ಆ ಒಂದು ಲಾಟರಿಯಿಂದ (Lottery) ಟ್ರಕ್ ಚಾಲಕನನ್ನು ಅದೃಷ್ಟ ಎಂಬುದು ಸುಂಟರಗಾಳಿಯಂತೆ ಮೇಲಕ್ಕೆ ಎತ್ತಿದೆ. ಆ ವ್ಯಕ್ತಿ ಹಲವು ದಿನಗಳಿಂದ ಲಾಟರಿ ಟಿಕೆಟ್ ಖರೀದಿಸುತ್ತಿದ್ದ. ಇತ್ತೀಚೆಗೆ ಅವರು ವಿನೂತನ ಲಾಟರಿ ಗೆದ್ದಿದ್ದಾರೆ. ಇದರಿಂದ ಅವರಿಗೆ ವಾರಕ್ಕೆ 82 ರೂಪಾಯಿಯಂತೆ ಇಡೀ ಜೀವಮಾನದುದ್ದಕ್ಕೂ ಪಾವತಿಸಲಾಗುವುದು.
ವಿವರಗಳಿಗೆ ಹೋದರೆ… ಅಮೆರಿಕದ ಒರೆಗಾನ್ ರಾಜ್ಯದ ಟ್ರಕ್ ಚಾಲಕ ರಾಬಿನ್ ರೈಡೆಲ್ 14 ವರ್ಷಗಳಿಂದ ಲಾಟರಿ ಟಿಕೆಟ್ ಖರೀದಿಸುತ್ತಿದ್ದಾರೆ. ಸರಿಯಾಗಿ ಒಂದೂವರೆ ದಶಕದ ನಂತರ ಅವರ ಸರದಿ ಬಂದಿದೆ. ವಿನ್ ಫಾರ್ ಲೈಫ್ ಲಾಟರಿ ಗೆದ್ದಿದ್ದಾರೆ. ಇದನ್ನು ಗೆದ್ದವರು ಜೀವನ ಪರ್ಯಂತ ಹಣ ಪಡೆಯುತ್ತಾರೆ ಎಂದು ಲಾಟರಿ ಕಂಪನಿ ಹೇಳಿತ್ತು. ರಾಬಿನ್‌ಗೆ ಪ್ರತಿ ವಾರ ಒಂದು ಸಾವಿರ ಡಾಲರ್‌ನಂತೆ (ಭಾರತೀಯ ಕರೆನ್ಸಿಯಲ್ಲಿ ರೂ. 82 ಸಾವಿರ) ಹಣವನ್ನು ವಿಜೇತನಿಗೆ ಜೀವನದುದ್ದಕ್ಕೂ ನೀಡುತ್ತಲೇ ಇರುತ್ತದೆ.
Also read:
ಕೇರಳ: ಬ್ಯಾಂಕ್ನಿಂದ ಜಪ್ತಿ ನೋಟಿಸ್ ಬಂದ ಕೆಲವೇ ಗಂಟೆಗಳಲ್ಲಿ ಹೊಡೆಯಿತು 70 ಲಕ್ಷ ರೂ. ಬಹುಮಾನದ ಲಾಟರಿ
ಹೀಗೊಂದು ಬಂಪರ್ ಆಫರ್ ಸಿಕ್ಕಿರುವುದಕ್ಕೆ ರಾಬಿನ್ ಸಂಭ್ರಮಿಸುತ್ತಿರುವಾಗಲೇ ಇನ್ನೆರಡು ವರ್ಷಗಳಲ್ಲಿ ತನ್ನ ಡ್ರೈವಿಂಗ್ ಕೆಲಸಕ್ಕೆ ಗುಡ್ ಬೈ ಹೇಳುತ್ತೇನೆ ಎಂದಿದ್ದಾರೆ. ಪ್ರತಿ ವಾರ ಲಾಟರಿ ರೂಪದಲ್ಲಿ ಬರುವ ಹಣದಲ್ಲಿ ಮನೆ ಕಟ್ಟುವುದಲ್ಲದೆ ಭವಿಷ್ಯಕ್ಕೆ ಒಂದಿಷ್ಟು ಬಿಟ್ಟುಕೊಡುತ್ತೇನೆ ಎನ್ನುತ್ತಾರೆ ರಾಬಿನ್. ಈ ಲಾಟರಿ ಸುದ್ದಿ ಇದೀಗ ವೈರಲ್ ಆಗುತ್ತಿದೆ.
ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ