Viral Video: ರಸ್ತೆ ದಾಟುವ ಹುಲಿಗಳ ಹಿಂಡಿನ ಅಪರೂಪದ ದೃಶ್ಯಾವಳಿ ಸೆರೆ ಹಿಡಿದ ಪ್ರವಾಸಿಗರು
ಆರು ಹುಲಿಗಳಿರುವ ಗುಂಪೊಂದು ಮಣ್ಣಿನ ರಸ್ತೆ ದಾಟುವ ಅಪರೂಪದ ದೃಶ್ಯಾವಳಿಯನ್ನು ಪ್ರವಾಸಿಗರು ಸೆರೆಹಿಡಿದಿದ್ದಾರೆ. ಇದರ ವಿಡಿಯೋವನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಸಂತ ನಂದಾ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಹುಲಿಗಳು (Tigers) ಕಾಣಸಿಗುವುದು ತೀರ ಅಪರೂಪ (Rare). ಮೃಗಾಲಯಗಳಲ್ಲಿ ಒಂದೋ ಎರಡೋ ಸಂಖ್ಯೆಯಲ್ಲಿ ಇರುತ್ತದೆ. ಆದಾಗ್ಯೂ ಬೆರಳೆಣಿಕೆಯ ಹುಲಿಗಳು ಹಳ್ಳಿಗಳಿಗೆ ನುಗ್ಗಿದ ಸುದ್ದಿಗಳನ್ನು ನೋಡುತ್ತೇವೆ. ಆದರೆ ಯಾವತ್ತಾದರೂ ನೀವು ಹುಲಿಗಳು ಗುಂಪಾಗಿ ಹೋಗುವುದನ್ನು ಕಂಡಿದ್ದೀರಾ? ತೀರ ಅಪರೂಪದ ಇಂಥ ದೃಶ್ಯಾವಳಿಯನ್ನು ಪ್ರವಾಸಿಗರು ಕ್ಯಾಮರಾ ಮೂಲಕ ಸೆರೆಹಿಡಿದಿದ್ದು, ವಿಡಿಯೋ (Video) ವೀಕ್ಷಿಸಿದರೆ ಅಚ್ಚರಿ ಉಂಟಾಗುತ್ತದೆ.
ಇದನ್ನೂ ಓದಿ: Viral Video: ರಸ್ತೆ ಮಧ್ಯೆ ವಾಹನಕ್ಕೆ ಅಡ್ಡ ಹಾಕಿ, ಆಹಾರಕ್ಕಾಗಿ ಹುಡುಕಾಡಿದ ಆನೆ; ವಿಡಿಯೋ ವೈರಲ್
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಹುಲಿಯ ಹಿಂಡಿನ ವಿಡಿಯೋ ಎಲ್ಲಿ ಸೆರೆಹಿಡಿದಿರುವುದು ಮತ್ತು ಯಾವಾಗ ಸೆರೆ ಹಿಡಿಯಲಾಗಿದೆ ಎಂದು ಸ್ಪಷ್ಟವಾಗಿಲ್ಲ. ಆದರೆ ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಸಂತ ನಂದಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಂಚಿಕೊಂಡಿದ್ದಾರೆ. ಇವರು ನೈಸರ್ಗಿಕ ಆವಾಸಸ್ಥಾನದಲ್ಲಿ ಪ್ರಾಣಿಗಳನ್ನು ತೋರಿಸುವ ವಿಡಿಯೋಗಳನ್ನು ಆಗ್ಗಾಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಚಿರಪರಿಚಿತರಾಗಿದ್ದಾರೆ.
ವಿಡಿಯೋವನ್ನು ಗಮನಿಸಿದಂತೆ, ಪ್ರವಾಸಿಗರು ಎರಡ್ಮೂರು ಜೀಪ್ಗಳಲ್ಲಿ ಕ್ಯಾಮಾರಾಗಳನ್ನು ಹಿಡಿದುಕೊಂಡು ದೃಶ್ಯಾವಳಿಗಳನ್ನು ಸೆರೆಹಿಡಿಯುವುದುನ್ನು ಕಾಣಬಹುದು. ಅದಾಗ್ಯೂ ಓಕಕಾಲದಲ್ಲಿ ಐದಾರು ಹುಲಿಗಳು ಮಣ್ಣಿನ ರಸ್ತೆ ದಾಟಿ ಮತ್ತೊಂದು ಪ್ರದೇಶಕ್ಕೆ ಹೋಗಿವೆ. ಇದೇ ವೇಳೆ ಹುಲಿಯೊಂದು ವಿಡಿಯೋ ಮಾಡುತ್ತಿದ್ದ ಪ್ರವಾಸಿಗರ ಜೀಪ್ವೊಂದರ ಪಕ್ಕಕ್ಕೆ ಬಂದು ಮರಳಿ ಹೋಗುವುದನ್ನು ಕಾಣಬಹುದು.
ಇದನ್ನೂ ಓದಿ: Viral: ಸಾರ್ವಜನಿಕವಾಗಿ ಕಾಣಿಸಿಕೊಂಡ ಅಪರೂಪದ ಅಲ್ಬಿನೋ ಗ್ಯಾಲಪಗೋಸ್ ದೈತ್ಯ ಆಮೆ
If you haven’t seen a tiger herd, here it is?
Remarkable here to note is, a tigress usually have a litter of 2 to 4 only. Five is unusual and survival of all the cubs is rare. Indicating a high density of prey animals in the habitat & little human influence on it. pic.twitter.com/x4tQFiA0z1
— Susanta Nanda IFS (@susantananda3) June 12, 2022
ವಿಡಿಯೋ ಹಂಚಿಕೊಳ್ಳುವಾಗ ಸುಸಂತ ನಂದಾ ಅವರು, ”ನೀವು ಹುಲಿ ಹಿಂಡನ್ನು ನೋಡಿಲ್ಲದಿದ್ದರೆ, ಅದು ಇಲ್ಲಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಹುಲಿಯ ಹಿಂಡು ಸಾಮಾನ್ಯವಾಗಿ 2 ರಿಂದ 4 ಮಾತ್ರ ಒಳಗೊಂಡಿರುತ್ತದೆ. ಐದು ಅಸಾಮಾನ್ಯ ಮತ್ತು ಎಲ್ಲಾ ಮರಿಗಳ ಬದುಕುಳಿಯುವಿಕೆಯು ಅಪರೂಪ. ಆವಾಸಸ್ಥಾನದಲ್ಲಿ ಬೇಟೆಯಾಡುವ ಪ್ರಾಣಿಗಳ ಹೆಚ್ಚಿನ ಸಾಂದ್ರತೆ ಮತ್ತು ಅದರ ಮೇಲೆ ಕಡಿಮೆ ಮಾನವ ಪ್ರಭಾವವನ್ನು ಇದು ಸೂಚಿಸುತ್ತದೆ” ಎಂದು ಬರೆದುಕೊಂಡಿದ್ದಾರೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ