Twitter Trending: ”ಸೆಕ್ಯುಲಾರಿಸಂ ಅನ್ನು ಮುಗಿಸಬೇಕಾಗಿದೆ”, ಬಿಜೆಪಿ ನಾಯಕಿ ನೂಪುರ್ ಶರ್ಮಾಗೆ ಭಾರಿ ಬೆಂಬಲ
ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಟ್ವಿಟರ್‌ನಲ್ಲಿ ಹ್ಯಾಶ್ ಟ್ಯಾಗ್ ಟ್ರೆಂಡ್ ಆರಂಭವಾಗಿದ್ದು, ಸುಮಾರು 2,50,000 ಮಂದಿ ಮೀಮ್ಸ್ಗಳನ್ನು ಹಂಚಿಕೊಂಡು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಪ್ರವಾದಿ ಮುಹಮ್ಮದ್ ಕುರಿತು ನೂಪುರ್ ಶರ್ಮಾ (Nupur Sharma) ಅವರ ವಿವಾದಾತ್ಮಕ ಹೇಳಿಕೆಯು ವಿಶ್ವ ಮಟ್ಟದಲ್ಲೂ ಭಾರಿ ಚರ್ಚೆ ಹಾಗೂ ಟೀಕೆಗೆ ಕಾರಣವಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಕತಾರ್, ಇರಾನ್, ಕುವೈತ್ ಮತ್ತು ಸೌದಿ ಅರೇಬಿಯಾದಂತಹ ಮುಸ್ಲಿಂ ರಾಷ್ಟ್ರಗಳು ಬಿಜೆಪಿ ನಾಯಕಿ ನೂಪುರ್ ಶರ್ಮಾರ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದಲ್ಲದೆ, ಭಾರತೀಯ ವಸ್ತುಗಳನ್ನು ಬಹಿಷ್ಕರಿಸುವಂತೆ ಸೂಚನಾ ಫಲಕಗಳನ್ನು ಹಾಕಲಾಗಿದೆ. ಹೇಳಿಕೆ ಖಂಡಿಸಿ ಭಾರತದಲ್ಲೂ ಹಿಂಸಾಚಾರಗಳು, ಪ್ರತಿಭಟನೆಗಳು, ಗುಂಪು ಘರ್ಷಣೆಗಳು ನಡೆದಿವೆ. ಇದಕ್ಕೆ ಪ್ರತಿಯಾಗಿ ನೂಪುರ್ ಶರ್ಮಾ ಅವರ ಬೆಂಬಲಕ್ಕೆ ನಿಂತ ಜನರು ಕತಾರ್ ಏರ್‌ವೇಸ್ ಅನ್ನು ಬಹಿಷ್ಕರಿಸುವಂತೆ ಒತ್ತಾಯಿಸಿದರು.
ಇದೀಗ ಟ್ವಿಟರ್‌ನಲ್ಲಿ ‘Hindus Under Attack In India’ (ಭಾರತದಲ್ಲಿ ಹಿಂದೂಗಳ ಮೇಲೆ ದಾಳಿ) ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಶರ್ಮಾ ಅವರನ್ನು ಬೆಂಬಲಿಸಿ ಮತ್ತೆ ಹಲವರು ಮುಂದೆ ಬಂದಿದ್ದಾರೆ. ಹ್ಯಾಶ್‌ಟ್ಯಾಗ್ ಅಡಿಯಲ್ಲಿ ನೆಟಿಜನ್‌ಗಳು ದೇಶದಲ್ಲಿ ಏನೇ ನಡೆಯುತ್ತಿದ್ದರೂ ಅದು ಜಾತ್ಯತೀತತೆಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಇದರ ಜೊತೆಗೆ ಅನೇಕರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಮೀಮ್‌ಗಳನ್ನು ಸಹ ಹಂಚಿಕೊಂಡಿದ್ದಾರೆ. ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಸುಮಾರು 2,50,000 ಸಾವಿರ ಜನರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ನೂಪುರ್ ಬೆಂಬಲಕ್ಕೆ ನಿಂತವರ ಅಭಿಪ್ರಾಯಗಳು:
ಚೀನಾದ ಅಧ್ಯಕ್ಷ ಕ್ಸಿ ಕ್ಸಿನ್‌ಪಿಂಗ್ ಅವರ ಫೋಟೋವನ್ನು ಹಂಚಿಕೊಂಡ ಟ್ವಿಟ್ಟರ್ ಬಳಕೆದಾರರೊಬ್ಬರು, “ನೀವು ಒಪ್ಪದಿರಬಹುದು, ಆದರೆ ಈ ಮನುಷ್ಯನಿಗೆ ಸೋಮಾರಿಗಳನ್ನು ಹೇಗೆ ಎದುರಿಸಬೇಕೆಂದು ತಿಳಿದಿದೆ” ಎಂದು ಹೇಳಿದ್ದಾರೆ.
#HindusUnderAttackInIndiaU may disagree, but only this man knows how to deal with Zombies ! ?♂️ pic.twitter.com/HSy8JDXyfE
— Daactr साहब (@Doctr_Dj) June 10, 2022
ತುಳ್ಸಿ ಎಂಬ ಮಹಿಳೆ “ನೂಪುರ್ ಶರ್ಮಾ ಒಬ್ಬಂಟಿಯಲ್ಲ, 100 ಕೋಟಿ ಹಿಂದೂಗಳು ಅವರೊಂದಿಗೆ ನಿಂತಿದ್ದಾರೆ” ಎಂದು ಬರೆದುಕೊಂಡಿದ್ದಾರೆ.
Nupur Sharma is not alone, 100 crore Hindus are standing with her.#HindusUnderAttackInIndia #YogiRoxx #HinduLivesMatters#Nupur_Sharma #Islam_Zindabad pic.twitter.com/JRFgYWhyEq
— Tulsi (तुलसी) ?? (@tulsi____) June 11, 2022
ಇದನ್ನೂ ಓದಿ: ಪ್ರವಾದಿ ಮೊಹ್ಮದರ ವಿರುದ್ಧ ನೂಪುರ್ ಶರ್ಮಾ ಹೇಳಿಕೆ ವಿಚಾರ: ಕಾನೂನು ಪ್ರಕಾರ ಹೋರಾಟ ಮಾಡಲು ಮುಂದಾದ ಮುಸ್ಲಿಂ ಮುಖಂಡರು
”ಯುವಕರು ಈ ರೀತಿ ಬೀದಿಗೆ ಬಂದರೆ ಹಿಂದೂರಾಷ್ಟ್ರ ನಿಜಕ್ಕೂ ಸಾಧ್ಯ. ನಾವು ಸೆಕ್ಯುಲರಿಸಂ ಅನ್ನು ಮುಗಿಸಬೇಕಾಗಿದೆ. ಏಕೆಂದರೆ ಸೆಕ್ಯುಲರಿಸಂ ಅನ್ನು ಹಿಂದೂ ಧರ್ಮವನ್ನು ನಾಶಮಾಡುವ ಸಾಧನವಾಗಿ ಬಳಸಲಾಗುತ್ತಿದೆ” ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ. ”ಶಾಂತಿಯುತ ಸಮುದಾಯ ಎಂದು ಕರೆಯುತ್ತಾರೆ. ನಾಚಿಕೆಗೇಡು” ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ.
ಇದನ್ನೂ ಓದಿ: ಪ್ರವಾದಿ ಮೊಹ್ಮದರ ವಿರುದ್ಧ ನೂಪುರ್ ಶರ್ಮಾ ಹೇಳಿಕೆ: ಬೆಳಗಾವಿಯಲ್ಲಿ ಪ್ರತಿಕೃತಿ ಗಲ್ಲಿಗೇರಿಸಿದ್ದ ಮೂವರ ಬಂಧನ
#HinduRashtra is indeed possible if youth comes out in the street like this. We need to Finish secularism because secularism is being used as a tool to destroy Hinduism#Uniting_Hindus_Globally #HindusUnderAttackInIndia #Nupur_Sharma #Prayagraj pic.twitter.com/G5lONz7XkN
— GyanGanga (@sarinmall85) June 11, 2022
ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಇಂಥ ಅನೇಕ ಮೀಮ್‌ಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಸದ್ಯ ಈ ವಿಚಾರ ಭಾರಿ ಟ್ರೆಂಡಿಂಗ್ ಪಡೆದುಕೊಂಡಿದೆ. ಇದನ್ನೂ ಓದಿ: ಪ್ರವಾದಿ ಮೊಹ್ಮದರ ವಿರುದ್ಧ ನೂಪುರ್ ಶರ್ಮಾ ಹೇಳಿಕೆ: ನೂಪುರ್ ಶರ್ಮಾಗೆ ಸಮನ್ಸ್ ನೀಡಿದ ಮುಂಬೈ ಪೊಲೀಸ್
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:28 pm, Sun, 12 June 22