ಆನೆಗಳನ್ನು ಬುದ್ಧಿವಂತ ಪ್ರಾಣಿಗಳು ಎಂದು ಹೇಳಲಾಗುತ್ತದೆ. ಅವುಗಳು ನಮ್ಮಂತೆಯೇ ಆಲೋಚಿಸುವ ಹಾಗೂ ಇತರರ ಭಾವನೆಗಳನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ. ಹೀಗೆ ಬುದ್ಧಿವಂತ ಪ್ರಾಣಿಯಾಗಿರುವ ಆನೆಗಳು ತುಂಟಾಟವಾಡುವುದರಲ್ಲಿ ಕೂಡಾ ಎತ್ತಿದ್ದ ಕೈ. ಅವುಗಳು ಯಾರಿಗೂ ಅಷ್ಟಾಗಿ ತೊಂದರೆ ಕೊಡಲು ಹೋಗುವುದಿಲ್ಲ. ಆದರೆ ಅವುಗಳು ಚೇಷ್ಟೆ, ತುಂಟಾಟವನ್ನು ತುಂಬಾನೇ ಇಷ್ಟಪಡುತ್ತವೆ. ಆನೆಗಳ ತುಂಟಾಟದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಅದರಲ್ಲೂ ಆನೆಗಳು ಜನರೊಂದಿಗೆ ಮಾಡುವ ತಮಾಷೆಯ ಪ್ರಸಂಗಗಳು ನಮ್ಮನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತದೆ. ಈಗ ಅದೇ ರೀತಿಯ ಹಾಸ್ಯಮಯ ವಿಡಿಯೋವೊಂದು ಹರಿದಾಡುತ್ತಿದ್ದು, ಸಾಮಾನ್ಯವಾಗಿ ನಾವೆಲ್ಲರೂ ನಮ್ಮ ಪ್ರೀತಿ ಪಾತ್ರರಿಗೆ ಪ್ರಾಂಕ್ ಮಾಡುವ ಮೂಲಕ ತಮಾಷೆಯ ಆಟವಾಡುತ್ತೇವೆ ಅಲ್ವಾ. ಅದೇ ರೀತಿ ಇಲ್ಲೊಂದು ಆನೆಯು ಕೂಡಾ ಕಾಡಿಗೆ ಸಫಾರಿಗೆಂದು ಬಂದಂತಹ ಯುವಕರ ತಂಡಕ್ಕೆ ಭಯಾನಕ ಪ್ರಾಂಕ್ ಮಾಡಿ, ಚೇಷ್ಟೆ ಮಾಡಿದೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು, ಇದಪ್ಪ ಪ್ರಾಂಕ್ ಅಂದ್ರೆ ಅಂತ ನೆಟ್ಟಿಗರು ಹೇಳಿದ್ದಾರೆ.
Nature is Amazing ಎಂಬ X ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಇದು ಕೇವಲ ತಮಾಷೆ ಹುಡುಗರೇ ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವಿಡಿಯೋದಲ್ಲಿ ಆನೆಯೊಂದು ಸಫಾರಿಗೆಂದು ಬಂದ ಯುವಕರಿಗೆ ಭಯ ಪಡಿಸುವಂತಹ ತಮಾಷೆಯ ದೃಶ್ಯವನ್ನು ಕಾಣಬಹುದು.
It’s just a prank guys 🐘😂 pic.twitter.com/Ekh9CvOUm4
— Nature is Amazing ☘️ (@AMAZlNGNATURE) January 22, 2024
8 ಸೆಕೆಂಡುಗಳ ಈ ವೈರಲ್ ವಿಡಿಯೋದಲ್ಲಿ ಜೀಪ್ ನಲ್ಲಿ ಸಫಾರಿಗೆಂದು ಬಂದಿದ್ದಂತಹ ಯುವಕರು ಕಾಡಿನಲ್ಲಿ ಆನೆಯ ಹಿಂಡನ್ನು ಕಂಡು ಅಲ್ಲಿಯೇ ಜೀಪ್ ನಿಲ್ಲಿಸಿ ಆನೆಗಳು ನೋಡುತ್ತಿರುತ್ತಾರೆ, ಆ ಸಂದರ್ಭದಲ್ಲಿ ಹಿಂಡಿನಲ್ಲಿದ್ದ ಒಂದು ಆನೆ ವೇಗವಾಗಿ ಓಡುತ್ತಾ ಯುವಕರ ಬಳಿ ಬರುತ್ತೆ. ಇದನ್ನು ಕಂಡ ಆ ಯುವಕರು ಈ ಆನೆ ನಮ್ಮ ಕಥೆಯನ್ನು ಮುಗಿಸಿ ಬಿಡುತ್ತೆ ಅಂತ ಭಯ ಪಟ್ಟುಕೊಂಡು ಓಡಿ ಹೋಗಲು ಸಿದ್ಧರಾಗುತ್ತಾರೆ. ಅಷ್ಟರಲ್ಲಿ ಆ ಆನೆ ಭಯಪಡ್ಕೊಂಡ್ರಾ ನನ್ ಜಸ್ಟ್ ಪ್ರಾಂಕ್ ಮಾಡಿದ್ದು ಅಷ್ಟೇ ಎನ್ನುತ್ತಾ, ಅವರ ಬಳಿಯಿಂದ ಹಿಂದೆ ಸರಿದು ಹೋಗುವಂತಹ ಹಾಸ್ಯಮಯ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಇದ್ಯಾವುದು ಗುರು ಇಡ್ಲಿ ಸಾಂಬಾರ್ ಐಸ್ ಕ್ರೀಮ್ ರೋಲ್
ಜನವರಿ 24 ರಂದು ಹಂಚಿಕೊಳ್ಳಲಾದ ಈ ವಿಡಿಯೋ 18.5 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 1 ಲಕ್ಷಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಆನೆಯು ತಮಾಷೆ ಮಾಡುವ ದೃಶ್ಯ ತುಂಬಾ ಸುಂದರವಾಗಿದೆʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದು ತುಂಬಾ ಭಯಾನಕ ಪ್ರಾಂಕ್ʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼ ಈ ತಮಾಷೆ ಸಂಪೂರ್ಣವಾಗಿ ಉಲ್ಲಾಸದಾಯಕವಾಗಿದೆ. ಅದನ್ನು ನೋಡಿ ನಗು ತಡೆದುಕೊಳ್ಳಲಾಗಲಿಲ್ಲʼ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ