2025ರಿಂದ ಇನ್ಸ್ಟಾಗ್ರಾಮ್ನಲ್ಲಿ ಈ ಬ್ಯೂಟಿ ಫಿಲ್ಟರ್‌ಗಳು ಲಭ್ಯವಿರುವುದಿಲ್ಲ
ಚೂಪಾದ ಮೂಗು, ದೊಡ್ಡ ತುಟಿಗಳಿಂದ ಯುವತಿಯರನ್ನು ಆಕಷರ್ಣೆಗೆ ಒಳಪಡಿಸುವ ಥರ್ಡ್ ಪಾರ್ಟಿ ಬ್ಯೂಟಿ ಫಿಲ್ಟರ್‌ಗಳು ಯುವತಿಯರ ಮಾನಸಿಕ ಆರೋಗ್ಯವನ್ನು ಹದಗೆಡಿಸುತ್ತಿದೆ. ಜೊತೆಗೆ ಅವರನ್ನು ಕಾಸ್ಮೆಟಿಕ್ ಸರ್ಜರಿಯತ್ತ ಸೆಳೆಯುವಂತೆ ಮಾಡುತ್ತಿದೆ. ಆದ್ದರಿಂದ ಜನವರಿ 2025 ರ ಹೊತ್ತಿಗೆ ಥರ್ಡ್ ಪಾರ್ಟಿ ಆಗ್ಮೆಂಟೆಡ್ ರಿಯಾಲಿಟಿ (AR) ಫಿಲ್ಟರ್‌ಗಳು ಇನ್ನು ಮುಂದೆ ತನ್ನ ಅಪ್ಲಿಕೇಶನ್‌ಗಳಲ್ಲಿ ಲಭ್ಯವಿರುವುದಿಲ್ಲ ಎಂದು ಮೆಟಾ ಘೋಷಿಸಿದೆ.
ಜನವರಿ 2025 ರ ಹೊತ್ತಿಗೆ ಥರ್ಡ್ ಪಾರ್ಟಿ ಆಗ್ಮೆಂಟೆಡ್ ರಿಯಾಲಿಟಿ (AR) ಫಿಲ್ಟರ್‌ಗಳು ಇನ್ನು ಮುಂದೆ ತನ್ನ ಅಪ್ಲಿಕೇಶನ್‌ಗಳಲ್ಲಿ ಲಭ್ಯವಿರುವುದಿಲ್ಲ ಎಂದು ಮೆಟಾ ಘೋಷಿಸಿದೆ. ಇದರರ್ಥ WhatsApp, Facebook ಮತ್ತು ಮುಖ್ಯವಾಗಿ Instagram ನಾದ್ಯಂತ ನೀಡಲಾದ ಎರಡು ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರ-ನಿರ್ಮಿತ ಫಿಲ್ಟರ್‌ಗಳು ಕಣ್ಮರೆಯಾಗುತ್ತವೆ ಎಂದು ವರದಿಯಾಗಿವೆ.
ಜನರು ತಮ್ಮ ಲುಕ್ ಅನ್ನು ಬದಲಾಯಿಸಿಕೊಳ್ಳಲು ಹಾಗೂ ಇನ್ನಷ್ಟು ಸುಂದರವಾಗಿ ಕಾಣಲು ಇನ್ಸ್ಟಾಗ್ರಾಮ್ನಲ್ಲಿ ಬಳಸುತ್ತಿದ್ದ ಹಲವು ಬ್ಯೂಟಿ ಫಿಲ್ಟರ್‌ಗಳು ಕೂಡ ಮಾಯವಾಗಲಿದೆ. ನೋಟವನ್ನು ಸುಂದರಗೊಳಿಸುವ AR ಫಿಲ್ಟರ್‌ಗಳ ಬಳಕೆಯು ಯುವತಿಯರ ಮಾನಸಿಕ ಆರೋಗ್ಯವನ್ನು ಹದಗೆಡಿಸುತ್ತಿದೆ. ಜೊತೆಗೆ ಈ ಫಿಲ್ಟರ್‌ಗಳನ್ನು ತೆಗೆದುಹಾಕುವುದು ಅವಾಸ್ತವಿಕ ಸೌಂದರ್ಯ ಭ್ರಮೆಯಲ್ಲಿ ಬದುಕುವ ಯುವಪೀಳಿಗೆಗೆ ಒಂದು ಮಹತ್ವದ ತಿರುವನ್ನು ನೀಡಲಿದೆ ಎಂದು ಮೆಟಾ ತಿಳಿಸಿದೆ.
ಆದರೆ ಈ ಹಿಂದೆ ಬ್ಯೂಟಿ ಫಿಲ್ಟರ್‌ಗಳಿಗೆ ಸಂಬಂಧಿಸಿದ ಸಾಕಷ್ಟು ದೂರುಗಳು ಬಂದಿದ್ದರು ಕೂಡ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು ಈ ರೀತಿಯ ಫಿಲ್ಟರ್‌ಗಳನ್ನು ತೆಗೆದುಹಾಕುವ ಯೋಜನೆಯನ್ನು ನಿರಾಕರಿಸಿದ್ದರು. ಜೊತೆಗೆ ಫಿಲ್ಟರ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ ಮತ್ತು ಫಿಲ್ಟರ್‌ಗಳು ಹಾನಿಕಾರಕವೆಂದು ಸೂಚಿಸುವ ಯಾವುದೇ ಡೇಟಾ ನೋಡಿಲ್ಲ ಎಂದು ಪ್ರತಿಪಾದಿಸಿದ್ದರು.
ಇದನ್ನೂ ಓದಿ: Kinmemai Rice: ಇದು ವಿಶ್ವದ ಅತ್ಯಂತ ದುಬಾರಿ ಅಕ್ಕಿ,1 ಕೆಜಿಯ ಬೆಲೆ ಎಷ್ಟು ಗೊತ್ತಾ?
ಇದಲ್ಲದೇ ಇತ್ತೀಚೆಗಷ್ಟೇ ಮೆಟಾ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗಾಗಿ ಹೊಸ ಇನ್‌ಸ್ಟಾ ಟೀನ್ ಖಾತೆಗಳನ್ನು ಪರಿಚಯಿಸಿದ್ದು, ಇದರ ಮೂಲಕ ಹದಿಹರೆಯದ ಮಕ್ಕಳ ಇನ್‌ಸ್ಟಾ ಖಾತೆಗಳು ಪೋಷಕರ ನಿಯಂತ್ರಣದಲ್ಲಿರುತ್ತವೆ. ಇನ್‌ಸ್ಟಾವನ್ನು ಮಕ್ಕಳಿಗೂ ಸುರಕ್ಷಿತ ವೇದಿಕೆಯನ್ನಾಗಿ ಮಾಡಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಮೆಟಾ ಹೇಳಿದೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ