ಲಿಂಗಪರಿವರ್ತನೆಗೆಂದು ಆಸ್ಪತ್ರೆಗೆ ಹೋದಾಗ ಗೊತ್ತಾಯ್ತು ತೃತೀಯಲಿಂಗಿ 5 ತಿಂಗಳ ಗರ್ಭಿಣಿ
ಇಟಲಿಯಲ್ಲಿ ಲಿಂಗಪರಿವರ್ತನೆ ಮಾಡಿಸಿಕೊಳ್ಳಬೇಕೆಂದು ಆಸ್ಪತ್ರೆಗೆ ಬಂದಿದ್ದಾಗ ತೃತೀಯಲಿಂಗಿ 5 ತಿಂಗಳ ಗರ್ಭಿಣಿ ಎಂಬುದು ಗೊತ್ತಾಗಿದೆ. ಇನ್ನೇನು ಸ್ತನಗಳನ್ನು ತೆಗೆಯುವ ಶಸ್ತ್ರಚಿಕಿತ್ಸೆ ಮಾಡಬೇಕಿತ್ತು, ಆಗ ಆಕೆ ಗರ್ಭಿಣಿ ಎಂಬುದು ತಿಳಿದುಬಂದಿದೆ. ಇಟಲಿಯ ಇತಿಹಾಸದಲ್ಲೇ ಇದು ಮೊದಲ ಪ್ರಕರಣ ಎಂದು ವೈದ್ಯರು ಹೇಳಿದ್ದಾರೆ.

ತೃತೀಯಲಿಂಗಿಗೆ ಸ್ತನಗಳನ್ನು ತೆಗೆಯುವ ಶಸ್ತ್ರ ಚಿಕಿತ್ಸೆ ನಡೆಯಬೇಕಿತ್ತು ಜತೆಗೆ ಗರ್ಭಾಶಯವನ್ನು ತೆಗೆದುಹಾಕಬೇಕಿತ್ತು. ಮಾರ್ಕೋ ಇದೀಗ ಮಗುವಿನ ಜೈವಿಕ ತಾಯಿಯಾಗಿದ್ದರೂ ಕೂಡ ಕಾನೂನುಬದ್ಧವಾಗಿ ತಂದೆಯಾಗಿರುತ್ತಾರೆ. ಭ್ರೂಣವು ಅಪಾಯದಲ್ಲಿದೆ ತಕ್ಷಣವೇ ಶಸ್ತ್ರಚಿಕಿತ್ಸೆಯನ್ನು ಸ್ಥಗಿತಗೊಳಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಚಿಕಿತ್ಸೆಯನ್ನು ತಕ್ಷಣವೇ ನಿಲ್ಲಿಸಬೇಕು, ಇಲ್ಲದಿದ್ದರೆ ಮಗುವಿಗೆ ಅಪಾಯವಾಗಬಹುದು, ವಿಶೇಷವಾಗಿ ಗರ್ಭಧಾರಣೆಯ ಮೊದಲ ತ್ರೈಮಾಸಿಕದಲ್ಲಿ ಇದು ಮಗುವಿನ ಅಂಗಗಳ ಬೆಳವಣಿಗೆಯ ಪ್ರಮುಖ ಸಮಯವಾಗಿದೆ ಎಂದು ಹೇಳಿದ್ದರು.
ಮತ್ತಷ್ಟು ಓದಿ: Bengaluru scam: ಮಾಜಿ ಪ್ರಿಯಕರನನ್ನು ವಶೀಕರಣ ಮಾಡಲು ಹೋಗಿ 8 ಲಕ್ಷ ರೂ. ಕಳೆದುಕೊಂಡ ಬೆಂಗಳೂರಿನ ಯುವತಿ
ಹಾರ್ಮೋನ್ ಚಿಕಿತ್ಸೆಯು ಮುಟ್ಟಾಗುವುದನ್ನು ತಡೆಯುತ್ತದೆ, ಆದರೆ ಇದು ಗರ್ಭನಿರೋಧಕವಾಗಿ ಕಾರ್ಯನಿರ್ವಹಿಸುವುದಿಲ್ಲ, ಚಿಕಿತ್ಸೆಗೆ ಒಳಪಡುವ ವ್ಯಕ್ತಿ ಅಂಡೋತ್ಪತ್ತಿಯನ್ನು ಮುಂದುವರೆಸಬಹುದು, ಹಾಗೆಯೇ ಗರ್ಭಧಾರಣೆಯಲ್ಲಿ ಅಪಾಯವನ್ನು ಎದುರಿಸಬಹುದು ಎಂದು ಹೇಳಿದ್ದಾರೆ.
ಲಿಂಗಪರಿವರ್ತನೆಗೆ ಒಳಗಾಗುವವರು ಚಿಕಿತ್ಸೆಯ ಸಮಯದಲ್ಲಿ ಅನುಮತಿಸುವ ಗರ್ಭನಿರೋಧಕಗಳನ್ನು ಬಳಸಬಹುದು ಎಂದು ವೈದ್ಯರು ಹೇಳಿದ್ದಾರೆ. ತೃತೀಯಲಿಂಗಿ ಪುರುಷನನ್ನು ಸೀ ಹಾರ್ಸ್ ಡ್ಯಾಡ್ ಎಂದು ಕರೆಯಲಾಗುತ್ತದೆ ಅಂದರೆ ಸಮುದ್ರ ಕುದುರೆ ಎಂದರ್ಥ ಇವು ತನ್ನ ಮರಿಗಳನ್ನು ಹೊತ್ತು ತಿರುಗುತ್ತವೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ