Cancer: ‘ನನ್ನ ಅಪ್ಪ ನನ್ನೆದುರೇ ಅಮ್ಮನನ್ನು ಹೊಡೆಯುತ್ತಿದ್ದರು. ಕ್ರಮೇಣ ಅಪ್ಪ ನನ್ನ ಶಾಲೆಯ ಫೀಸ್ ತುಂಬುವುದನ್ನೂ ಕಡೆಗಣಿಸಿದರು. ಈ ಎಲ್ಲಾ ಪರಿಣಾಮವಾಗಿ ನಾನು ಖಿನ್ನತೆಗೆ ಜಾರಿದೆ. ಚಿಕ್ಕವಯಸ್ಸಿನಲ್ಲಿಯೇ ಸರ್ಕೋಮಾ ಕ್ಯಾನ್ಸರ್ಗೆ ಒಳಗಾದೆ. ನನ್ನ ಪೋಷಕರು ನನ್ನ ಚಿಕಿತ್ಸೆಗೆ ಹಣವನ್ನೂ ಹೊಂದಿಸಲಿಲ್ಲ. ಆಗ ನಾನೇ ನನ್ನ ಚಿಕಿತ್ಸೆಗೆ ನಿಧಿ ಸಂಗ್ರಹಿಸಲಾರಂಭಿಸಿದೆ. ಚಿಕಿತ್ಸೆ ಆರಂಭವಾಯಿತು. ಆದರೆ 8 ತಿಂಗಳ ನಂತರ ಮತ್ತೆ 8 ಗಡ್ಡೆಗಳು ಕಾಣಿಸಿಕೊಂಡವು. ಆಗಲೂ ಧೃತಿಗೆಡಲಿಲ್ಲ. ಈತನಕ ಆರು ಗಡ್ಡೆಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆಯಲಾಗಿದೆ. ಪಾರ್ಟ್ ಟೈಮ್ ಕೆಲಸ, ಟ್ಯೂಷನ್ ಹೇಳುವ ಮೂಲಕ ನನ್ನ ಚಿಕಿತ್ಸೆಗೆ ನಾನೇ ಹಣ ಹೊಂದಿಸಿಕೊಳ್ಳುತ್ತಿದ್ದೇನೆ. ಕ್ಯಾನ್ಸರ್ ಈಗ 4ನೇ ಹಂತದಲ್ಲಿದ್ದರೂ ಇದರಿಂದ ಮುಕ್ತಳಾಗುತ್ತೇನೆ ಎಂಬ ಭರವಸೆ ಇದೆ.’ ದೀಬಾ ಫರ್ಯಾಲ
ಇದನ್ನೂ ಓದಿ : Viral: ಲಂಡನ್; ‘ಮಿಸ್ಟರ್ ರೈಟ್’; ಸಿಗದಿದ್ದಕ್ಕೆ ತನ್ನನ್ನು ತಾನೇ ಮದುವೆಯಾದ ಮಹಿಳೆ
3 ಗಂಟೆಗಳ ಹಿಂದೆ ಇನ್ಸ್ಟಾಗ್ರಾಂನ officialpeopleofindia ಪುಟದಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈತನಕ ಸುಮಾರು 30,000 ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿ ದೀಬಾಗೆ ಸ್ಥೈರ್ಯ ತುಂಬಿದ್ದಾರೆ. ಮಕ್ಕಳನ್ನು ನಿರ್ಗತಿಕರನ್ನಾಗಿ ಮಾಡುವ ಪೋಷಕರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂಥ ತಂದೆತಾಯಿಗಳ ಬಗ್ಗೆ ಏನು ಹೇಳಬೇಕೆಂದು ಗೊತ್ತಾಗುವುದಿಲ್ಲ, ಇಷ್ಟೊಂದು ಸ್ವಾರ್ಥಪರ ಸಮಾಜದಲ್ಲಿ ಇಂಥವರು ಹೇಗೆ ಬದುಕಬೇಕು ಎಂದು ಕೇಳಿದ್ದಾರೆ ಒಬ್ಬರು. ನಿಮ್ಮ ಹೆತ್ತವರ ಬಗ್ಗೆ ಬೇಸರವಿದೆ, ನೀವು ಈ ಯುದ್ಧದಲ್ಲಿ ಏಕಾಂಗಿಯಾಗಿ ಹೋರಾಡಬೇಕು, ಈ ಬಗ್ಗೆ ಅತ್ಯಂತ ವಿಷಾದವಿದೆ ಕ್ಷಮಿಸಿ, ಎಂದಿದ್ದಾರೆ ಇನ್ನೊಬ್ಬರು.
ಇದನ್ನೂ ಓದಿ : Viral Video: ಎಲ್ಲಾದರೂ ಉಂಟೆ? ಕಸವೇ ಕಾಸು, ಅದುವೇ ಫೀಸು; ಆಸ್ಸಾಂನ ಈ ವಿಶಿಷ್ಟ ಶಾಲೆ ನೋಡಿ
ಸಂಬಂಧದಲ್ಲಿ ಪರಸ್ಪರ ಗೌರವ, ಸೌಹಾರ್ದ ಇಲ್ಲದೇ ಇದ್ದಾಗ ಯಾಕೆ ಮಕ್ಕಳನ್ನು ಹುಟ್ಟಿಸುತ್ತಾರೆ ಎಂದು ಮತ್ತೊಬ್ಬರು. ನೀವು ಭರವಸೆಯಂತೆ ಕಾಣುತ್ತಿದ್ದೀರಿ, ಈ ಹಂತದಲ್ಲಿಯೂ ನಿಮ್ಮನ್ನು ನೀವೇ ನಿಭಾಯಿಸಿಕೊಳ್ಳುತ್ತಿದ್ದೀರಿ, ಅದೂ ಕ್ಯಾನ್ಸರ್ನಂತಹ ಮಾರಕ ಮತ್ತು ತುಟ್ಟಿ ರೋಗದೊಂದಿಗೆ ಎಂದಿದ್ದಾರೆ ಮಗದೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ