ಕೊರೊನಾ ವೈರಸ್ ವ್ಯಾಪಕಾಗಿ ಹರಡುತ್ತಿರುವ ಈ ಸಂರ್ಭದಲ್ಲಿ ರೋಗಿಗಳ ಚಿಕಿತ್ಸೆಗಾಗಿ ವೈದ್ಯರು ಹಗಲಿರುಳು ಶ್ರಮಿಸುತ್ತಿದ್ದಾರೆ. ವೈದ್ಯರಿಗೆ ಸಹಾಯಕರಾಗಿ ಹಾಗೂ ರೋಗಿಗಳ ಆರೈಕೆ ಮಾಡುತ್ತಾ ದಿನದ 24 ಗಂಟೆಯೂ ಕೂಡಾ ದಾದಿಯರು(ನರ್ಸ್) ಆಸ್ಪತ್ರೆಗಳಲ್ಲಿ ದುಡಿಯುತ್ತಿದ್ದಾರೆ. ತಮ್ಮ ಕುಟುಂಬ, ಸಂಬಂಧಿಕರನ್ನು ಬಿಟ್ಟು ಆಸ್ಪತ್ರೆಯಲ್ಲಿಯೇ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಇನ್ನು ಕೆಲವರಿಗೆ ಚಿಕ್ಕ ವಯಸ್ಸಿನ ಮಕ್ಕಳಿವೆ. ಆ ಪುಟ್ಟ ಕಂದಮ್ಮನನ್ನು ಮನೆಯಲ್ಲಿ ಬಿಟ್ಟು ರೋಗಿಗಳ ಆರೈಕೆಗಾಗಿ ಜತೆಗೆ ಕೊರೊನಾ ಸೋಂಕು ತಡೆಯುವುದಕ್ಕಾಗಿ ನಿರಂತರ ಪರಿಶ್ರಮದಲ್ಲಿದ್ದಾರೆ. ಅವರಿಗೆ ನಾವು ಎಷ್ಟು ಕೃತಜ್ಞತೆ ತಿಳಿಸಿದರೂ ಅದು ಕಡಿಮೆಯೇ ಸರಿ.
ದಿನ ಪೂರ್ತಿ ತಮ್ಮ ಕರ್ತವ್ಯಕ್ಕೆ ಬದ್ಧರಾಗಿ ಕೆಲಸ ನಿರ್ವಹಿಸುತ್ತಿದ್ದು, ಜನರ ಜೀವ ಉಳಿಸುವ ಮೂಲಕ ಸ್ವತಃ ಈ ಜಗತ್ತಿಗೇ ವಿದಾಯ ಹೇಳಿದ ಕೊರೊನಾ ವಾರಿಯರ್ಸ್ ನೆನಪಿಗಾಗಿ ಹಾಗೂ ಕೊರೊನಾ ಸಾಂಕ್ರಾಮಿಕ ರೋಗದಿಂದ ಬೇಸತ್ತ ಜನರನ್ನು ಪ್ರೋತ್ಸಾಹಿಸಲು ಐಟಿಬಿಪಿ ಕಾನ್ಸ್ಟೇಬಲ್ ಓರ್ವರು ವಿಶೇಷವಾಗಿ ‘ತೇರಿ ಮಿಟ್ಟೀ ಮೇ ಮಿಲ್ ಜಾವಾ’ ಹಾಡನ್ನು ನುಡಿಸಿ ಕೃತಜ್ಞತೆ ಸಲ್ಲಿಸಿದ್ದಾರೆ. ನುಡಿದ ಹಾಡು ಭಾವಪೂರ್ಣವಾಗಿ ಮೂಡಿಬಂದಿದೆ.
तेरी मिट्टी में ….
Constable Mujammal Haque of @ITBP_official pays tribute to all fallen Corona Warriors with a tune on Saxophone.The CAPFs have lost more than 300 personnel due to Covid19 till now. pic.twitter.com/nScbJ3pgnM
— Payal Mehta/પાયલ મેહતા/ पायल मेहता/ পাযেল মেহতা (@payalmehta100) May 24, 2021
ಇವರು ನುಡಿಸಿರುವ ಈ ಹಾಡು ಸೋಷಿಯಲ್ ಮಿಡಿಯಾದಲ್ಲಿ ಬಾರೀ ಸದ್ದು ಮಾಡುತ್ತಿದೆ. ವಾಸ್ತವಾಗಿ ಕೊರೊನಾ ಯುಗದಲ್ಲಿ ಕೆಂದ್ರ ಸಶಸ್ತ್ರ ಪೊಲೀಸ್ ಪಡೆಗಳ 300ಕ್ಕೂ ಹೆಚ್ಚು ಸೈನಿಕರು ಸಾವಿಗೀಡಾಗಿದ್ದಾರೆ. ಅವರನ್ನು ನೆನೆಸಿಕೊಳ್ಳುತ್ತಾ ಐಟಿಬಿಪಿ ಕಾನ್ಸ್ಟೇಬಲ್ ಸ್ಯಾಕ್ಸೋಫೋನ್ ವಾದ್ಯದ ಮೂಲಕ ತೇರಿ ಮಿಟ್ಟೀ ಮೇ ಮಿಲ್ ಜಾವಾ ಹಾಡನ್ನು ಸುಂದರವಾಗಿ ನುಡಿಸಿದ್ದಾರೆ.
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ ನೆಟ್ಟಿಗರಿಂದ ಕಾಮೆಂಟ್ಗಳ ಸುರಿಮಳೆಯೇ ಬಂದಿದ್ದು, ಬಿಕ್ಕಟ್ಟಿನ ಸಮಯದಲ್ಲಿ ದೇಶದ ಸೈನಿಕರು ತಮ್ಮ ಜೀವವನ್ನೇ ಪಣಕ್ಕಿಟ್ಟು ದೇಶ ಸೇವೆಗಾಗಿ ನಿಲ್ಲುತ್ತಾರೆ ಎಂದು ಬರೆದುಕೊಂಡಿದ್ದಾರೆ. ಇನ್ನೋರ್ವ ಬಳಕೆದಾದರು, ಕೊರೊನಾ ಸಂದರ್ಭದಲ್ಲಿ ಅವರ ಜೀವವನ್ನು ಒತ್ತೆ ಇಟ್ಟು ಕೊರೊನಾ ವಾರಿಯರ್ಸ್ ಆಗಿ ನಮ್ಮನ್ನು ನೋಡಿಕೊಂಡವರು ಯಾವಾಗೂ ನೆನಪಿನಲ್ಲಿರುತ್ತಾರೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:
Viral Video: ಕೊರೊನಾ ವಾರಿಯರ್ಸ್‌ಗೆ ಗೌರವ ಸೂಚಿಸಲು ಐಟಿಬಿಪಿ ಕಾನ್ಸ್ಟೇಬಲ್ ಭಾವ ಪೂರ್ಣರಾಗ