AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ವಿಶ್ವದ ಅತಿ ದೊಡ್ಡ ಚಿಕನ್ ನಗೆಟ್ ತಯಾರಿಸಿದ ಬಾಣಸಿಗ, ಹೇಗೆ ತಯಾರಿಸಿದ್ದಾರೆ ನೋಡಿ

ಅಮೆರಿಕದ ಸೆಲೆಬ್ರಿಟಿ ಬಾಣಸಿಗ ನಿಕ್ ಡಿಜಿಯೊವಾನಿ ಮತ್ತು ಜಪಾನ್‌ನ ಲಿನ್ ಡೇವಿಸ್ ಅವರು ಮತ್ತೊಂದು ವಿಶ್ವ ದಾಖಲೆ ಬರೆದಿದ್ದಾರೆ. ವಿಶ್ವದ ಅತಿ ದೊಡ್ಡ ಚಿಕನ್ ನಗೆಟ್ ತಯಾರಿಸಿ ಗಿನ್ನಿಸ್ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ.

Viral Video: ವಿಶ್ವದ ಅತಿ ದೊಡ್ಡ ಚಿಕನ್ ನಗೆಟ್ ತಯಾರಿಸಿದ ಬಾಣಸಿಗ, ಹೇಗೆ ತಯಾರಿಸಿದ್ದಾರೆ ನೋಡಿ
ಗಿನ್ನಿಸ್ ದಾಖಲೆ ಬರೆದ ನಿಕ್ ಡಿಜಿಯೋವನ್ನಿ
TV9 Web
| Updated By: Digi Tech Desk|

Updated on:Jun 13, 2022 | 11:15 AM

Share

ಅಮೆರಿಕದ ಸೆಲೆಬ್ರಿಟಿ ಬಾಣಸಿಗ ನಿಕ್ ಡಿಜಿಯೊವಾನಿ (Nick DiGiovanni) ಮತ್ತು ಜಪಾನ್‌ನ ಲಿನ್ ಡೇವಿಸ್ (Lynn Davis) ಮತ್ತೊಂದು ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಕಳೆದ ಬಾರಿ 44.24 ಕೆಜಿ ತೂಕದ ವಿಶ್ವದ ಅತಿದೊಡ್ಡ ಕೇಕ್ ಪಾಪ್ ಅನ್ನು ತಯಾರಿಸಿದ್ದ ನಿಕ್, ಈ ಬಾರಿ ವಿಶ್ವದ ಅತಿ ದೊಡ್ಡ ಚಿಕನ್ ನಗೆಟ್ ಅನ್ನು ತಯಾರಿಸಿ ಮತ್ತೊಂದು ದಾಖಲೆ ಬರೆದಿದ್ದಾರೆ. ನಗೆಟ್ ಅನ್ನು ಯಾವ ರೀತಿ ಮಾಡಲಾಗಿದೆ ಮತ್ತು ಅದನ್ನು ತೀರ್ಪುಗಾರರು ಪರಿಶೀಲಿಸಿ ಗಿನ್ನಿಸ್ ದಾಖಲೆ ಘೋಷಿಸಿದ ವಿಡಿಯೋವನ್ನು (Viral Video)  ಶನಿವಾರ ನಿಕ್ ಡಿಜಿಯೊವಾನಿ ಅವರು ಯೂಟ್ಯೂಬ್ ಚಾನೆಲ್​ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಹಂಚಿಕೊಂಡ 24 ಗಂಟೆ ಒಳಗಾಗಿ 7.6 ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಿಡಿಯೋ ವೀಕ್ಷಿಸಿದ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, “ಈ ಇಬ್ಬರು ಅತಿದೊಡ್ಡ ಆಹಾರಕ್ಕಾಗಿ ಎಲ್ಲಾ ದಾಖಲೆಗಳನ್ನು ಪಡೆದುಕೊಳ್ಳಲಿದ್ದಾರೆ! ನಿಕ್ ಮತ್ತು ಲಿಂಜಾ ಅವರ ಇಂಥ ಎಲ್ಲಾ ವೀಡಿಯೊಗಳನ್ನು ನಾನು ಇಷ್ಟಪಡುತ್ತೇನೆ” ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: Diet Tips for Groom: ಮದುವೆಗೂ ಮುನ್ನ ನಿಮ್ಮ ಆಹಾರ ಕ್ರಮದಲ್ಲಿ ಈ ಬದಲಾವಣೆ ಮಾಡಿಕೊಳ್ಳಿ, ಸುಲಭವಾಗಿ ಫಿಟ್ನೆಸ್ ಸಾಧಿಸಿ..!

ಚಿಕನ್ ನಗೆಟ್ ತಯಾರಿಸುವುದು ಹೇಗೆ?

ನಿಕ್ ಹಂಚಿಕೊಂಡ ವಿಡಿಯೋದಲ್ಲಿ, ಮೊದಲು 40 ಬ್ರೆಡ್​ಗಳನ್ನು ಪಾತ್ರೆಯೊಂದಕ್ಕೆ ಹಾಕಿ ಅರ್ಧ ಗ್ಯಾಲನ್ ಹಾಲು ಹಾಕಿ ಚೆನ್ನಾಗಿ ಹಿಸುಕುತ್ತಾರೆ. ನಂತರ 40 ಮೊಟ್ಟೆಗಳನ್ನು ಒಡೆದು ಬೌಲ್​ಗೆ ಹಾಕಿ ಚೆನ್ನಾಗಿ ಕಲಸುತ್ತಾರೆ. ನಂತರ 18 ಕೆಜಿ ರುಬ್ಬಿದ ಚಿಕನ್​ಗೆ ಮಸಾಲೆಗಳನ್ನು ಹಾಕಿ ಕಲಸುತ್ತಾರೆ. ಮಸಾಲೆ ಚಿಕನ್ ಮತ್ತು ಕಲಸಿಟ್ಟ ಮೊಟ್ಟೆಗಳನ್ನು ಬ್ರೆಡ್​ ಪೇಸ್ಟ್​ಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡುತ್ತಾರೆ.

ಇದನ್ನೂ ಓದಿ: Monsoon Foods: ಮಳೆಗಾಲದಲ್ಲಿ ನೀವು ತಿನ್ನುವ ಆಹಾರಗಳು ಹೇಗಿರಬೇಕು? ಇಲ್ಲಿವೆ ಸಲಹೆಗಳು

ಮಿಕ್ಸ್ ಮಾಡಿದ ನಂತರ ಇಬ್ಬರು ಬಾಣಸಿಗರು ಚಿಕನ್ ಗಟ್ಟಿ ಮಿಶ್ರಣವನ್ನು ವಿಶೇಷವಾಗಿ ತಯಾರಿಸಿದ ಕಾಂಟ್ರಾಪ್ಶನ್‌ನಲ್ಲಿ ಸೇರಿಸಿ ಬ್ರಷ್ ಸಹಾಯದಿಂದ ಹೊಡೆದ ಮೊಟ್ಟೆಗಳನ್ನು ಲೇಪಿಸಿದರು. ಅಂತಿಮವಾಗಿ, ಮಿಶ್ರಣವನ್ನು ಆಧುನಿಕ ಒಲೆಯಲ್ಲಿ ಬೇಯಿಸಿದರು. ಅರ್ಧ ಬೇಯುತ್ತಿದ್ದಂತೆ ಒಲೆಯಿಂದ ಹೊರತೆಗೆದು ಮೊಟ್ಟೆಯನ್ನು ಲೇಪಿಸಿ ಮತ್ತೊಮ್ಮೆ ಬೇಯಿಸಿದ್ದಾರೆ. ಕೊನೆಯಲ್ಲಿ ಗಿನ್ನೆಸ್ ವಿಶ್ವ ದಾಖಲೆಗಳ ತೀರ್ಪುಗಾರರಾದ ಕ್ಲೇರ್ ಸ್ಟೀಫನ್ಸ್ ಅವರು 20.960ಕೆಜಿಯ ಚಿಕನ್ ನಗೆಟ್ ಅನ್ನು ತೂಕ ಮಾಡಿ ಗಿನ್ನಿಸ್ ದಾಖಲೆ ಘೋಷಣೆ ಮಾಡಿದರು ಮತ್ತು ಕೋಳಿ ಗಟ್ಟಿಯ ರುಚಿಯನ್ನು ಸವಿದರು.

ವಿಡಿಯೋ ವೀಕ್ಷಿಸಿ:

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:21 am, Mon, 13 June 22

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ