International Day of Happiness 2022: ಸದಾ ನಗುತ್ತಿರಿ ಆರೋಗ್ಯ ಸಮಸ್ಯೆಗಳಿಗೆ ಬೈ ಬೈ ಹೇಳಿ

| Updated By: Pavitra Bhat Jigalemane

Updated on: Mar 19, 2022 | 12:07 PM

ಪ್ರತೀ ವರ್ಷ ಮಾರ್ಚ್​ 20 ರಂದು ಅಂತಾರಾಷ್ಟ್ರೀಯ ಸಂತೋಷದ ದಿನವೆಂದು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯು 2013 ರಲ್ಲಿ ಅಂತರರಾಷ್ಟ್ರೀಯ ಸಂತೋಷದ ದಿನವನ್ನು ಆಚರಿಸಲು ಪ್ರಾರಂಭಿಸಿತು.

International Day of Happiness 2022: ಸದಾ ನಗುತ್ತಿರಿ ಆರೋಗ್ಯ ಸಮಸ್ಯೆಗಳಿಗೆ ಬೈ ಬೈ ಹೇಳಿ
ಪ್ರಾತಿನಿಧಿಕ ಚಿತ್ರ
Follow us on

ಬದುಕಿನಲ್ಲಿ ಎಷ್ಟೇ ಹಣವಿದ್ದರೂ, ಎಷ್ಟೇ ದೊಡ್ಡ ಉದ್ಯೋಗವಿದ್ದರೂ ಖುಷಿ ಇಲ್ಲದಿದ್ದರೆ ಜೀವನಕ್ಕೆ ಅರ್ಥವೇ ಇಲ್ಲ ಎಂದರೆ ತಪ್ಪಲ್ಲ. ಖುಷಿ ಬದುಕಿನಲ್ಲಿ ಒಂದಷ್ಟು ಹೊಸ ಸಂಗತಿಗಳೆಡೆಗೆ ಉತ್ಸಾಹವನ್ನೂ ಹೆಚ್ಚಿಸುತ್ತದೆ. ಹೊಸ ಕೆಲಸಗಳಿಗೆ ಪ್ರೇರಣೆ ನೀಡುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಆರೋಗ್ಯವನ್ನು ವೃದ್ದಿಸುತ್ತದೆ. ಇದೇ ಕಾರಣದಿಂದ ವಿಶ್ವಸಂಸ್ಥೆಯೂ ಅಂತಾರಾಷ್ಟ್ರೀಯ ಸಂತೀಷದ ದಿನವನ್ನು ಜಾರಿಗೆ ತಂದಿದೆ. ಪ್ರತೀ ವರ್ಷ ಮಾರ್ಚ್​ 20 ರಂದು ಅಂತಾರಾಷ್ಟ್ರೀಯ ಸಂತೋಷದ ದಿನವೆಂದು (International Day of Happiness) ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯು 2013 ರಲ್ಲಿ ಅಂತರರಾಷ್ಟ್ರೀಯ ಸಂತೋಷದ ದಿನವನ್ನು ಆಚರಿಸಲು ಪ್ರಾರಂಭಿಸಿತು. ಆದರೆ ಅದಕ್ಕಾಗಿ ಒಂದು ನಿರ್ಣಯವನ್ನು ಜುಲೈ 12, 2012 ರಂದು ಅಂಗೀಕರಿಸಲಾಯಿತು.

ಈ ಬಾರಿ ಮಾನವೀಯ ದೃಷ್ಟಿಯಿಂದ ಉಕ್ರೇನ್​ನ ಸಂತೋಷವನ್ನು ಮರಳಿಪಡೆಯಬೇಕೆಂಬ ಉದ್ದೇಶವನ್ನು ಇಟ್ಟುಕೊಂಡು ಈ ಬಾರಿಯ ಥೀಮ್​ ತಯಾರಿಸಲಾಗಿದೆ.  ಎಲ್ಲರ ಸಂತೋಷ ಉಕ್ರೇನ್​ನ ಸಹಜಸ್ಥಿತಿ ಎಂಬುದು ಇಂಟರ್ನ್ಯಾಷನಲ್ ಡೇ ಆಫ್ ಹ್ಯಾಪಿನೆಸ್ ಅಭಿಯಾನದ ಥೀಮ್ ಆಗಿದೆ. ರಷ್ಯಾದ ಆಕ್ರಮಣ ಮತ್ತು ಪರಿಣಾಮವಾಗಿ ಯುದ್ಧಾಪರಾಧಗಳ ಬೆಳಕಿನಲ್ಲಿ ಉಕ್ರೇನ್‌ನೊಂದಿಗೆ ಒಗ್ಗಟ್ಟಿನಿಂದ ನಿಲ್ಲಲು ಇದು ಎಲ್ಲಾ ಮಾನವೀಯತೆಗೆ ಕರೆಯಾಗಿದೆ.

ಜಗತ್ತಿನಲ್ಲಿ ಭೂತಾನ್​ ಮೊಟ್ಟಮೊದಲ ಬಾರಿಗೆ ವಿಶ್ವ ಸಂತೋಷದ ದಿನವನ್ನು ಆಚರಣೆ ಮಾಡಿತು. ಆ ಬಳಿಕ ಜಗತ್ತಿನ ವಿವಿಧ ದೇಶಗಳು ಈ ಆಚರಣೆಯನ್ನು ಜಾರಿಗೆ ತಂದವು. ಈ ಬಾರಿ ಸಂತೋಷದ ರಾಷ್ಟ್ರಗಳಲ್ಲಿ ಭಾರತವೂ ಈ ಶ್ರೇಯಾಂಕದಲ್ಲಿ ಕಾಣಿಸಿಕೊಂಡಿದೆ., ಒಂದು ವರ್ಷದ ಹಿಂದೆ 139 ರಿಂದ ಮೂರು ಸ್ಥಾನಗಳನ್ನು ಜಿಗಿದು 136 ಕ್ಕೆ ತಲುಪಿದೆ. ಫಿನ್ಲ್ಯಾಂಡ್ ಸತತ 5ನೇ ಬಾರಿಗೆ ವಿಶ್ವದ ಅತ್ಯಂತ ಸಂತೋಷದಾಯಕ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸಂತೋಷವಾಗಿದ್ದರೆ ಈ ಸಮಸ್ಯೆಗಳಿಂದ ದೂರವಿರಬಹುದು:

  1. ಹಾರ್ಮೋನುಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ
  2. ತಲೆನೋವು, ಮೈಕೈನೋವು ಶಮನ
  3. ಆಯಸ್ಸು ವೃದ್ಧಿಯಾಗುತ್ತದೆ
  4. ಹೃದಯದ ಆರೋಗ್ಯಕ್ಕೆ ಒಳ್ಳೆಯದು
  5. ಚರ್ಮದ ಕಾಂತಿ ಹೆಚ್ಚಿಸುತ್ತದೆ

ಇದನ್ನೂ ಓದಿ:

Summer Health Tips: ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಹರಸಾಹಸ ಬೇಡ: ಈ ಕ್ರಮಗಳನ್ನು ಪಾಲಿಸಿ