Viral: 24ರ ಯುವತಿಯ ಕೈಹಿಡಿದ 74ರ ವೃದ್ಧ; ಮದ್ವೆಯಾದ ಖುಷಿಯಲ್ಲೇ ಫೋಟೋಗ್ರಾಫ್‌ರ್‌ಗೂ ದುಡ್ಡು ನೀಡದೇ ಪರಾರಿಯಾದ ಜೋಡಿ

ಪ್ರೀತಿಯೇ ಹಾಗೆ, ಯಾವಾಗ ಯಾರ ಮೇಲೆ ಪ್ರೀತಿ ಹುಟ್ಟುತ್ತದೆ ಎಂದು ಹೇಳಲಾಗದು. ಆದರೆ ಪ್ರೀತಿಸಿದ ಜೋಡಿಗಳು ಎಲ್ಲಾ ಅಡೆತಡೆಗಳನ್ನು ಮೀರಿ ಮದುವೆಯಾಗಿ ಸುಂದರ ಬದುಕು ಕಟ್ಟಿಕೊಂಡ ಉದಾಹರಣೆಗಳು ಸಾಕಷ್ಟು ಇವೆ. ಆದರೆ ಇಲ್ಲೊಬ್ಬ 74 ರ ವೃದ್ಧ 24ರ ಯುವತಿಯನ್ನು ವರಿಸಿದ್ದಾನೆ. ಮದುವೆಗಾಗಿ ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿದ್ದಾನೆ. ವೈವಾಹಿಕ ಜೀವನಕ್ಕೆ ಕಾಲಿಟ್ಟ ಖುಷಿಯಲ್ಲಿದ್ದ ಈ ಜೋಡಿಯ ವಿರುದ್ಧ ದೂರು ದಾಖಲಾಗಿದ್ದು, ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Viral: 24ರ ಯುವತಿಯ ಕೈಹಿಡಿದ 74ರ ವೃದ್ಧ; ಮದ್ವೆಯಾದ ಖುಷಿಯಲ್ಲೇ ಫೋಟೋಗ್ರಾಫ್‌ರ್‌ಗೂ ದುಡ್ಡು ನೀಡದೇ ಪರಾರಿಯಾದ ಜೋಡಿ
ದರ್ಮನ್ ಹಾಗೂ ಶೆಲಾ ಅರಿಕಾಳ
Image Credit source: Instagram

Updated on: Oct 26, 2025 | 12:45 PM

ಇಂಡೋನೇಷ್ಯಾ, ಅಕ್ಟೋಬರ್ 24: ಪ್ರೀತಿ (Love) ಕುರುಡು. ಪ್ರೀತಿಗೆ ಜಾತಿ-ಧರ್ಮ, ವಯಸ್ಸು, ಅಂತಸ್ತು ಯಾವುದೂ ಅಡ್ಡಿಯಾಗುವುದಿಲ್ಲ ಅಂತಾರೆ. ಹೀಗೆ ಜಾತಿ, ಅಂತಸ್ತು, ವಯಸ್ಸಿನ ಅಂತರವನ್ನೂ ಮೀರಿ ಅದೆಷ್ಟೋ ಜೋಡಿಗಳು ಪ್ರೇಮ ವಿವಾಹವಾಗಿದ್ದಾರೆ. ಇದೀಗ ಇಂತಹದ್ದೇ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಈ ಜೋಡಿಗೆ ವಯಸ್ಸು ದೊಡ್ಡ ವಿಷ್ಯನೇ ಆಗಿಲ್ಲ. ಇಂಡೋನೇಷ್ಯಾದ (Indonesia) 74 ವರ್ಷದ ವ್ಯಕ್ತಿಯೊಬ್ಬರು 24 ವರ್ಷದ ಯುವತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಯುವತಿಗೆ ವಧುದಕ್ಷಿಣೆಯಾಗಿ ಎರಡು ಕೋಟಿ ನೀಡಿದ್ದಾನೆ. ಇಷ್ಟೆಲ್ಲಾ ಅದ್ದೂರಿಯಾಗಿ ಮಾಡಿಕೊಂಡ ಈ ವೃದ್ಧ ಮಾತ್ರ ಫೋಟೋಗ್ರಾಫರ್ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಈ ಈ ನವಜೋಡಿಗಳ ವಿರುದ್ಧ ದೂರು ದಾಖಲಾಗಿದ್ದು, ಅಷ್ಟಕ್ಕೂ ಆಗಿದ್ದೇನು ಎನ್ನುವ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಯುವತಿಯನ್ನು ವರಿಸಿದ ವೃದ್ಧ, ಮುಂದೇನಾಯ್ತು ಗೊತ್ತಾ?

ಇದೇ ಅಕ್ಟೋಬರ್ 1 ರಂದು ಜಾವಾ ಪ್ರಾಂತ್ಯದ ಪ್ಯಾಸಿಟನ್ ರೀಜೆನ್ಸಿಯಲ್ಲಿ ದರ್ಮನ್ ಹಾಗೂ ಶೆಲಾ ಅರಿಕಾಳ ಎಂಬ ಜೋಡಿ ಅದ್ಧೂರಿಯಾಗಿ ವಿವಾಹವಾಗಿದ್ದಾರೆ. ತಮ್ಮ ಮದುವೆಯ ಸುಂದರ ಕ್ಷಣಗಳನ್ನು ಸೆರೆ ಹಿಡಿಯಲು ಫೋಟೋಗ್ರಾಫ್ ಕಂಪೆನಿಯೊಂದಕ್ಕೆ ಕಾಂಟ್ರ್ಯಾಕ್ಟ್ ನೀಡಲಾಗಿದೆ. ಇನ್ನು ವಧುದಕ್ಷಿಣೆ ಸೇರಿದಂತೆ ಬಂದ ಅತಿಥಿಗಳಿಗೆ ಹಣ ನೀಡಿದ್ದ ಈ ವೃದ್ಧ ಈ ಫೋಟೊಗ್ರಾಫ್ ಕಂಪೆನಿಯೂ ಹಣ ನೀಡದೇ ಯಾಮಾರಿಸಿದ್ದಾನೆ. ಹೀಗಾಗಿ ಈ ಜೋಡಿಯ ವಿರುದ್ಧ ಛಾಯಾಗ್ರಾಹಕರು ಮತ್ತು ವಿಡಿಯೋಗ್ರಾಫರ್‌ಗಳಿಗೆ ಹಣ ನೀಡದೆ ನಾಪತ್ತೆಯಾಗಿದ್ದಾರೆ ಎಂಬ ದೂರು ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಎಂಗೇಜ್ಮೆಂಟ್ ಬಳಿಕ ಪ್ರಿಯಕರನಿಗೆ ಬೇರೊಬ್ಬಳ ಸಹವಾಸ; ಬ್ರೇಕಪ್ ಮಾಡ್ಕೊಂಡು ವಿಚಿತ್ರವಾಗಿ ಸೇಡು ತೀರಿಸಿಕೊಂಡ ಯುವತಿ

ಇದನ್ನೂ ಓದಿ
ಕೈಕೊಟ್ಟ ಪ್ರೇಮಿಯ ವಿರುದ್ಧ ವಿಚಿತ್ರವಾಗಿ ಸೇಡು ತೀರಿಸಿಕೊಂಡ ಯುವತಿ
ಫಿಲ್ಟರ್ ಕಾಫಿಯಿಂದ ಮದುವೆ ಪ್ರಸ್ತಾಪದವರೆಗೆ; ಈ ಯುವಕನ ಲವ್‌ ಸ್ಟೋರಿ ನೋಡಿ
92ನೇ ವಯಸ್ಸಿನಲ್ಲಿ 37ನೇ ವಯಸ್ಸಿನ ಪತ್ನಿಯಿಂದ ಗಂಡ ಮಗು ಪಡೆದ ವೈದ್ಯ
ಹೆಂಡ್ತಿ ಬಾಯ್ ಫ್ರೆಂಡ್ ಜೊತೆಯಲ್ಲಿರುವಾಗಲೇ ಪ್ರತ್ಯಕ್ಷನಾದ ಗಂಡ

ದೂರು ದಾಖಲು ಆಗುತ್ತಿದ್ದಂತೆ ಪೊಲೀಸರು ತನಿಖೆ ಕೈಗೊಂಡಿದ್ದು ನವಜೋಡಿಯನ್ನು ಪತ್ತೆ ಹಚ್ಚಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದ ವೇಳೆ ಈ ವೃದ್ಧ ವ್ಯಕ್ತಿ ನಾನು ನನ್ನ ಹೆಂಡತಿಯನ್ನು ಬಿಟ್ಟು ಎಲ್ಲಿಯೂ ಹೋಗಿಲ್ಲ, ನಾವು ಜೊತೆಯಾಗಿ ಇದ್ದೇವೆ ನಾವು ಹನಿಮೂನಿಗೆ ಹೊರಟಿದ್ದೆವು ಎಂದು ಹೇಳಿದ್ದಾನೆ. ನಾಪತ್ತೆಯಾಗಿದ್ದೆವು ಊಹಪೋಹಗಳನ್ನು ನಿರಾಕರಿಸಿದ್ದಾನೆ. ಆದರೆ ಈ ವೃದ್ಧನು ಫೋಟೋಗ್ರಾಫರ್ ಹಾಗೂ ವಿಡಿಯೋಗ್ರಾಫರ್‌ಗಳಿಗೆ ಹಣ ನೀಡದೇ ಇರದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 2:07 pm, Fri, 24 October 25