ಸಾಮಾಜಿಕ ಜಾಲತಾಣದಲ್ಲಿ ಬೃಹತ್ ಮೀನಿನ (Fish) ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೆನಡಾದ ಮೀನುಗಾರರೊಬ್ಬರು ಡೈನೋಸಾರ್ ಎನ್ನುವ ಮೀನನ್ನು ಹಿಡಿದಿದ್ದಾರೆ. ಕೆನಡಾದ ಮೀನುಗಾರ ಯವೆಸ್ ಬಿಸ್ಸನ್ ಅವರು ಇತ್ತೀಚೆಗೆ ಬ್ರಿಟಿಷ್ ಕೊಲಂಬಿಯಾದಲ್ಲಿ ಈ ಬೃಹತ್ ಮೀನನ್ನು ಹಿಡಿದಿದ್ದಾರೆ ಇದನ್ನು ‘ಜೀವಂತ ಡೈನೋಸಾರ್’ (Living Dinosaur) ಎಂದು ಕರೆದಿದ್ದಾರೆ. 10.5 ಅಡಿಗಳಷ್ಟು ಮೀನು ಇದೆ ಎಂದು ಅವರು ಹೇಳಿದ್ದಾರೆ. ಸ್ಟರ್ಜನ್ (sturgeon)ಎನ್ನುವ ಹೆಸರಿನ ಮೀನು ಇದಾಗಿದೆ.
250 kg sturgeon caught in Canada
The giant was captured in British Columbia, measured, RFID-tagged, and released. According to experts, the fish is over 100 years old pic.twitter.com/S8JrANxMM9
— rajiv (@rajbindas86) March 18, 2022
ಈ ಮೀನನ್ನು ಸೆರೆಹಿಡಿದು ಮತ್ತೆ ನೀರಿಗೆ ಬಿಟ್ಟ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಸ್ಸನ್ ಅವರು ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. 10 ಅಡಿ ಉದ್ದದ ಮೀನನ್ನು ನೋಡಿ ನೆಟ್ಟಿಗರು ಹೌಹಾರಿದ್ದಾರೆ. ತನ್ನನ್ನು ತಾನು ‘ಸ್ಟರ್ಜನ್ ಗೈಡ್’ ಎಂದು ಬಣ್ಣಿಸಿಕೊಳ್ಳುವ ಬಿಸ್ಸನ್,ಇದು ನಾನು ನೋಡಿದ ಅತಿ ದೊಡ್ಡ ಮೀನು ಎಂದು ಹೇಳಿದ್ದಾರೆ. ವಿಡಿಯೋದಲ್ಲಿ ಬಿಸ್ಸನ್ ಅವರು ಮೀನಿನ ಬಗ್ಗೆ ಮೀನು 10.5 ಅಡಿ ಉದ್ದವಿದೆ. ಬಹುಷಃ 500 ರಿಂದ 600 ಪೌಂಡ್ ತೂಕವಿರಬಹುದು ಎಂದು ಹೇಳಿದ್ದಾರೆ.
ಬಿಸ್ಸನ್ ಕೆನಡಾದ ಫ್ರೇಸರ್ ನದಿಯಲ್ಲಿ ವಾಸಿಸುವ ಸ್ಟರ್ಜನ್ ಮೀನುಗಳ ಬಗ್ಗೆ ಅಧ್ಯಯನ ನಡೆಸಿ ಪರಿಣಿತರಾಗಿದ್ದಾರೆ. ಅವರು ಸೆರೆ ಹಿಡಿದ ಮೀನು ಒಂದು ಶತಮಾನಕ್ಕೂ ಹಿಂದಿನದ್ದಾಗಿರಬಹುದು ಎಂದು ಊಹಿಸಿದ್ದಾರೆ. ಟ್ರಯಾಸಿಕ್ ಅವಧಿಯಲ್ಲಿ (245-208 ಮಿಲಿಯನ್ ವರ್ಷಗಳ ಹಿಂದೆ) ಕಾಣಿಸಿಕೊಂಡ 29 ಜಾತಿಗಳಲ್ಲಿ ಸ್ಟರ್ಜನ್ ಮೀನು ಸಾಮಾನ್ಯ ಹೆಸರಾಗಿದೆ ಮತ್ತು ವಿಕಾಸದಲ್ಲಿ ಅನೇಕ ಗಮನಾರ್ಹ ಬದಲಾವಣೆಗಳಿಗೆ ಒಳಗಾಗಿಲ್ಲ. ಹೀಗಾಗಿ ಇನ್ನೂ ಇದು ಅತೀ ಅಪರೂಪದ ಮೀನು ಎಂದೇ ಹೇಳಲಾಗಿದೆ.
ಇದನ್ನೂ ಓದಿ:
Video: ಈ ವ್ಯಾಪಾರಿಯ ಬಳಿ ಬಾಂಬೆ ಮಿಠಾಯಿ ಖರೀದಿ ಮಾಡೋದಿದ್ರೆ ಹಣ ಬೇಡ, ಬದಲಿಗೆ ಇದೊಂದು ವಸ್ತು ಕೊಡಿ ಸಾಕು !
Published On - 4:55 pm, Sat, 19 March 22