Viral: ಆನೆಗಳು ಕಾಣಿಸಿಕೊಂಡ ತಕ್ಷಣವೇ ಕಾಲ್ಕಿತ್ತ ಸಿಂಹಗಳು! ‘ಕಾಡಿನ ರಾಜ ಯಾರು?’ ಎಂದು ಪ್ರಶ್ನಿಸಿದ ನೆಟ್ಟಿಗರು
Lions | Elephants: ಆನೆಗಳು ಬೇರೆ ಪ್ರಾಣಿಗಳ ಮೇಲೆ ದಾಳಿ ಮಾಡುವುದಿಲ್ಲ ನಿಜ. ಆದರೆ ಸ್ವರಕ್ಷಣೆಯ ವಿಚಾರಕ್ಕೆ ಬಂದಾಗ ಅವುಗಳು ಹೋರಾಡುತ್ತವೆ. ಸಿಂಹಗಳು ಆಹಾರದ ವಿಚಾರಕ್ಕೆ ಬಂದಾಗ ಬೇಟೆಯಾಡುವಂಥವುಗಳು. ಆದರೆ ಇಲ್ಲೊಂದು ಅಚ್ಚರಿಯ ಘಟನೆಯ ವಿಡಿಯೋ ಇದೆ; ನೋಡಿ.
ವನ್ಯ ಜೀವಿಗಳ ಜೀವನಶೈಲಿ ಬಹಳ ಅದ್ಭುತವಾಗಿರುತ್ತವೆ. ಅವುಗಳು ತಮ್ಮ ಆಹಾರದ ವಿಚಾರಕ್ಕೆ ಬಂದರೆ ಮಾತ್ರ ಬೇಟೆಯಾಡುತ್ತವೆಯೇ ಹೊರತು ಸ್ವಪ್ರತಿಷ್ಠೆಗೆ ಮತ್ತೊಂದು ಪ್ರಾಣಿಯೊಂದಿಗೆ ಜಗಳ ಕಾಯಲು ಹೋಗುವುದಿಲ್ಲ. ಇದನ್ನು ಸಾಕ್ಷೀಕರಿಸುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕಾಡಿನ ರಾಜ ಎಂದು ಕರೆಯಲ್ಪಡುವ ಸಿಂಹವು (Lion) ತನ್ನ ಕುಟುಂಬದೊಂದಿಗೆ ವಿಶ್ರಾಂತಿ ಮಾಡುತ್ತಿರುತ್ತದೆ. ಈ ವೇಳೆ ಆನೆಗಳ ಹಿಂಡಿನ ಆಗಮನವಾಗಿದೆ. ನಂತರ ನಡೆದಿರುವುದು ಜನರಿಗೆ ಆಶ್ಚರ್ಯವಾದರೂ ಕಾಡಿನಲ್ಲಿ ಮಾಮೂಲಿ. ಕಾರಣ, ಆನೆಗಳ ಹಿಂಡಿನ (Elephants) ಆಗಮನವಾಗುತ್ತಿದ್ದಂತೇ ಸಿಂಹದ ಹಿಂಡು ಕಾಲ್ಕಿತ್ತಿದೆ. ಅನೆಗಳು ತಮ್ಮ ಪಾಡಿಗೆ ತಾವು ಮುಂದುವರೆದುಕೊಂಡು ಹೋಗಿವೆ. ಸಿಂಹಗಳು ಕೂಡ ಆ ಸ್ಥಳದಿಂದ ಮಾಯವಾಗಿವೆ.
ಆನೆಗಳು ಬೇರೆ ಪ್ರಾಣಿಗಳ ಮೇಲೆ ದಾಳಿ ಮಾಡುವುದಿಲ್ಲ ನಿಜ. ಆದರೆ ಸ್ವರಕ್ಷಣೆಯ ವಿಚಾರಕ್ಕೆ ಬಂದಾಗ ಅವುಗಳು ಹೋರಾಡುತ್ತವೆ. ಸಿಂಹಗಳೂ ಕೂಡ ಹೊಟ್ಟೆಪಾಡಿನ ಅನಿವಾರ್ಯತೆ ಇಲ್ಲದಿದ್ದರೆ ಸುಮ್ಮನುಳಿಯುವಂಥವುಗಳು. ಒಂದು ವೇಳೆ ಅನಿವಾರ್ಯವಿದ್ದರೂ ಆನೆಗಳು ಹಿಂಡಿನೊಂದಿಗಿದ್ದಾಗ ಸಿಂಹಗಳು ಬೇಟೆಯಾಡಲು ಹೋಗುವುದಿಲ್ಲ. ಕಾರಣ ಅದೆಂದಿಗೂ ಅಪಾಯಕಾರಿ.
ಈ ವಿಡಿಯೋದಲ್ಲಿ ಆನೆಗಳಿಗೆ ಸಿಂಹಗಳು ಹಾದಿ ಬಿಟ್ಟುಕೊಡುತ್ತಿರುವ ವಿಡಿಯೋ ಸೆರೆಯಾಗಿದೆ. ಮೊದಲಿಗೆ ಇತರ ಸಿಂಹಗಳು ಆನೆ ಹಿಂಡನ್ನು ನೋಡಿ ಓಡಿ ಹೋಗಿವೆ. ಒಂದು ಸಿಂಹ ಮಾತ್ರ ಆನೆಗಳನ್ನು ಎದುರಿಸಲು ಮುಂದಾಗುತ್ತದೆ. ಆದರೆ ತಕ್ಷಣವೇ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಅದೂ ಕೂಡ ಕಾಲ್ಕೀಳುತ್ತದೆ. ಈ ದೃಶ್ಯಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ:
View this post on Instagram
animalcoterie ಖಾತೆಯಿಂದ ವಿಡಿಯೋ ಹಂಚಿಕೊಳ್ಳಲಾಗಿದೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಜನರು ಥರಹೇವಾರಿ ಕಾಮೆಂಟ್ಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ. ನಿಜವಾಗಿಯೂ ‘ಕಾಡಿನ ರಾಜ’ ಯಾರು? ಎಂದು ಪ್ರಶ್ನೆ ಕೇಳಿ ನಕ್ಕಿದ್ದಾರೆ ನೆಟ್ಟಿಗರು.
ಬೇಟೆಗೆ ಸಿಗದ ಆನೆ; ವೈರಲ್ ಆಗಿತ್ತು ಮತ್ತೊಂದು ವಿಡಿಯೋ:
ಇತ್ತೀಚೆಗೆ ಇಂಥದ್ದೇ ಒಂದು ವಿಡಿಯೋ ವೈರಲ್ ಆಗಿತ್ತು. ಅದರಲ್ಲಿ ಸಿಂಹವೊಂದು ಆನೆಯನ್ನು ಬೇಟೆಯಾಡಲು ಪ್ರಯತ್ನಿಸುತ್ತಿತ್ತು. ಸಾಮಾನ್ಯವಾಗಿ ಆನೆಯನ್ನು ಬೇಟೆಯಾಡಲು ಎರಡು ಗಂಡು ಸಿಂಹಗಳಾದರೂ ಒಟ್ಟಾಗಿ ದಾಳಿ ಮಾಡಬೇಕು. ಸಣ್ಣ ಆನೆಯನ್ನಾದರೆ ಪ್ರೌಢ ಸಿಂಹವೊಂದೇ ಬೇಟೆಯಾಡಬಹುದು ಎನ್ನಲಾಗುತ್ತದೆ. ಆ ವಿಡಿಯೋದಲ್ಲಿ ಆನೆಯನ್ನು ಒಂದೇ ಸಿಂಹವು ಬೇಟೆಯಾಡಲು ಮುಂದಾಗಿತ್ತು. ಆದರೆ ತನ್ನ ಪ್ರಯತ್ನದಲ್ಲಿ ಅದು ಯಶಸ್ವಿಯಾಗಲಿಲ್ಲ. ಕೊನೆಗೆ ಆನೆಯಿಂದ ತಪ್ಪಿಸಿಕೊಂಡು ಓಡಬೇಕಾಗಿ ಬಂದಿತು. ವೈರಲ್ ಆಗಿದ್ದ ಆ ವಿಡಿಯೋ ಇಲ್ಲಿದೆ.
— Life and nature (@afaf66551) June 24, 2021
ಇದನ್ನೂ ಓದಿ: ಆನೆ ಮತ್ತು ಸಿಂಹಿಣಿ ಮಧ್ಯೆ ತೀವ್ರ ಕಾಳಗ; ಗೆದ್ದೋರ್ಯಾರು..! ಸೋತವರ್ಯಾರು..! ಇಲ್ಲಿದೆ ವೈರಲ್ ವಿಡಿಯೋ
ಆನೆಗಳ ಒಂದು ಹಿಂಡು ಸಕಲೇಶಪುರದಲ್ಲಿ ಕೆರೆಯೊಂದಕ್ಕೆ ಬಂದು ಆಟವಾಡಿ ಗ್ರೂಪ್ ಫೋಟೋಗೆ ಪೋಸ್ ನೀಡಿದ್ದು!