
ಭಾರತದ ಅಂದ್ರೆ ವಿದೇಶಿಗರಿಗೆ (foreigner) ಸೆಳೆತ. ಹೀಗಾಗಿ ಇಷ್ಟ ಪಟ್ಟು ಭಾರತಕ್ಕೆ ಭೇಟಿ ನೀಡುವ ವಿದೇಶಿಗರು ಇಲ್ಲಿನ ಪ್ರವಾಸಿ ತಾಣಗಳ ಸೌಂದರ್ಯ ಸವಿಯುತ್ತಾರೆ. ಇಲ್ಲಿನ ವಾತಾವರಣ, ಇಲ್ಲಿನ ಜೀವನಶೈಲಿಗೆ ಹೊಂದಿಕೊಂಡು ಜನರೊಂದಿಗೆ ಬೆರೆತು ಭಾರತದಲ್ಲಿಯೇ ಉಳಿಯುತ್ತಾರೆ. ಇನ್ನು ಕೆಲವರು ತಮ್ಮ ದೇಶಕ್ಕೆ ಮರಳುವಾಗ ಭಾವುಕರಾಗುತ್ತಾರೆ. ಅಮೆರಿಕನ್ ಮಹಿಳೆಗೂ (American women) ಇದೇ ಸಂದರ್ಭ ಎದುರಾಗಿದೆ. ಯುಕೆ ಟ್ರಾವೆಲ್ ವ್ಲಾಗರ್ ಭಾರತದ ಪ್ರವಾಸ ಮುಗಿಸಿ ತಮ್ಮ ದೇಶಕ್ಕೆ ಮರಳುವಾಗ ಭಾವನಾತ್ಮಕ ವಿದಾಯ ಹೇಳಿದ್ದಾರೆ. ಭಾರತ ಹಾಗೂ ಇಲ್ಲಿನ ಸುಂದರ ನೆನಪುಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ದೇಶವು ತುಂಬಾ ವಿಶೇಷವೆನಿಸಿತು ಎಂದು ಹೇಳಿದ್ದಾರೆ. ಈ ಕುರಿತಾದ ಪೋಸ್ಟ್ ಸದ್ಯ ವೈರಲ್ ಆಗಿದೆ.
@sociallywanderful ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಯುಕೆ ಟ್ರಾವೆಲ್ ವ್ಲಾಗರ್ ಐದೂವರೆ ತಿಂಗಳು ಭಾರತದಲ್ಲಿ ಸುತ್ತಾಡಿದ ಪ್ರವಾಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನಲ್ಲಿ ಈ ದೇಶದಲ್ಲಿ ಐದೂವರೆ ತಿಂಗಳ ನಂತರ ಇಂದು ಭಾರತದಲ್ಲಿ ನನ್ನ ಕೊನೆಯ ದಿನ. ನಾನು ನನ್ನ ಪ್ರವಾಸದ ಕೊನೆಯ ಫೋಟೋ ತೆಗೆದುಕೊಳ್ಳುತ್ತಿದ್ದೆ. ನನ್ನ ಕೂದಲಿನಲ್ಲಿ ಗಾಳಿ ಬೀಸುತ್ತಿತ್ತು, ಎಲ್ಲಾ ನೆನಪುಗಳು ಪ್ರವಾಹದಂತೆ ಬಂದವು. ಈ ಸ್ಥಳವು ನಿಮ್ಮೊಂದಿಗೆ ಎಷ್ಟು ಉಳಿಯಬಹುದು ಎಂದು ಜನರಿಗೆ ಹೇಳುವುದು ಕಷ್ಟ. ಈ ವರ್ಷದ ಆರಂಭದಲ್ಲಿ, ಭಾರತ ಹೇಗಿರುತ್ತದೆ ಎಂಬುದರ ಬಗ್ಗೆ ನನಗೆ ಯಾವುದೇ ನಿರೀಕ್ಷೆಗಳಿರಲಿಲ್ಲ. ಮುಂದಿನ ಎರಡು ತಿಂಗಳುಗಳು ಏನನ್ನು ನೀಡಬಹುದೆಂದು ನಾನು ನಂಬಲಾಗದಷ್ಟು ಉತ್ಸುಕನಾಗಿದ್ದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪೌರಕಾರ್ಮಿಕರ ಜತೆ ಸೇರಿ ಬೆಂಗಳೂರಿನ ಬೀದಿಗಳನ್ನು ಸ್ವಚ್ಛಗೊಳಿಸಿದ ವಿದೇಶಿಗ
ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಮತ್ತೆ ಭಾರತಕ್ಕೆ ಮರಳಿ ಬನ್ನಿ ಎಂದಿದ್ದಾರೆ. ಇನ್ನೊಬ್ಬರು, ನೀವು ಭಾರತದ ವೈವಿಧ್ಯತೆಯನ್ನು ಸೆರೆಹಿಡಿದ ರೀತಿ ಸಂಪೂರ್ಣವಾಗಿ ಇಷ್ಟವಾಯಿತು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಇಂತಹ ಸ್ಥಳದೊಂದಿಗೆ ಸಂಪರ್ಕ ಸಾಧಿಸುವುದು ತುಂಬಾ ವಿಶೇಷ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ