Viral Video: ರಸ್ತೆ ಮಧ್ಯೆ ವಾಹನಕ್ಕೆ ಅಡ್ಡ ಹಾಕಿ, ಆಹಾರಕ್ಕಾಗಿ ಹುಡುಕಾಡಿದ ಆನೆ; ವಿಡಿಯೋ ವೈರಲ್
ತನ್ನ ಹೊಟ್ಟೆ ತುಂಬಿಸಿಕೊಳ್ಳಲು ರಸ್ತೆಗೆ ಬರುವ ಆನೆ ವಾಹನವನ್ನು ಅಡಡ್ ಹಾಕಿ, ತನಗೆ ಬೇಕಾದ ಆಹಾರವೇನಾದರೂ ಇದೆಯಾ? ಎಂದು ಹುಡುಕುತ್ತದೆ. ತನಗೆ ಬೇಕಾದುದನ್ನು ತಿಂದು, ನಂತರ ತನ್ನಷ್ಟಕ್ಕೆ ತಾನು ಕಾಡಿನೊಳಗೆ ಹೋಗುತ್ತದೆ.
ಸಾಮಾಜಿಕ ಜಾಲತಾಣದಲ್ಲಿ ಒಮ್ಮೆ ಕಣ್ಣಾಡಿಸಿದರೆ ಕಾಡು ಪ್ರಾಣಿಗಳ ಅನೇಕ ಆಘಾತಕಾರಿ, ತಮಾಷೆಯ, ಎಮೋಷನಲ್ ವಿಡಿಯೋಗಳು ಕಾಣುತ್ತವೆ. ಆಹಾರವನ್ನು ಹುಡುಕುತ್ತಾ ಕಾಡು ದಾಟಿ ಊರಿಗೂ ಕಾಲಿಡುವ ಪ್ರಾಣಿಗಳು ದಾಂಧಲೆ ಎಬ್ಬಿಸಿ, ಜನರನ್ನು ಹೆದರಿಸಿದ ಸಾಕಷ್ಟು ಉದಾಹರಣೆಗಳಿವೆ. ಅದರಲ್ಲೂ ಸಸ್ಯಾಹಾರಿಗಳಾದ ಆನೆಗಳು (Elephants) ಆಗಾಗ ಕಾಡಿನಾಚೆಯ ತೋಟಗಳಿಗೆ ನುಗ್ಗಿ ಬೆಳೆಯನ್ನು ತಿನ್ನುವುದು ಸಾಮಾನ್ಯ. ಆದರೆ, ಇಲ್ಲೊಂದು ಬುದ್ಧಿವಂತ ಆನೆ ಸುಮ್ಮನೆ ಊರೊಳಗೆ ಹೋಗಿ ದಾಂಧಲೆ ಎಬ್ಬಿಸುವುದು ಯಾಕೆಂದು ಕಾಡಿನ ಬಳಿ ರಸ್ತೆಯಲ್ಲಿ ಬರುವ ವಾಹನಗಳನ್ನು ಅಡ್ಡಗಟ್ಟಿ ಅದರೊಳಗಿರುವ ಆಹಾರ ಪದಾರ್ಥವನ್ನೆಲ್ಲ ತಿಂದು ಕಳುಹಿಸುತ್ತಿದೆ.
ತನ್ನ ಹೊಟ್ಟೆ ತುಂಬಿಸಿಕೊಳ್ಳಲು ರಸ್ತೆಗೆ ಬರುವ ಆನೆ ವಾಹನವನ್ನು ಅಡ್ಡ ಹಾಕಿ, ತನಗೆ ಬೇಕಾದ ಆಹಾರವೇನಾದರೂ ಇದೆಯಾ? ಎಂದು ಹುಡುಕುತ್ತದೆ. ತನಗೆ ಬೇಕಾದುದನ್ನು ತಿಂದು, ನಂತರ ತನ್ನಷ್ಟಕ್ಕೆ ತಾನು ಕಾಡಿನೊಳಗೆ ಹೋಗುತ್ತದೆ. ಆ ವಾಹನಕ್ಕಾಗಲಿ, ಡ್ರೈವರ್ಗಾಗಲಿ ಯಾವುದೇ ತೊಂದರೆ ಕೊಡುವುದಿಲ್ಲ.
ವೇಗವಾಗಿ ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ಅರಣ್ಯಗಳ ಪ್ರದೇಶವು ಗಮನಾರ್ಹವಾಗಿ ಕುಗ್ಗಿದೆ. ಹಲವೆಡೆ ಕಾಡುಗಳ ಮೂಲಕ ದೊಡ್ಡ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ. ಹೀಗಾಗಿ, ಜನರು ಕಾಡುಗಳಲ್ಲಿ ಹಾದು ಹೋಗುವಾಗ ಕಾಡು ಪ್ರಾಣಿಗಳತ್ತ ಗಮನಹರಿಸಬೇಕು.
ಇದನ್ನೂ ಓದಿ: Viral Video: ಆ್ಯಂಬುಲೆನ್ಸ್ ಇಲ್ಲದೆ 4 ವರ್ಷದ ಮಗಳ ಹೆಣವನ್ನು ಹೊತ್ತು ಬಸ್ನಲ್ಲಿ ಹೋದ ತಂದೆ!
ದೊಡ್ಡ ಗಾತ್ರದ ಸಣ್ಣ ಪ್ರಾಣಿಗಳು ವಾಹನಗಳನ್ನು ನೋಡಿ ಓಡಿಹೋಗುತ್ತವೆ. ಆದರೆ ಆನೆ ಎದುರು ಬಂದರೆ ವಾಹನಗಳ ಸವಾರರು ಗಾಡಿ ನಿಲ್ಲಿಸದೆ ಬೇರೆ ವಿಧಿಯೇ ಇರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಇಂತಹದೊಂದು ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬರುತ್ತಿದೆ. ಇದರಲ್ಲಿ ಆನೆಯೊಂದು ಕಾಡಿನ ಮಧ್ಯೆ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿ, ಅದರಲ್ಲಿಟ್ಟಿದ್ದ ಸಾಮಾನುಗಳನ್ನು ಹುಡುಕಾಡಿ, ಆಹಾರವನ್ನು ದೋಚುತ್ತಿರುವುದನ್ನು ನೋಡಬಹುದು.
Road tax officer? pic.twitter.com/JKkf7DRRi1
— Susanta Nanda IFS (@susantananda3) June 11, 2022
ರಲ್ ಆಗುತ್ತಿರುವ ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆನೆಯೊಂದು ರಸ್ತೆಯ ಮಧ್ಯದಲ್ಲಿ ನಿಂತು ವಾಹನದ ಹಿಂದೆ ಇಟ್ಟಿದ್ದ ಸಾಮಾನುಗಳನ್ನು ಪರಿಶೀಲಿಸುತ್ತಿದೆ. ಅಲ್ಲಿ ಆಹಾರ ಪದಾರ್ಥಗಳು ಸಿಗದಿದ್ದಾಗ ಬೇರೆ ವಾಹನದತ್ತ ಹೋಗಿದೆ. ನಂತರ ಬೇರೆ ವಾಹನದಲ್ಲಿದ್ದ ಆಹಾರವನ್ನು ತಿನ್ನುತ್ತಿದೆ.
ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:57 pm, Mon, 13 June 22