International Yoga Day 2022: 22,850 ಅಡಿ ಎತ್ತರದಲ್ಲಿ ಯೋಗಾಭ್ಯಾಸ ಮಾಡಿದ ITBP ಸಿಬ್ಬಂದಿಗಳು!

| Updated By: Rakesh Nayak Manchi

Updated on: Jun 14, 2022 | 8:13 AM

ಯೋಗ ದಿನಾಚರಣೆಗೂ ಮುನ್ನವೇ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಸಿಬ್ಬಂದಿಗಳು ಉತ್ತರಾಖಂಡದ ಹಿಮಾಲಯದಲ್ಲಿ 22,850 ಅಡಿ ಎತ್ತರದಲ್ಲಿ ಯೋಗವನ್ನು ಅಭ್ಯಾಸ ಮಾಡಿ ಗಮನಸೆಳೆದಿದ್ದಾರೆ. 14 ಸಿಬ್ಬಂದಿಗಳು ಸುಮಾರು 20 ನಿಮಿಷಗಳ ಕಾಲ ಯೋಗಾಭ್ಯಾಸ ನಡೆಸಿದರು.

International Yoga Day 2022: 22,850 ಅಡಿ ಎತ್ತರದಲ್ಲಿ ಯೋಗಾಭ್ಯಾಸ ಮಾಡಿದ ITBP ಸಿಬ್ಬಂದಿಗಳು!
ಯೋಗಾಭ್ಯಾಸ ಮಾಡಿದ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಸಿಬ್ಬಂದಿಗಳು
Image Credit source: ITBP
Follow us on

ಶಿಮ್ಲಾ: ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನಾ (International Yoga Day)ಚರಣೆಯನ್ನು ಆಚರಿಸಲಾಗುತ್ತಿದೆ. ಭಾರತದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿ ಯೋಗ ದಿನ ಆಚರಿಸಲಾಗುತ್ತಿದ್ದು, ಹಲವೆಡೆ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಈ ನಡುವೆ ಯೋಗ ದಿನಾಚರಣೆಯ ಪ್ರಯುಕ್ತ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಸಿಬ್ಬಂದಿಗಳು ಹಿಮಾಚಲ ಪ್ರದೇಶದ ಎತ್ತರದ ಬಾರ್ಡರ್ ಔಟ್ ಪೋಸ್ಟ್‌ಗಳಲ್ಲಿ ಯೋಗಾಭ್ಯಾಸ ನಡೆಸಿದ್ದಾರೆ. ಹಿಮದಿಂದ ಆವೃತವಾದ ಉತ್ತರಾಖಂಡದ ಹಿಮಾಲಯದಲ್ಲಿ 22,850 ಅಡಿ ಎತ್ತರದಲ್ಲಿ ಯೋಗವನ್ನು ಅಭ್ಯಾಸ ಮಾಡಿ ಗಮನಸೆಳೆದಿದ್ದಾರೆ. ಒಟ್ಟು 14 ಸಿಬ್ಬಂದಿಗಳು ಸುಮಾರು 20 ನಿಮಿಷಗಳ ಕಾಲ ಯೋಗಾಭ್ಯಾಸ ನಡೆಸಿದ್ದಾರೆ.

ಇದನ್ನೂ ಓದಿ: Viral Video: ರಸ್ತೆ ಮಧ್ಯೆ ವಾಹನಕ್ಕೆ ಅಡ್ಡ ಹಾಕಿ, ಆಹಾರಕ್ಕಾಗಿ ಹುಡುಕಾಡಿದ ಆನೆ; ವಿಡಿಯೋ ವೈರಲ್

ಲಡಾಕ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ಸೇರಿದಂತೆ ಭಾರತ-ಚೀನಾ ಗಡಿಯಲ್ಲಿನ ವಿವಿಧ ಎತ್ತರದ ಹಿಮಾಲಯ ಶ್ರೇಣಿಗಳಲ್ಲಿ ಸೂರ್ಯ ನಮಸ್ಕಾರ ಸೇರಿದಂತೆ ವಿವಿಧ ಆಸನಗಳು ಮತ್ತು ಇತರ ಯೋಗಾಸನಗಳನ್ನು ಮಾಡುವ ಮೂಲಕ ಐಟಿಬಿಪಿ ಸಿಬ್ಬಂದಿ ಯೋಗವನ್ನು ಉತ್ತೇಜಿಸುವಲ್ಲಿ ಮಾದರಿಯಾಗಿದ್ದಾರೆ.

ಇದನ್ನೂ ಓದಿ: Viral Video : ‘ಪಸೂರಿ’ ಹಾಡನ್ನು ಅಡುಗೆ ಮನೆಯಲ್ಲಿ ಅದ್ಭುತವಾಗಿ ಹಾಡಿದ ಯುವತಿ!

ಆಯುಷ್ ಸಚಿವಾಲಯದಿಂದ ಜೂನ್ 21 ರಂದು ಭಾರತದಲ್ಲಿ ಮತ್ತು ಜಗತ್ತಿನಾದ್ಯಂತ 8ನೇ ಅಂತಾರಾಷ್ಟ್ರೀಯ ಯೋಗ ದಿನ ಆಯೋಜಿಸಲಾಗಿದ್ದು, ಈ ಬಾರಿಯ ಥೀಮ್ “ಮಾನವೀಯತೆಗಾಗಿ ಯೋಗ” ಆಗಿದೆ. ಕೊರೋನಾ ಸಾಂಕ್ರಮಿಕ ಸಮಯದಲ್ಲಿ ಯೋಗವು ದುಃಖವನ್ನು ನಿವಾರಿಸುವಲ್ಲಿ ಮತ್ತು ಕೋವಿಡ್ ನಂತರದ ಭೌಗೋಳಿಕ-ರಾಜಕೀಯ ಸನ್ನಿವೇಶದಲ್ಲಿ ಮಾನವೀಯತೆಗಾಗಿ ಸೇವೆ ಸಲ್ಲಿಸಿತು. ಯೋಗವು ಏಕತೆಯ ಭಾವವನ್ನು ಬೆಳೆಸುತ್ತದೆ, ಸಹಾನುಭೂತಿ, ದಯೆಯ ಮೂಲಕ ಜನರನ್ನು ಒಟ್ಟುಗೂಡಿಸುತ್ತದೆ ಮತ್ತು ಜನರಲ್ಲಿ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುತ್ತದೆ.

ಇದನ್ನೂ ಓದಿ: Viral: ಒಂದು ಕಾಂಡೋಮ್ ಪ್ಯಾಕ್ ಬೆಲೆ 60,000 ರೂಪಾಯಿ! ಎಲ್ಲಿ ಗೊತ್ತಾ?

ಅಂತಾರಾಷ್ಟ್ರೀಯ ಯೋಗ ದಿನಾಚರಣೆ 2022ರ ಪ್ರಾತ್ಯಕ್ಷಿಕೆ ಕರ್ನಾಟಕದ ಮೈಸೂರಿನಲ್ಲಿ ನಡೆಯಲಿದೆ. ಅಂತಾರಾಷ್ಟ್ರೀಯ ಯೋಗ ದಿನದ 8ನೇ ಆವೃತ್ತಿಯು ಹಲವು ಪ್ರಥಮಗಳನ್ನು ಕಾಣಲಿದೆ. ರಾಷ್ಟ್ರವು “ಆಜಾದಿ ಕಾ ಅಮೃತ್ ಮಹೋತ್ಸವ” ವನ್ನು ಆಚರಿಸುತ್ತಿರುವಂತೆಯೇ 75 ರಾಷ್ಟ್ರೀಯ ಮಟ್ಟದ ಸಾಂಪ್ರದಾಯಿಕ ತಾಣಗಳು ಜೂನ್ 21 ರಂದು ಸಾಮೂಹಿಕ ಯೋಗ ಪ್ರದರ್ಶನವನ್ನು ಪ್ರದರ್ಶಿಸಲಿವೆ. ಆಯಾ ರಾಜ್ಯಗಳು ತಮ್ಮ ಆಯ್ಕೆಯ ಪ್ರಕಾರ 75 ಪ್ರಮುಖ ಸ್ಥಳಗಳಲ್ಲಿ ಇದೇ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ