಸವಿರುತ್ತದೆ. ಆದರೆ ದುಬೈನಲ್ಲಿ ನೆಲೆಸಿದ್ದ ಭಾರತೀಯ ಮೂಲದ ಮಹಿಳೆಯೂ (Indian woman) ಅಗಲಿದ ತಂದೆಯ ಪಾಸ್‌ಪೋರ್ಟ್ ಗಾತ್ರದ ಫೋಟೋವಿದ್ದ ವ್ಯಾಲೆಟ್‌ನ್ನು ಕಳೆದುಕೊಂಡಿದ್ದಾರೆ. ಆದರೆ ಕ್ಯಾಬ್ ಚಾಲಕನ ಪ್ರಾಮಾಣಿಕತೆ ಹಾಗೂ ಒಳ್ಳೆತನದಿಂದ ತನ್ನ ಈ ಪರ್ಸ್‌ನ್ನು ಮರಳಿ ಪಡೆದಿದ್ದಾರೆ. ಅಮೂಲ್ಯದ  ವ್ಯಾಲೆಟ್‌ನ್ನು ಹಿಂದಿರುಗಿಸಿದ ಕ್ಯಾಬ್ ಡ್ರೈವರ್‌ಗೆ ಧನ್ಯವಾದ ಅರ್ಪಿಸಿದ್ದಾರೆ. ಈ ಕುರಿತಾದ ಕಂಪ್ಲೀಟ್ ಸ್ಟೋರಿ ಇಲ್ಲಿದೆ.

ವ್ಯಾಲೆಟ್ ಹುಡುಕುವ ಪ್ರಯತ್ನದಲ್ಲೇ ತೊಡಗಿದ ಮಹಿಳೆ

ವರ್ತಿಕಾ ಶರ್ಮಾ (vartika sharma) ತಮ್ಮ ಲಿಂಕ್ಡ್ ಇನ್ ಪೋಸ್ಟ್‌ನಲ್ಲಿ ತಂದೆಯ ಫೋಟೋವಿದ್ದ ಪರ್ಸ್ ಕಳೆದುಕೊಂಡ ಘಟನೆಯನ್ನು ವಿವರಿಸಿದ್ದಾರೆ. ಈ ಪೋಸ್ಟ್ ನಲ್ಲಿ ದುಬೈನಲ್ಲಿ ಪ್ರಯಾಣಿಸುವ ವೇಳೆ ಕ್ಯಾಬ್‌ನಿಂದ ಇಳಿದ ಬಳಿಕ ವ್ಯಾಲೆಟ್‌ ನನ್ನ ಪರ್ಸ್ ಇಲ್ಲದಿರುವುದನ್ನು ಗಮನಿಸಿದೆ. ನನ್ನ ವ್ಯಾಲೆಟ್ ಕ್ಯಾಬ್ ನಲ್ಲೇ ಬಿಟ್ಟು ಬಂದೆ ಎಂಬ ಬಗ್ಗೆ ಗಮನ ಹರಿಸಿದೆ. ಕೊನೆಗೆ ಕ್ಯಾಬ್ ಸೇವೆ ಮೂಲಕ ವ್ಯಾಲೆಟ್ ಹುಡುಕುವ ಪ್ರಯತ್ನದಲ್ಲಿ ತೊಡಗಿದೆ.

ವೈರಲ್ ಪೋಸ್ಟ್ ಇಲ್ಲಿದೆ

ಕಳೆದುಕೊಂಡ ವ್ಯಾಲೆಟ್ ಕೈ ಸೇರಿತ್ತು

ಅದರಲ್ಲಿ ಪಾಸ್‌ಪೋರ್ಟ್, ಕಾರ್ಡ್‌ಗಳು ಹಾಗೂ ಹಣದ ಜತೆಗೆ ಕಳೆದ ಡಿಸೆಂಬರ್‌ನಲ್ಲಿ ಅಗಲಿದ ತಂದೆಯ ಪಾಸ್‌ಪೋರ್ಟ್ ಗಾತ್ರದ ಫೋಟೋವಿತ್ತು. ಆತಂಕದಲ್ಲಿದ್ದ ನನಗೆ ಕ್ಯಾಬ್ ಸೇವೆಯ ಕೇರ್ ತಂಡದಿಂದ ಫೋನ್ ಬಂದಿತು. ಕ್ಯಾಬ್ ಡ್ರೈವರ್ ಎಬೆನೆಜರ್ ಅಫಿಬಿ ವ್ಯಾಲೆಟ್‌ ಜೋಪಾನವಾಗಿ ಇಟ್ಟುಕೊಂಡಿರುವುದು ತಿಳಿಯಿತು. ಕೈಗೆ ವ್ಯಾಲೆಟ್ ಸಿಗುತ್ತಿದ್ದಂತೆ ತಂದೆಯ ಫೋಟೋ ಇರುವ ಬಗ್ಗೆ ಖಾತರಿ ಪಡಿಸಿಕೊಂಡೆ.

ಟಿಪ್ಸ್ ನಿರಾಕರಿಸಿದ ಕ್ಯಾಬ್ ಡ್ರೈವರ್

ಕ್ಯಾಬ್ ಡ್ರೈವರ್ ವ್ಯಾಲೆಟ್ ಕೈಗೆ ತಲುಪಿಸುತ್ತಿದ್ದಂತೆ ಡ್ರೈವರ್ ಗೆ ಧನ್ಯವಾದ ಅರ್ಪಿಸಿ ಟಿಪ್ಸ್ ನೀಡಿದೆ. ಆದರೆ ಟಿಪ್ಸ್ ನಿರಾಕರಿಸಿದ ಚಾಲಕ ತಮ್ಮದಲ್ಲದ ವಸ್ತುಗಳನ್ನು ಹಿಂದಿರುಗಿಸುವುದು ನನ್ನ ಅಭ್ಯಾಸ ಎಂದು ನಗುತ್ತಲೇ ಹೇಳಿದ್ರು. ಈ ಡ್ರೈವರ್ ನ ಒಳ್ಳೆತನವನ್ನು ಪೋಸ್ಟ್‌ನಲ್ಲಿ ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ: ಟಿಪ್ಸ್ ವಾಪಾಸ್ ಕೊಟ್ಟ ಕ್ಯಾಬ್ ಡ್ರೈವರ್ ಒಳ್ಳೆತನಕ್ಕೆ ರಷ್ಯನ್ ಲೇಡಿ ಫಿದಾ

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಒಳ್ಳೆತನ ಇವತ್ತಿಗೂ ಜೀವಂತವಾಗಿದೆ ಎಂದಿದ್ದಾರೆ. ಇನ್ನೊಬ್ಬರು, ದುಡ್ಡಿಗಾಗಿ ಬಾಯಿ ಬಿಡುವ ಜನರ ನಡುವೆ ಈ ಕ್ಯಾಬ್ ಚಾಲಕನ ಒಳ್ಳೆತನ ಮನಸ್ಸು ಮುಟ್ಟಿತು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಒಳ್ಳೆಯ ಮನಸ್ಸಿನಿಂದ ಮಾಡಿದ ಸಹಾಯ ಯಾವತ್ತೂ ಒಳ್ಳೆಯದ್ದನ್ನೇ ಮಾಡುತ್ತದೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಕೆಪಿಎಸ್​ಸಿ ಅಕ್ರಮ: ಮಾಜಿ ಅಧ್ಯಕ್ಷ ಶಿವಶಂಕರಪ್ಪ,ಸದಸ್ಯೆ ಗೀತಾ ಇಡಿ ವಶಕ್ಕೆ
ಕೆಪಿಎಸ್​ಸಿ ಅಕ್ರಮ: ಮಾಜಿ ಅಧ್ಯಕ್ಷ ಶಿವಶಂಕರಪ್ಪ,ಸದಸ್ಯೆ ಗೀತಾ ಇಡಿ ವಶಕ್ಕೆ
ಬಿಗ್​​ಬಾಸ್ ಕನ್ನಡ: ‘ಅಯ್ಯೋ ಉರಿ’ ಕಣ್ಣೀರು ಹಾಕಿದ ಕಿರಣ್ ಶಾಸ್ತ್ರಿ
ಬಿಗ್​​ಬಾಸ್ ಕನ್ನಡ: ‘ಅಯ್ಯೋ ಉರಿ’ ಕಣ್ಣೀರು ಹಾಕಿದ ಕಿರಣ್ ಶಾಸ್ತ್ರಿ
ನಮ್ಮ್ ಸಿಎಂ ಫೋನ್‌ಗೆ ಸಿಗಲ್ಲ ಎಂದ ಲಕ್ಷ್ಮಿ ಹೆಬ್ಬಾಳ್ಕರ್
ನಮ್ಮ್ ಸಿಎಂ ಫೋನ್‌ಗೆ ಸಿಗಲ್ಲ ಎಂದ ಲಕ್ಷ್ಮಿ ಹೆಬ್ಬಾಳ್ಕರ್
ದಾವಣಗೆರೆ: ಭತ್ತದ ವ್ಯಾಪಾರಿಯಿಂದ 4 ಕೋಟಿ ವಂಚನೆ ಆರೋಪ
ದಾವಣಗೆರೆ: ಭತ್ತದ ವ್ಯಾಪಾರಿಯಿಂದ 4 ಕೋಟಿ ವಂಚನೆ ಆರೋಪ
ಪ್ರತಿಭಟನೆ ವೇಳೆ ಬ್ಯಾರಿಕೇಡ್ ಹತ್ತಿ ಧ್ವಜ ಬೀಸಿದ ರಾಹುಲ್ ಗಾಂಧಿ!
ಪ್ರತಿಭಟನೆ ವೇಳೆ ಬ್ಯಾರಿಕೇಡ್ ಹತ್ತಿ ಧ್ವಜ ಬೀಸಿದ ರಾಹುಲ್ ಗಾಂಧಿ!
ಕೈದಿ ಬಿಡುಗಡೆಗೆ ಪತ್ನಿ ಮೇಲೆ ಆಸೆ: ಅಪರಾಧಿ ಪತ್ನಿಗೆ ಡಿಐಜಿ ವಿಡಿಯೋ ಕಾಲ್!
ಕೈದಿ ಬಿಡುಗಡೆಗೆ ಪತ್ನಿ ಮೇಲೆ ಆಸೆ: ಅಪರಾಧಿ ಪತ್ನಿಗೆ ಡಿಐಜಿ ವಿಡಿಯೋ ಕಾಲ್!
ವೀರಶೈವ ಲಿಂಗಾಯತ ಸ್ವಾಮೀಜಿಗಳಿಗೆ ಅಗೌರವ ಆರೋಪಕ್ಕೆ ಸ್ಪಷ್ಟನೆ ನೀಡಿದ ಡಿಕೆಶಿ
ವೀರಶೈವ ಲಿಂಗಾಯತ ಸ್ವಾಮೀಜಿಗಳಿಗೆ ಅಗೌರವ ಆರೋಪಕ್ಕೆ ಸ್ಪಷ್ಟನೆ ನೀಡಿದ ಡಿಕೆಶಿ
ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ರಸ್ತೆ ಅಸ್ತವ್ಯಸ್ತ
ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ರಸ್ತೆ ಅಸ್ತವ್ಯಸ್ತ
ಹುಬ್ಬಳ್ಳಿಯ ಜೈನ ಮಂದಿರಗಳಲ್ಲೇ ಪದೇ ಪದೇ ಕಳ್ಳತನ: ಸಮುದಾಯದಿಂದ ಆಕ್ರೋಶ
ಹುಬ್ಬಳ್ಳಿಯ ಜೈನ ಮಂದಿರಗಳಲ್ಲೇ ಪದೇ ಪದೇ ಕಳ್ಳತನ: ಸಮುದಾಯದಿಂದ ಆಕ್ರೋಶ
ಹಿಂದೂ ಮಹಾಗಣಪತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್!
ಹಿಂದೂ ಮಹಾಗಣಪತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್!