Viral Video: ಇದ್ಯಾವುದು ಗುರು ಇಡ್ಲಿ ಸಾಂಬಾರ್ ಐಸ್ ಕ್ರೀಮ್ ರೋಲ್

ಐಸ್ ಕ್ರೀಮ್ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಕೆಲವರಂತೂ ಊಟ ಬೇಕಾದರೂ ಬಿಟ್ಟಿರುತ್ತಾರೆ ಆದ್ರೆ ಐಸ್ ಕ್ರೀಮ್ ತಿನ್ನೋದನ್ನು ಮಾತ್ರ ಬಿಡಲ್ಲ. ಬಹುತೇಕ ನೀವೆಲ್ಲರೂ ವಿವಿಧ ಬಗೆಯ ಐಸ್ ಕ್ರೀಮ್ ತಿಂದಿರ್ತೀರಿ ಅಲ್ವಾ. ಆದರೆ ನೀವು ಎಂದಾದರೂ ಇಡ್ಲಿ ಸಾಂಬರ್ ಐಸ್ ಕ್ರೀಮ್ ರೋಲ್ ತಿಂದಿದ್ದೀರಾ? ಅರೇ ಏನಿದು, ಬೆಳಗ್ಗೆ ಬ್ರೇಕ್ಫಾಸ್ಟ್ ಗೆ ತಿನ್ನುವ ಇಡ್ಲಿ ಸಾಂಬಾರಿನಿಂದಲೂ ಐಸ್ಕ್ರೀಮ್ ತಯಾರಿಸಬಹುದಾ ಅಂತ ಯೋಚ್ನೆ ಮಾಡ್ತಿದ್ದೀರಾ? ಇತ್ತೀಚಿಗಂತೂ ಈ ವಿಯರ್ಡ್  ಕಾಂಬಿನೇಷನ್  ಐಸ್ಕ್ರೀಮ್ ರೋಲ್ ಟ್ರೆಂಡ್ನಲ್ಲಿವೆ. ಅದೇ ರೀತಿ ಇದೀಗ ಸ್ಟ್ರೀಟ್ ಫುಡ್ ವ್ಯಾಪಾರಿಯೊಬ್ಬರು ವಿಶಿಷ್ಟವಾದ ಇಡ್ಲಿ ಸಾಂಬಾರ್ ಐಸ್ ಕ್ರೀಮ್ ರೋಲ್  ತಯಾರಿಸಿದ್ದಾರೆ. 

Viral Video: ಇದ್ಯಾವುದು ಗುರು ಇಡ್ಲಿ ಸಾಂಬಾರ್ ಐಸ್ ಕ್ರೀಮ್ ರೋಲ್
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 23, 2024 | 7:07 PM

ಇತ್ತೀಚಿನ ದಿನಗಳಲ್ಲಿ ಅನೇಕ ವಿಯರ್ಡ್ ಫುಡ್ ಕಾಂಬಿನೇಶನ್ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಪಾವ್ ಭಾಜಿ ಐಸ್ ಕ್ರೀಮ್ ಅಂತೆ, ಫಾಂಟಾ ಆಮ್ಲೆಟ್, ಗುಲಾಬ್ ಜಾಮೂನ್ ದೋಸೆ, ಹಸಿ ಮೆಣಸಿನ ಕಾಯಿ ಐಸ್ ಕ್ರೀಮ್, ಓರಿಯೋ ಬಿಸ್ಕೆಟ್ ಪಕೋಡಾ, ಬೀಯರ್ ಬಜ್ಜಿಯಂತೆ ಹೀಗೆ ಒಂದಾ ಎರಡಾ ಹಲವಾರು ವಿಯರ್ಡ್ ಫುಡ್ ಕಾಂಬಿನೇಷನ್ ಗಳ ವಿಡಿಯೋಗಳು ಹರಿದಾಡುತ್ತಿರುತ್ತವೆ. ಈಗ ಅದೇ ರೀತಿಯ ವಿಡಿಯೋವೊಂದು ಹರಿದಾಡುತ್ತಿದ್ದು, ಸ್ಟ್ರೀಟ್ ಫುಡ್ ವ್ಯಾಪಾರಿಯೊಬ್ಬರು ದಕ್ಷಿಣ ಭಾರತದ ಪ್ರಸಿದ್ಧ ಉಪಹಾರವಾಗಿರುವ ಇಡ್ಲಿ ಸಾಂಬಾರ್ ನಿಂದ ಐಸ್ ಕ್ರೀಮ್ ರೋಲ್ ತಯಾರಿಸಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅಲ್ಲಾ ಕಣ್ರೀ ಬೆಳಗ್ಗೆ ಬ್ರೇಕ್ ಫಾಸ್ಟ್ ಗೂ  ಇಡ್ಲಿ ಸಾಂಬಾರ್ ತಿನ್ನೋಕೆ ಇಷ್ಟ ಪಡಲ್ಲ, ಇನ್ನೂ ಈ ಇಡ್ಲಿ ಸಾಂಬಾರ್ ಐಸ್ ಕ್ರೀಮ್ ರೋಲ್ ತಿನ್ನೊದುಂಟೆ ಅಂತ ಆಹಾರ ಪ್ರಿಯರು ಮೂಗು ಮುರಿದಿದ್ದಾರೆ.

@foodb_unk ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಸ್ಟ್ರೀಟ್ ಫುಡ್ ವ್ಯಾಪಾರಿಯೊಬ್ಬರು   ಇಡ್ಲಿ ಸಾಂಬಾರ್ ಐಸ್ ಕ್ರೀಮ್ ರೋಲ್ ತಯಾರಿಸುತ್ತಿರುವ ದೃಶ್ಯವನ್ನು ಕಾಣಬಹುದು.

View this post on Instagram

A post shared by @foodb_unk

ವೈರಲ್ ವಿಡಿಯೋದಲ್ಲಿ ಐಸ್ ಕ್ರೀಮ್ ವ್ಯಾಪಾರಿ ಮೊದಲಿಗೆ ಟ್ರೇ ಮೇಲೆ ಒಂದು ಇಡ್ಲಿ ಹಾಕಿ ಅದನ್ನು ಚೆನ್ನಾಗಿ ಪುಡಿ ಮಾಡಿಕೊಂಡು, ಅದರ ಮೇಲೆ ಸಾಂಬಾರ್  ಮತ್ತು  ಚಟ್ನಿಯನ್ನು ಸಹ ಸೇರಿಸಿಕೊಳ್ಳುತ್ತಾರೆ.  ಬಳಿಕ ಅದಕ್ಕೆ ವೆನಿಲ್ಲಾ ಫ್ಲೇವರ್ ಐಸ್ ಕ್ರೀಮ್  ಹಾಕಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ, ಇಡ್ಲಿ ಸಾಂಬರ್ ಐಸ್ ಕ್ರೀಂ ರೋಲ್ ತಯಾರಿಸಿ ಒಂದು ಪ್ಲೇಟ್ ಗೆ ಸರ್ವ್ ಮಾಡಿ ಬಳಿಕ  ಅದರ ಮೇಲೆ ಒಂದು ತುಂಡು ಇಡ್ಲಿ ಮತ್ತು ಸ್ವಲ್ಪ ಸಾಂಬಾರ್ ಹಾಕಿ ಅಲಂಕರಿಸುತ್ತಿರುವ  ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ:  ಕಣ್ಣು ಮಿಟುಕಿಸುತ್ತಾ ಮುಗುಳ್ನಕ್ಕ ಬಾಲರಾಮನ ವಿಗ್ರಹ, ಮೈ ರೋಮಾಂಚನಗೊಳಿಸಿದ ಎಐ ವಿಡಿಯೋ 

ಏಳು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ  8.7 ಮಿಲಿಯನ್ ವೀಕ್ಷಣೆಗಳನ್ನು ಹಾಗೂ  ಒಂದು ಲಕ್ಷಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ನೆಟ್ಟಿಗರು ಈ ವಿಡಿಯೋಗೆ ತರಹೇವಾರಿ ಕಮೆಂಟ್ಸ್ಗಳನ್ನು  ಮಾಡಿದ್ದಾರೆ. ಒಬ್ಬ ಬಳಕೆದಾರರು ʼಇದನ್ನು ಕಂಡು ಹಿಡಿದವನನ್ನು ಪತ್ತೆ ಹಚ್ಚಿ ಮೊದಲು ಜೈಲಿಗೆ ಅಟ್ಟಬೇಕುʼ ಎಂದು ಕೋಪ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇನ್ನೂ ಈ ಕಣ್ಣಲ್ಲಿ ಏನೆಲ್ಲಾ ನೋಡೋದಿದೆಯೋʼ ಅಂತ ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದನ್ನು ತಿಂದು ಬದುಕುವುದುಂಟೆʼ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ