ಸಮುದ್ರದಲ್ಲಿ ಶಾರ್ಕ್ ಪಾಯಿಂಟ್ಗೆ ಬಿದ್ದು ಪಾರಾದ ವ್ಯಕ್ತಿ! ಇದು ಕಾದಂಬರಿಯಲ್ಲ, ಮೈ ಜುಮ್ಮೆನ್ನುವ ನೈಜ ಕಥೆ
ಶಾರ್ಕ್ಗಳೇ ಓಡಾಡುವ ಪ್ರದೇಶದಲ್ಲಿ ಸುಲಿಕಿದ ಆಸ್ಟ್ರೇಲಿಯಾದ ನಾವಿಕನ ಕಥೆ ಇದು. ಈ ಶಾರ್ಕ್ ಪಾಯಿಂಟ್ನಿಂದ ಬದುಕಿಬಂದ ಧೀರ ನಾವಿಕ ಜಾನ್ ಡೀರ್, ಇದೀಗ ಮತ್ತೆ ನೌಕಾಯಾನ ನಡೆಸಲು ಉತ್ಸುಕರಾಗಿದ್ದಾರೆ.
ಆಳದ ಸಮುದ್ರ.. ಕಣ್ಣು ಹಾಯಿಸಿದಷ್ಟೂ ದೂರಕ್ಕೆ ನೀರು.. ಶಾರ್ಕ್ ಗಳ ಓಡಾಟ.. ಹಡಗು ಅಥವಾ ಬೋಟ್ನಲ್ಲಿ ಇದ್ದರೆ ಭಯದಿಂದ ತಣ್ಣನೆಯ ನೀರಿನಲ್ಲಿಯೂ ಬೆವೆತುಹೋಗಬಹುದು. ಅದೇ ಸಮುದ್ರದ ನೀರಿನಲ್ಲಿಯೇ ಬಿದ್ದರೆ.. ಎದ್ದು ಬರಲು ಸಾಧ್ಯವೇ? ಇದು ಯಾವುದೋ ಇಂಗ್ಲಿಷ್ ಸಿನಿಮಾ ಅಥವಾ ಸಾಹಸ ಕಾದಂಬರಿಯ ಚಿತ್ರಗಳಲ್ಲ.. ಸಾಲುಗಳಲ್ಲ.. ಆಸ್ಟ್ರೇಲಿಯಾದ ನಾವಿಕನೊಬ್ಬ ಬದುಕಿ ಬಂದ ಕಥೆ. ಯಾವ ಸಿನಿಮಾಕ್ಕೂ ಕಡಿಮೆ ಇಲ್ಲ. ಬರೋಬ್ಬರಿ 17 ಕಿಲೋಮೀಟರ್ ಪನಾಮಾ ಕಾಲುವೆಯಲ್ಲಿ ಈಜಿ ದಡ ಸೇರಿದ ಸಾಹಸದ ಕಥೆ ಇದು.
ಜಾನ್ ಬೋಟಿಂಗ್ ಮಾಡುತ್ತ ಫಿಶಿಂಗ್ ಮಾಡುತ್ತ ತಮ್ಮದೇ ಲೋಕ ಸೃಷ್ಟಿ ಮಾಡಿಕೊಂಡಿಕೊಂಡಿದ್ದರು. ಆದರೆ ಅದೊಂದು ಕೆಟ್ಟ ದಿನ ತಮ್ಮ ಬೋಟ್ ನಿಂದ ಕೆಳಕ್ಕೆ ಬಿದ್ದರು. ನೋಡನೋಡುತ್ತಿದ್ದಂತೆ ಅವರ ಬೋಟ್ ಕಣ್ಮರೆಯಾಯಿತು. ಜಾನ್ಗೆ ಈಜಿ ದಡ ಸೇರುವುದು ಬಿಟ್ಟು ಬೇರೆ ಆಯ್ಕೆ ಇರಲಿಲ್ಲ. ಛಲ ಅವರನ್ನು ಬದುಕಿಸಿತು. ದುರ್ಗಮ ಹಾದಿ. ಹದಿನೇಳು ಕಿಮೀ ನಿರಂತರ ಈಜು.. ಶಾರ್ಕ್ ಮತ್ತು ದೊಡ್ಡ ದೊಡ್ಡ ಮೀನುಗಳ ನಡುವೆ ಈಜು..
ಇದನ್ನೂ ಓದಿ: Viral: ಸಾರ್ವಜನಿಕವಾಗಿ ಕಾಣಿಸಿಕೊಂಡ ಅಪರೂಪದ ಅಲ್ಬಿನೋ ಗ್ಯಾಲಪಗೋಸ್ ದೈತ್ಯ ಆಮೆ
ಜಾನ್ ಡೀರ್ ಅವರು 2019 ರಲ್ಲಿ ಪ್ರಪಂಚದಾದ್ಯಂತ ನೌಕಾಯಾನ ಮಾಡುವ ಪ್ರಯತ್ನದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಪನಾಮದಲ್ಲಿ ಸಮುದ್ರದಲ್ಲಿ ದೋಣಿ ಕಣ್ಮರೆಯಾಗಿ ನೀರಿನಲ್ಲಿ ಸಿಲುಕಿಕೊಂಡಿದ್ದಾರೆ. ಈ ಪ್ರದೇಶ ಶಾರ್ಕ್ಗಳೇ ಹೆಚ್ಚು ಓಡಾಡುವ ಪ್ರದೇಶವಾಗಿತ್ತು. ಯಾವುದೇ ಲೈಫ್ ಜಾಗೆಟ್ ಇಲ್ಲದೆ ಇಂಥ ದುರ್ಗಮ ಪ್ರದೇಶದಲ್ಲಿ ಸಿಲುಕಿದ್ದಾರೆ. ಅವರ ಹತ್ತಿರಕ್ಕೆ ಬಂದ ಶಾರ್ಕ್ ಅನ್ನು ಹೆದರಿಸಿ ಓಡಿಸಲು ಕೂಗಾಡಿದರು, ಕಿರುಚಾಡಿದರು. ಆದರೇನು ಪ್ರಯೋಜನ? ರಾತ್ರಿಯಲ್ಲಿ ರಕ್ಷಣೆ ಮಾಡಲು ಸಮುದ್ರದಲ್ಲಿ ಇರುವವರಾದರೂ ಯಾರು? ಹಾಗದಂತ ಅವರ ಸುಮ್ಮನೆ ಕೂತರೇ ಶಾರ್ಕ್ಗಳಿಗೆ ಆಹಾರವಾಗುತ್ತಾರೆ. ಹೀಗಾಗಿ ಅವರು ಶಾರ್ಕ್ ಬಾಯಿಯಿಂದ ತಪ್ಪಿಸಿಕೊಳ್ಳಲು ಒದೆಯಲು ಮತ್ತು ಗುದ್ದಲು ಪ್ರಾರಂಭಿಸಿದ್ದಾರೆ.
ಇದನ್ನೂ ಓದಿ: Viral Video: ವಿಶ್ವದ ಅತಿ ದೊಡ್ಡ ಚಿಕನ್ ನಗೆಟ್ ತಯಾರಿಸಿದ ಬಾಣಸಿಗ, ಹೇಗೆ ತಯಾರಿಸಿದ್ದಾರೆ ನೋಡಿ
ನೀರಿಗೆ ಸಿಲುಕಿಕೊಂಡ ನಂತರ ಮೀನುಗಳು ಸುಮ್ಮನೆ ಬಿಡುತ್ತವೆಯೇ? ತೋಳಿನ ಗಾತ್ರದ ಮೀನುಗಳು ಅಂಗಾಂಗಳಿಗೆ ಕಚ್ಚಲು ಪ್ರಾರಂಭಿಸಿದವು. ಹಾಗೋ ಹೀಗೋ ಅಂತಿಮವಾಗಿ ಜಾನ್ ಡೀರ್ ಸುಮಾರು 17 ಕಿ.ಮೀ ದೂರ ಈಜಿ ದಡ ಸೇರುವಲ್ಲಿ ಯಶಸ್ವಿಯಾದರು. ಸ್ವತಃ ಜಾನ್ ಡೀರ್ ಹೇಳುವಂತೆ “ಸಮುದ್ರಯಾನದ ವೇಳೆ ಸಂಭವಿಸಬಹುದಾದ ಕೆಟ್ಟ ಸಂಗತಿಗಳ ಬಗ್ಗೆ ಅನೇಕ ಬಾರಿ ಸಹ ನಾವಿಕರ ಜೊತೆ ಮಾತನಾಡಿದ್ದೆ. ಇದು ನಾನು ನೀರಿನಲ್ಲಿ ಸಿಲುಕಿದ್ದಾಗ ಇದ್ದಕ್ಕಿದ್ದಂತೆ ನೆನಪಿಗೆ ಬಂತು. ನನ್ನ ದೋಣಿ ಕಣ್ಮರೆಯಾಯ್ತು. ನಾನು ಸಮುದ್ರ ದಡದಿಂದ 9 ನಾಟಿಕಲ್ ಮೈಲುಗಳಷ್ಟು ಅಂದರೆ ಸುಮಾರು 17 ಕಿಮೀ. ದೂರದಲ್ಲಿ ಸಿಲುಕಿದ್ದೆ. ಈ ವೇಳೆ ನನ್ನ ಬಳಿ ಲೈಫ್ ಜಾಕೆಟ್ ಇರಲಿಲ್ಲ” ಎಂದಿದ್ದಾರೆ.
ಇದನ್ನೂ ಓದಿ: Viral Pic: ಎಡವಟ್ಟು ಮಾಡಿಕೊಂಡ ಪಾಟ್ನಾ ವಿಶ್ವವಿದ್ಯಾಲಯ, ಸುತ್ತೋಲೆ ಫೋಟೋ ವೈರಲ್
“ಸಿಲುಕಿಕೊಂಡ ಪ್ರದೇಶದಲ್ಲಿ ಶಾರ್ಕ್ ನೋಡಿ ಹೆದರಿದ್ದೆ. ನಾನು ಅದನ್ನು ಓಡಿಸಲು ಪ್ರತಿ ದಿಕ್ಕಿನಲ್ಲಿ ಕಿರುಚಲು, ಒದೆಯಲು ಮತ್ತು ಗುದ್ದಲು ಪ್ರಾರಂಭಿಸಿದೆ. ನಾನು ದಣಿದಿದ್ದರಿಂದ ನನ್ನ ಶಕ್ತಿ ಕುಂದುತ್ತಿದೆ ಎಂದು ನನಗೆ ತಿಳಿದಿತ್ತು, ಆದರೂ ನನ್ನ ಸುರಕ್ಷತೆಗಾಗಿ ಈಜುವುದನ್ನು ಮುಂದುವರಿಸಲು ನಿರ್ಧರಿಸಿದೆ. ತೋಳಿನ ಗಾತ್ರದ ಮೀನುಗಳು ನನ್ನ ದೇಹ ಮತ್ತು ಕಾಲುಗಳನ್ನು ಕಚ್ಚುತ್ತಲೇ ಇದ್ದವು. ಅವುಗಳಿಂದ ನನ್ನ ಕಾಲುಗಳಿಗೆ ಕಚ್ಚಿದ ಗುರುತುಗಳಿವೆ” ಎಂದಿದ್ದಾರೆ.
ಜಾನ್ ಡೀರ್ ಅವರು ಮೀನುಗಳ ದಾಳಿಗಳೊಂದಿಗೆ ಈಜಾಡುತ್ತಾ ಬಂಡೆಗಳನ್ನು ತಲುಪಿದರು. ಆದರೆ ರಕ್ಷಣಾ ತಂಡದ ಆಗಮ ಬರಲು ಹಲವು ಗಂಟೆಗಳೇ ಬೇಕಾಗಿತ್ತು. ಅಷ್ಟರವರೆಗೆ ಅವರು ಬಂಡೆ ಮೇಲೆ ಕಾಯಬೇಕಾಯಿತು. ಅದರಂತೆ ರಕ್ಷಣೆಗಾಗಿ ಕಾಯುತ್ತಿದ್ದ ಜಾನ್ ಅವರನ್ನು ರಕ್ಷಣಾ ತಂಡ ಸುರಕ್ಷಿತವಾಗಿ ರಕ್ಷಿಸಿತು. ರಕ್ಷಣೆಯ ದಿನಗಳ ನಂತರ, ಪನಾನಾದಲ್ಲಿ ಪೊಲೀಸರು ಅವನ ದೋಣಿಯ ಅವಶೇಷಗಳನ್ನು ಕಂಡುಕೊಂಡಿದ್ದಾರೆ.
ದೈತ್ಯ, ಭಯಾನಕ ಜಲಚರಗಳಿರುವ ಪ್ರದೇಶದಲ್ಲಿ ಸುಲುಕಿ ಪಾರಾಗಿ ಬಂದಿದ್ದ ಜಾನ್ ಡೀರ್ ಅವರು ಭಯಪಟ್ಟು ತಮ್ಮ ಸಾಹಾಸವನ್ನು ನಿಲ್ಲಿಸಿಲ್ಲ. ಮತ್ತೆ ನೌಕಾಯಾನದಲ್ಲಿ ತೊಡಗಿಕೊಳ್ಳಲು ಹಾಗೂ ಮೀನುಗಾರಿಕೆಗೆ ಮರಳಲು ಉತ್ಸುಕರಾಗಿದ್ದಾರೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ