ಪ್ರವಾದಿ ಮೊಹ್ಮದರ ವಿರುದ್ಧ ನೂಪುರ್ ಶರ್ಮಾ ಹೇಳಿಕೆ ವಿಚಾರ: ಕಾನೂನು ಪ್ರಕಾರ ಹೋರಾಟ ಮಾಡಲು ಮುಂದಾದ ಮುಸ್ಲಿಂ ಮುಖಂಡರು

ಪ್ರವಾದಿ ಮೊಹ್ಮದರ ಕುರಿತು ನೀಡಿದ್ದ ನೂಪುರ್ ಶರ್ಮಾ (Noopur Sharma) ಅವರ ಅವಹೇಳನಕಾರಿ ಹೇಳಿಕೆ ನಮಗೆಲ್ಲಾ ನೋವಾಗಿದೆ‌. ಸಿಖ್, ಕ್ರಿಶ್ಚಿಯನ್ ಮತ್ತು ನಾವು ಎಲ್ಲರು ಸೇರಿ ಸಭೆ ಮಾಡಿದ್ದೇವೆ. ನಾವು ಒಗ್ಗಟ್ಟಿನಿಂದ ಬಂದು ಮನವಿ ಮಾಡಿದ್ದೇವೆ.  ನಾವು ಬೆಂಗಳೂರು ಮತ್ತು ರಾಜ್ಯದಲ್ಲಿ ಯಾವುದೇ ರ್ಯಾಲಿ ಮಾಡಲ್ಲ. ನಮ್ಮ ನೋವಿನ ಬಗ್ಗೆ ಕಮಿಷನರ್ ಗೆ ತಿಳಿಸಿದ್ದೇವೆ ಎಂದು ಧರ್ಮಗುರು ಮುಲಾನಾ ಮಕ್ಸೂದ್ ಇಮ್ರಾನ್ ಹೇಳಿದ್ದಾರೆ.

ಪ್ರವಾದಿ ಮೊಹ್ಮದರ ವಿರುದ್ಧ ನೂಪುರ್ ಶರ್ಮಾ ಹೇಳಿಕೆ ವಿಚಾರ: ಕಾನೂನು ಪ್ರಕಾರ ಹೋರಾಟ ಮಾಡಲು ಮುಂದಾದ ಮುಸ್ಲಿಂ ಮುಖಂಡರು
ಪೊಲೀಸ್​ ಅಧಿಕಾರಿಗಳು ಮತ್ತು ಧಾರ್ಮಿಕ ಮುಖಂಡರ ಸಭೆ
Follow us
TV9 Web
| Updated By: ವಿವೇಕ ಬಿರಾದಾರ

Updated on:Jun 11, 2022 | 5:34 PM

ಬೆಂಗಳೂರು: ಪ್ರವಾದಿ ಮೊಹ್ಮದರ (Prophet Mohammed) ಕುರಿತು ನೀಡಿದ್ದ ನೂಪುರ್ ಶರ್ಮಾ (nupur sharma) ಅವರ ಅವಹೇಳನಕಾರಿ ಹೇಳಿಕೆ ನಮಗೆಲ್ಲಾ ನೋವಾಗಿದೆ‌. ಸಿಖ್, ಕ್ರಿಶ್ಚಿಯನ್ ಮತ್ತು ನಾವು ಎಲ್ಲರು ಸೇರಿ ಸಭೆ ಮಾಡಿದ್ದೇವೆ. ನಾವು ಒಗ್ಗಟ್ಟಿನಿಂದ ಬಂದು ಮನವಿ ಮಾಡಿದ್ದೇವೆ.  ನಾವು ಬೆಂಗಳೂರು ಮತ್ತು ರಾಜ್ಯದಲ್ಲಿ ಯಾವುದೇ ರ್ಯಾಲಿ ಮಾಡಲ್ಲ. ನಮ್ಮ ನೋವಿನ ಬಗ್ಗೆ ಕಮಿಷನರ್ ಗೆ ತಿಳಿಸಿದ್ದೇವೆ. ಯಾವ ಧರ್ಮದಲ್ಲಿ ಯಾರು ಮುಖ್ಯರಿರುತ್ತಾರೆ ಅವರ ಮೇಲೆ ಟಿಪ್ಪಣಿ ಮಾಡಬಾರದು ಅಂತ ಹೇಳಿದ್ದೇವೆ. ಕಾನೂನು ಪ್ರಕಾರ ಹೋರಾಟ ಮಾಡುತ್ತೇವೆ. ಬೀದಿಯಲ್ಲಿ ನಮ್ಮ ಪ್ರತಿಭಟನೆ ಇಲ್ಲ ಎಂದು ಧರ್ಮಗುರು ಮುಲಾನಾ ಮಕ್ಸೂದ್ ಇಮ್ರಾನ್ ಹೇಳಿದ್ದಾರೆ.

ಇದನ್ನು ಓದಿ: ಜಾರ್ಖಂಡ್​ನಲ್ಲಿ ಪ್ರವಾದಿ ವಿರುದ್ಧದ ಹೇಳಿಕೆ ಖಂಡಿಸಿ ಹಿಂಸಾಚಾರ; ಇಬ್ಬರು ಸಾವು, ಹಲವರಿಗೆ ಗಾಯ

ನೂಪುರ್ ಶರ್ಮಾ ಅವರ ಅವಹೇಳನಕಾರಿ ಹೇಳಿಕೆ ವಿರುದ್ಧವಾಗಿ ರಾಜ್ಯದಲ್ಲಿ ನಿನ್ನೆ (ಜೂನ್​ 10) ರಂದು ಶುಕ್ರವಾರ ಮುಸ್ಲಿಂ ಬಾಂಧವರು ಪ್ರತಿಭಟನೆ ನಡೆಸಿದ್ದು, ಮತ್ತು ದೇಶದ ಕೆಲವು ಕಡೆ ಹಿಂಸಾಚರಕ ಕೃತ್ಯ ನಡೆದಿರುವ ಹಿನ್ನಲೆಯಲ್ಲಿ ಇಂದು (ಜೂನ್​ 11) ರಂದು ಬೆಂಗಳೂರು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹಾಗೂ ಹಿರಿಯ ಅಧಿಕಾರಿಗಳು , 20 ಕ್ಕೂ ಅಧಿಕ ಧರ್ಮ ಗುರುಗಳು ಸಭೆ ಸೇರಿದ್ದರು. ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಈ ಸಭೆ ಸೇರಿದ್ದು, ಸಭೆಯಲ್ಲಿ ಪೊಲೀಸ್ ಕಮಿಷನರ್ ಜೊತೆ ನಗರದ 16 ಮೌಲ್ವಿಗಳು ಮಾತುಕತೆ ಮಾಡುತ್ತಿದ್ದಾರೆ. ಮೌಲಾನಾ ಮಕ್ಸೂದ್ ಇಮ್ರಾನ್ ರಶೀದಿ, ಮೌಲಾನಾ ಮಫ್ತಿ ಇಫ್ತಿಕರ್ ಅಹ್ಮದ್ ಖಸ್ಮಿ ಸಾಹೇಬ್, ಮೌಲಾನಾ ಸೈಯದ್ ಜುಲ್ಫಿಖರ್ ಅಹ್ಮದ್ ನೂರಿ ಸಾಹೇನ್ ಸೇರಿದಂತೆ ಎಲ್ಲಾ ಮೌಲ್ವಿಗಳು ಭಾಗಿಯಾಗಿದ್ದರು. ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸೋ ವಿಚಾರ ಸಂಬಂಧ ಚರ್ಚೆ ನಡೆದಿದೆ.

ಪ್ರಕರಣ ಸಂಬಂಧ ಮುಸ್ಲಿಂರು ಯಾವುದೇ ಡಿಬೇಟ್ ನಲ್ಲಿ ಭಾಗವಹಿಸದಂತೆ ಆಲ್ ಇಂಡಿಯಾ ಮುಸ್ಲಿಂ ವತಿಯಿಂದ ಸೂಚನೆ ನೀಡಲಾಗಿದೆ. ಟಿವಿ ಡಿಬೇಟ್ ನಲ್ಲಿ ಕುಳಿತು ಯಾವುದೇ ರೀತಿಯಾದ ಧರ್ಮನಿಂದನೆ ಮಾಡದಂತೆ ಸೂಚನೆ ನೀಡಲಾಗಿದೆ.

ಇದನ್ನು ಓದಿ: ಸತ್ಯ ಹೇಳೋದು ದಂಗೆಯೇ?; ನೂಪುರ್ ಶರ್ಮಾಗೆ ಸಾಧ್ವಿ ಪ್ರಜ್ಞಾ ಠಾಕೂರ್ ಬೆಂಬಲ

ಪ್ರವಾದಿ ಮೊಹ್ಮದರ ಕುರಿತು ನೂಪುರ್ ಶರ್ಮಾ ವಿವಾದಾತ್ಮಕ ಹೇಳಿಕೆ

ಬಿಜೆಪಿ ವಕ್ತಾರೆ ನೂಪುರ್ ಶರ್ಮಾ  ಅವರು ಸುದ್ದಿವಾಹಿನಿಯ ಚರ್ಚೆಯ ಸಂದರ್ಭದಲ್ಲಿ ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ನಂತರ ಅವರನ್ನು ಬಿಜೆಪಿ ತನ್ನ ಪಕ್ಷದ ಸದಸ್ಯತ್ವದಿಂದ ಅಮಾನತು ಮಾಡಿತ್ತು. ನಂತರ ಈ ವಿಷಯ ಅಂತರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಯಾಗಿದ್ದು, ಸೌದಿ ಅರೇಬಿಯಾ, ಬಹರೈನ್‌, ಅರಬ್‌ ಸಂಯುಕ್ತ ಸಂಸ್ಥಾನ (ಯುಎಇ), ಇಂಡೊನೇಷ್ಯಾ, ಜೋರ್ಡನ್‌ ಮತ್ತು ಅಫ್ಗಾನಿಸ್ತಾನ ಸೇರಿದಂತೆ ಹಲವು ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿದ್ದು, ಭಾರತದ ವಸ್ತುಗಳನ್ನು ಕೊಡುಕೊಳ್ಳದಂತೆ ಬೋಯ್​ ಕಟ್​​ ಇಂಡಿಯಾ ಎಂದು ಸಾಮಾಜಿಕ ಜಾಲತಾಣದಲ್ಲಿ ಹರದಾಡಿತ್ತು.

ನಂತರ ಇಷ್ಟೆಲ್ಲಾ ವಿವಾದವಾಗುತ್ತಿದ್ದಂತೆ ನೂಪುರ್ ಶರ್ಮಾ ಕ್ಷಮೆ ಕೇಳಿದ್ದರು. ನಾನು ನನ್ನ ಹೇಳಿಕೆ ಬಗ್ಗೆ ಈಗಾಗಲೇ ಸ್ಪಷ್ಟೀಕರಣ ನೀಡಿದ್ದೇನೆ. ಆದರೆ ನನಗೆ ನಿರಂತರವಾಗಿ ಜೀವ ಬೆದರಿಕೆ ಕರೆಗಳು ಬರುತ್ತಿದ್ದು, ಸೂಕ್ತ ಭದ್ರತೆ ಒದಗಿಸಿ ಅಂತ ಮನವಿ ಮಾಡಿದ್ದರು. ಇವರಿಗೆ ಭದ್ರತೆಯನ್ನು ಒದಗಿಸಲಾಗಿತ್ತು. ಹಾಗೇ ಇವರ ಪರವಾಗಿ ಕೆಲ ಸಂಘಟನೆಗಳು, ವ್ಯಕ್ತಿಗಳು ಮತ್ತು ಸೆಲಬ್ರೆಟಿ ಮಾತನಾಡಿದ್ದರು. ನಂತರ ನೂಪುರ್ ಶರ್ಮಾ ಅವರ ವಿರುದ್ಧ ಮಹಾರಾಷ್ಟ್ರದ ಮುಂಬ್ರಾ ಪೊಲೀಸರು ಸಮನ್ಸ್ ಜಾರಿ ಮಾಡಿದ್ದರು. ಶರ್ಮಾ ವಿರುದ್ಧ ಎಫ್‌ಐಆರ್ ದಾಖಲಿಸಿದ ನಂತರ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮುಂಬ್ರಾ ಪೊಲೀಸರು ಶರ್ಮಾ ಅವರಿಗೆ ಸಮನ್ಸ್‌ ಜಾರಿ ಮಾಡಿದ್ದರು. ಈ ತಿಂಗಳು (ಜೂನ್​ 22) ರಂದು ತಮ್ಮ ಮುಂದೆ ಹಾಜರಾಗುವಂತೆ ಸೂಚಿಸಿದ್ದಾರೆ.​

ನೂಪುರ್ ಶರ್ಮಾ ಅವರ ಹೇಳಿಕೆಯನ್ನು ತೀರ್ವವಾಗಿ ವಿರೋಧಿಸಿದ ಮುಸ್ಲಿಂ ಸಮುದಾಯ ನಿನ್ನೆ ಶುಕ್ರವಾರ (ಜೂನ್​ 10) ರಂದು ಪ್ರತಿಭಟನೆಗೆ ಇಳಿದಿತ್ತು. ದೇಶದ ನಾನಾ ಭಾಗದಲ್ಲಿ ಪ್ರತಿಭಟನೆ ನಡೆದಿತ್ತು. ಹಿಂಸಾತ್ಮಕ ಕೃತ್ಯಗಳು ನಡೆದಿದ್ದವು. ನೂಪೂರ್​ ಶರ್ಮಾ ಪ್ರತಕೃತಿ ದಹನ ಮಾಡಲಾಗಿತ್ತು. ನಂತರ ರಾಜ್ಯದಲ್ಲೂ ಈ ಪ್ರತಿಭಟನೆ ನಡೆದಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆಗಳು ನಡೆದವು. ಹೀಗಾಗಿ ರಾಜ್ಯದಲ್ಲಿ ಯಾವುದೇ ರೀತಿಯಾದ ಹಿಂಸಾತ್ಮಕ ಕೃತ್ಯಗಳು ಆಗದಂತೆ ಕಟ್ಟೆಚ್ಚರವಹಿಸುವಂತೆ ಮುಖ್ಯಮಂತ್ರಿ ಬಸವಾರಾಜ ಬೊಮ್ಮಾಯಿ ಅವರು ಪೋಲಿಸರಿಗೆ ಸೂಚಿಸಿದ್ದರು. ಈ ಸಂಬಂಧ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಇಂದು (ಜೂನ್​​ 11) ರಂದು ಬೆಂಗಳೂರು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹಾಗೂ ಹಿರಿಯ ಅಧಿಕಾರಿಗಳು , 20 ಕ್ಕೂ ಅಧಿಕ ಧರ್ಮ ಗುರುಗಳು ಸಭೆ ಸೇರಿದ್ದಾರೆ.

Published On - 5:33 pm, Sat, 11 June 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ