Viral Video: ಭಾರತೀಯ ಸೈನಿಕರು ನಡೆಸುವ ಕಾಶ್ಮೀರವೊಂದರ ಕೆಫೆಯ ವಿಡಿಯೋ ಹಂಚಿಕೊಂಡ ಉದ್ಯಮಿ ಆನಂದ ಮಹೀಂದ್ರಾ
ಭಾರತೀಯ ಸೈನಿಕರು ನಡೆಸುವ ಕಾಶ್ಮೀರವೊಂದರ ಕೆಫೆಯ ವಿಡಿಯೋ ಒಂದನ್ನು ಉದ್ಯಮಿ ಆನಂದ ಮಹೀಂದ್ರಾ ಹಂಚಿಕೊಂಡಿದ್ದಾರೆ.
ಟ್ವಿಟರ್ನಲ್ಲಿ (Twitter) ಸದಾ ಕ್ರಿಯಾಶೀಲರಾಗಿ ಇರುವ ಖ್ಯಾತ ಉದ್ಯಮಿ ಮಹೀಂದ್ರಾ (Anand Mahindra) ಅವರು ತಮ್ಮ ಟ್ವಿಟರ್ ಖಾತೆ ಹೊಸ ಹೊಸ ವಿಷಯಗಳ ಕುರಿತು ಟ್ವೀಟ್ ಮಾಡುತ್ತಿರುತ್ತಾರೆ. ಈ ಮೂಲಕ ತಮ್ಮ ಟ್ವಿಟರ್ ಹಿಂಬಾಲಕರಿಗೆ ಹೊಸ ಹೊಸ ವಿಷಗಳ ಕುರಿತು ತಿಳಿಸಿಕೊಡುತ್ತಿದ್ದಾರೆ. ಆ ವಿಷಯಗಳ ಮೂಲಕ ಸಾಕಷ್ಟು ಮೆಚ್ಚುಗೆಯನ್ನು ಪಡೆಯುತ್ತಿರುತ್ತಾರೆ ಮತ್ತು ಪ್ರತಿಕ್ರಿಯೆಗಳನ್ನು ಪಡೆಯುತ್ತಿರುತ್ತಾರೆ. ಉದ್ಯಮಿ ತಮ್ಮ ಬ್ಯುಸಿ ಶೆಡುಲ್ನಲ್ಲೂ ಟ್ವಿಟರ್ನಲ್ಲಿ ಆಕ್ಟಿವ್ ಆಗಿರೋದು ಆಶ್ಚರ್ಯಕರ ಸಂಗತಿಯಾಗಿದೆ ಜೊತೆಗೆ ಸಂತೋಷದ ಸಂಗತಿಯಾಗಿದೆ ಎಂದು ಟ್ವಿಟರ್ನಲ್ಲಿ ಸಾಕಷ್ಟು ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಆನಂದ ಮಹೀಂದ್ರಾ ಅವರು ಟ್ವಿಟರ್ನಲ್ಲಿ 9.3 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ.
ಈಗ ಮತ್ತೆ ಒಂದು ವಿಡಿಯೋ ಟ್ವಿಟರ್ನಲ್ಲಿ ಹಂಚಿಕೊಳ್ಳುಚವ ಮೂಲಕ ಸುದ್ದಿಯಾಗಿದ್ದಾರೆ. ಅದು ಕೆಫೆಯ ನಂಬಲಾಗದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ನೆಟ್ಟಿಗರು ಈ ವಿಡಿಯೋಗೆ ಫಿದಾ ಆಗಿದ್ದಾರೆ. ಯುವತಿ ಗರಿಮಾ ಗೋಯೆಲ್ ಅವರು ಮೂಲತಃ ಹಂಚಿಕೊಂಡ ವಿಡಿಯೋವನ್ನು ಆನಂದ ಮಹೀಂದ್ರಾ ಅವರು ಮರು ಹಂಚಿಕೊಂಡಿದ್ದಾರೆ. ಟ್ವೀಟ್ನಲ್ಲಿ ಅವರು ಕಾಶ್ಮೀರದ ಗುರೆಜ್ ವ್ಯಾಲಿಯಲ್ಲಿರುವ ಸುಂದರವಾದ ಕೆಫೆಯೊಂದನ್ನು ತೋರಿಸಿದ್ದಾರೆ. ಲಾಗ್ ಹಟ್ ಎಂಬ ಹೆಸರಿನ ಕೆಫೆಯನ್ನು ಭಾರತೀಯ ಸೈನಿಕರು ನಡೆಸುತ್ತಿದ್ದು, ನೋಡಲು ಬಹು ಸೊಗಸಾಗಿದೆ. ಕೆಫೆಯ ಒಳಗಡೆ ಹೋಗುವ ಗೋಯೆಲ್ ಅಲ್ಲಿನ ವಾತಾವರಣ ಮತ್ತು ಅಲಂಕಾರವನ್ನು ತೋರಿಸುತ್ತಾರೆ. ಹಾಗೇ ಒಳಗಡೆ ಹೋಗುತ್ತಿದ್ದಂತೆ ಬಲಬಾಗಕ್ಕೆ ನಾಲ್ಕು ಹೆಜ್ಜೆ ಹೋಗುತ್ತಿದಂತೆ ಅಲ್ಲಿರುವ ಕೌಂಟರ್ ಮೇಜಿನ ಮೇಲೆ ರಾಷ್ಟ್ರ ಧ್ವಜ ಕಾಣುತ್ತದೆ. ಒಂದು ಕ್ಷಣ ಮೈಮೇಲಿನ ರೋಮಗಳು ನೆವರೇಳುತ್ತವೆ.
As far as I’m concerned, this Cafe is not a 5 star, nor a 7 star, but a 10 star destination! pic.twitter.com/oQZvEOanlT
— anand mahindra (@anandmahindra) June 11, 2022
Thank you sir @anandmahindra for posting my video. I hope we support this beautiful Army Cafe in Kashmir
— Garima Goel (@iGarimaGoel) June 12, 2022
ನಂತರ ಅಲ್ಲಿರುವ ಗ್ರಾಹಕರು ಚಹಾವನ್ನು ಸೇವಿಸುತ್ತಿರುವುದನ್ನು ತೋರಿಸುತ್ತಾರೆ. ನಂತರ ಸ್ವತಃ ಗೋಯೆಲ್ ಅಲ್ಲಿನ ತಿಂಡಿಯನ್ನು ಸೇವಿಸಿ ಅದರ ರುಚಿಯನ್ನು ಅನುಭವಿಸುತ್ತಾರೆ. ಇಂತಹ ವಿಡಿಯೋವನ್ನು ಹಂಚಿಕೊಂಡಿರುವ ಆನಂದ ಮಹೀಂದ್ರಾ ಅವರು ಶಿರ್ಶಿಕೆಯೊಂದನ್ನು ಬರೆದುಕೊಂಡಿದ್ದಾರೆ “ಈ ಕೆಫೆ 5 ಸ್ಟಾರ್ ಅಥವಾ 7 ಸ್ಟಾರ್ ಅಲ್ಲ, 10 ಸ್ಟಾರ್ !”. ವೀಡಿಯೊ 455k ವೀಕ್ಷಣೆಗಳನ್ನು ಮತ್ತು ಸಾಕಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ. ಜನರು ವೀಡಿಯೊವನ್ನು ಇಷ್ಟಪಟ್ಟಿದ್ದಾರೆ ಮತ್ತು ಪ್ರದೇಶದ ಸುತ್ತಲೂ ಇರುವ ಕೆಲವು ಇತರ ಕೆಫೆ ಹೆಸರುಗಳನ್ನು ಹಂಚಿಕೊಂಡಿದ್ದಾರೆ.
Published On - 9:47 pm, Sun, 12 June 22