ಬೆಂಗಳೂರಿನ ಅಪಾರ್ಟ್‌ಮೆಂಟ್ ಲಿಫ್ಟ್ನಲ್ಲಿ ನಾಯಿ ಮರಿಯನ್ನು ಬಡಿದು ಕೊಂದ ಕೆಲಸದಾಕೆ!
ಬೆಂಗಳೂರಿನ ಅಪಾರ್ಟ್‌ಮೆಂಟ್ ಲಿಫ್ಟ್ ಒಳಗೆ ಮನೆ ಕೆಲಸದಾಕೆಯೊಬ್ಬಳು ತನ್ನ ಮಾಲೀಕರ ಪ್ರೀತಿಯ ನಾಯಿ ಮರಿಯನ್ನು ಲಿಫ್ಟ್ಗೆ ಬಡಿದು ಕೊಂದ ಘಟನೆ ನಡೆದಿದೆ. ಬಾಗಲೂರು ಪ್ರದೇಶದಲ್ಲಿ ಮನೆ ಕೆಲಸಗಾರ್ತಿಯೊಬ್ಬಳು ಗೂಫಿ ಎಂಬ ಸಾಕು ನಾಯಿಮರಿಯನ್ನು ಲಿಫ್ಟ್ ಗೋಡೆಗೆ ಬಡಿದು ಕ್ರೂರವಾಗಿ ಕೊಂದಿದ್ದಾಳೆ. ಇದಾದ ಪುಷ್ಪಲತಾ ಎಂಬ ಆ ಕೆಲಸದಾಕೆ ಸತ್ತ ನಾಯಿಮರಿಯನ್ನು ಯಾವುದೇ ಕರುಣೆಯಿಲ್ಲದೆ ದರದರನೆ ಲಿಫ್ಟ್ನಿಂದ ಹೊರಗೆ ಎಳೆದುಕೊಂಡು ಹೋಗಿದ್ದಾಳೆ.
ಬೆಂಗಳೂರು, ನವೆಂಬರ್ 3: ಬೆಂಗಳೂರಿನ (Bengaluru) ಬಾಗಲೂರು ಪ್ರದೇಶದಲ್ಲಿ ಮನೆ ಕೆಲಸಗಾರ್ತಿಯೊಬ್ಬಳು ಗೂಫಿ ಎಂಬ ಸಾಕು ನಾಯಿಮರಿಯನ್ನು ಲಿಫ್ಟ್ ಗೋಡೆಗೆ ಬಡಿದು ಕ್ರೂರವಾಗಿ ಕೊಂದಿದ್ದಾಳೆ. ಇದಾದ ಪುಷ್ಪಲತಾ ಎಂಬ ಆ ಕೆಲಸದಾಕೆ ಸತ್ತ ನಾಯಿಮರಿಯನ್ನು ಯಾವುದೇ ಕರುಣೆಯಿಲ್ಲದೆ ದರದರನೆ ಲಿಫ್ಟ್ನಿಂದ ಹೊರಗೆ ಎಳೆದುಕೊಂಡು ಹೋಗಿದ್ದಾಳೆ.
ಈ ದೃಶ್ಯ ಲಿಫ್ಟ್ನೊಳಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತಾನು ಪ್ರೀತಿಯಿಂದ ಸಾಕಿದ್ದ ನಾಯಿಮರಿ ಸಾವನ್ನಪ್ಪಿರುವುದನ್ನು ಕಂಡು ರಾಶಿ ಪೂಜಾರಿ ಎಂಬಾಕೆ ಪೊಲೀಸರಿಗೆ ದೂರು ನೀಡಿದ್ದರು. ಅವರು ಸಿಸಿಟಿವಿ ಪರಿಶೀಲಿಸಿದಾಗ ಮನೆಕೆಲಸದಾಕೆಯೇ ಮರಿಯನ್ನು ಕೊಂದಿರುವುದು ಬಯಲಾಗಿದೆ. ಆ ಮಹಿಳೆಯ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ. ಈ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನಷ್ಟು ವೈರಲ್ ವಿಡಿಯೋಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

