114 ಕೆ.ಜಿ ಇದ್ದ 25 ವರ್ಷದ ಈ ಯುವತಿ 58 ಕೆ.ಜಿಗೆ ಇಳಿದದ್ದು ಹೇಗೆ?; ನೋಡಿ ಈ ವೈರಲ್ ಪೋಸ್ಟ್

| Updated By: ಶ್ರೀದೇವಿ ಕಳಸದ

Updated on: Nov 21, 2022 | 4:43 PM

Weight Loss : ಒಮ್ಮೆ ಮಗನೊಂದಿಗೆ ಪಾರ್ಕಿನಲ್ಲಿ ಸ್ಲೈಡಿಂಗ್ ಆಟವಾಡುತ್ತಿದ್ದಾಗ ತಿರುವಿನಲ್ಲಿ ಸಿಕ್ಕಿಹಾಕಿಕೊಂಡುಬಿಟ್ಟೆ. ಇದು ದೊಡ್ಡ ಅವಮಾನಕ್ಕೆ ಈಡುಮಾಡಿತು. ಆಗ ನನ್ನ ಸ್ಥೂಲಕಾಯವನ್ನು ಇಳಿಸಲೇಬೇಕು ಎಂದು ನಿರ್ಧರಿಸಿದೆ.

114 ಕೆ.ಜಿ ಇದ್ದ 25 ವರ್ಷದ ಈ ಯುವತಿ 58 ಕೆ.ಜಿಗೆ ಇಳಿದದ್ದು ಹೇಗೆ?; ನೋಡಿ ಈ ವೈರಲ್ ಪೋಸ್ಟ್
Before and After
Follow us on

Viral Video : ತೂಕ ಇಳಿಸುವುದು ಎಂದರೆ ಮಹಾತಪಸ್ಸೇ. ಎಷ್ಟೊಂದು ಬಗೆಗಳಿವೆ ತೂಕ ಕಡಿಮೆ ಮಾಡಿಕೊಳ್ಳಲು. ಆದರೆ ಯಾವ ವಿಧಾನವೂ ಅಷ್ಟು ಸುಲಭವಲ್ಲ. ಕಠಿಣ ಪರಿಶ್ರಮ ಬೇಕೇಬೇಕಾಗುತ್ತದೆ. ಹಾಗೆಯೇ ದೃಢಚಿತ್ತವೂ. ಇದೀಗ ಅಮೆರಿಕದ ಈ ಮಹಿಳೆಯ ತೂಕ ಇಳಿಸಿದ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ. ಈಕೆಯ ವಯಸ್ಸು 25. ಆದರೆ ಈಕೆ ಈ ಮೊದಲು ಹೊಂದಿದ್ದ ತೂಕ 114 ಕೆ.ಜಿ. ಈ ಕೇವಲ 58 ಕೆ.ಜಿ. ಹಾಗಿದ್ದರೆ ಹೇಗೆ ಈಕೆ ತೂಕ ಇಳಿಸಿದರು?

ಸಾರಾ ಲಾಕೆಟ್ ವಾಷಿಂಗ್ಟನ್​ ಡಿಸಿಯಲ್ಲಿ ವಾಸಿಸುತ್ತಿದ್ದಾರೆ. ಒಮ್ಮೆ ಮಗನೊಂದಿಗೆ ಪಾರ್ಕಿನಲ್ಲಿ ಸ್ಲೈಡಿಂಗ್ ಆಟವಾಡುತ್ತಿದ್ದಾಗ ಸಿಕ್ಕಿಹಾಕಿಕೊಂಡುಬಿಟ್ಟರು. ಇದು ಅವರಿಗೆ ದೊಡ್ಡ ಅವಮಾನಕ್ಕೆ ಈಡುಮಾಡಿತು. ಆಗ ಸ್ಥೂಲಕಾಯವನ್ನು ಇನ್ನು ಇಳಿಸಲೇಬೇಕು ಎಂದು ನಿರ್ಧಾರಕ್ಕೆ ಬಂದರು. ನಂತರ ಸ್ಲೈ ಗ್ಯಾಸ್ಟ್ರಿಕ್​ ಸ್ಲೀವ್ ಸರ್ಜರಿ ಮೂಲಕ 58 ಕೇಜಿ ತೂಕವನ್ನು ಇಳಿಸಿಕೊಂಡರು.

‘ಒಮ್ಮೆ ನಾನು ಮಗನೊಂದಿಗೆ ಸ್ಲೈಡಿಂಗ್ ಆಡಲು ಪಾರ್ಕಿಗೆ ಹೋದೆ. ಅವನು ಸ್ಲೈಡಿಂಗ್ ಆಡಲು ಭಯಪಡುತ್ತಿದ್ದ. ಆಗ ಅವನೊಂದಿಗೆ ನಾನೂ ಸ್ಲೈಡಿಂಗ್​ ಮಾಡಲು ತೊಡಗಿದೆ. ಆದರೆ ತಿರುವಿನಲ್ಲಿ ನಾನು ಸಿಕ್ಕಿಹಾಕಿಕೊಂಡು ಬಿಟ್ಟೆ. ನಂತರ ನಾನು ತೂಕ ಇಳಿಸಲೇಬೇಕೆಂದು ನಿರ್ಧಾರ ಕೈಗೊಂಡೆ. ನನ್ನ ಮೊದಲಿನ ಮತ್ತು ಈಗಿನ ಫೋಟೋ ನೋಡಿ ಬಹಳಷ್ಟು ಜನ ಅಚ್ಚರಿಪಡುತ್ತಾರೆ. ಸ್ವಯಂಪ್ರೀತಿ ಉಳಿಸಿಕೊಳ್ಳಬೇಕು. ಅಂದಾಗಲೇ ಇಂಥ ರೂಪಾಂತರಗಳು ಸಂಭವಿಸಲು ಸಾಧ್ಯ’ ಎಂದಿದ್ದಾರೆ ಸಾರಾ.

ಸಾರಾ ಗರ್ಭಿಣಿಯಾಗಿದ್ದಾಗ ಅತಿಯಾಗಿ ತಿನ್ನುಬೇಕು ಎನ್ನಿಸುತ್ತಿತ್ತು. ಆದರೆ ಅದೊಂದೇ ತೂಕ ಹೆಚ್ಚಳಕ್ಕೆ ಕಾರಣವಾಗಿರಲಿಲ್ಲ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಅಷ್ಟೇ ಅಲ್ಲ ಮಧುಮೇಹವೂ ಇತ್ತು. ಆಗ ದಿನಕ್ಕೆ 3,000 ಗಳಷ್ಟು ಆಹಾರವನ್ನು ಸೇವಿಸುತ್ತಿರುವುದನ್ನು ಸ್ವತಃ ಗಮನಿಸಿಕೊಂಡರು. ಆಗಲೇ ತೂಕ ಹೆಚ್ಚುತ್ತ ಹೋಯಿತು. ಈಗ ಅವರಿಗೆ 4 ವರ್ಷದ ಮಗಳು, 2 ವರ್ಷದ ಮಗ ಇದ್ಧಾರೆ.

‘ಶಸ್ತ್ರಚಿಕಿತ್ಸೆಗೆ ಒಳಗಾಗುವ ಮುನ್ನ ನೋವು, ಆತಂಕ ಎಲ್ಲವೂ ಇತ್ತು ಆದರೆ ಜೊತೆಗೆ ಉತ್ಸಾಹವೂ ಇತ್ತು. ನಾನು 2021ರ ಸೆಪ್ಟೆಂಬರ್ ನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡೆ. ಆರೋಗ್ಯವಿಮೆಯಲ್ಲಿ ಶೇ.98 ಪಾವತಿಯಾಗಿದೆ. ನನಗೆ ಒಟ್ಟಾರೆಯಾಗಿ ನನ್ನ ಜೀವನಶೈಲಿ ಮತ್ತು ಆಹಾರಕ್ರಮವನ್ನು ಸಂತುಲನಗೊಳಿಸಿಕೊಂಡು ಮನಸ್ಸನ್ನು, ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳುವುದು ನನ್ನ ಗುರಿಯಾಗಿತ್ತು. ಆ ಪ್ರಕಾರ ನಾನು ಗುರಿಸಾಧಿಸಿದ್ದೇನೆ. ಈ ಪ್ರಯಾಣದ ಬಗ್ಗೆ ಖುಷಿ ಇದೆ’ ಎಂದಿದ್ದಾರೆ ಸಾರಾ.

ನಿಮ್ಮ ಅಭಿಪ್ರಾಯವೇನು ಈ ಬಗ್ಗೆ?

(ವಿ. ಸೂ. : ತೂಕ ಇಳಿಸುವ ಮುನ್ನ ನಿಮ್ಮ ವೈದ್ಯರನ್ನು ಕಾಣುವುದು ಸೂಕ್ತ)

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:03 pm, Mon, 21 November 22