ಹಿಮಾಚಲ ಭೀಕರ ಭೂಕುಸಿತದಿಂದ ಸಾಯುವ ಮೊದಲು ಜೈಪುರ ವೈದ್ಯರ ಟ್ವೀಟ್

| Updated By: shruti hegde

Updated on: Jul 26, 2021 | 2:49 PM

Landslide in Himachal Pradesh: ಭೀಕರವಾದ ಘಟನೆಯಲ್ಲಿ ಜೈಪುರದ ಆಯುರ್ವೇದ ವೈದ್ಯೆ ದೀಪಾ ಶರ್ಮಾ ಕೂಡಾ ಸಾವಿಗೀಡಾಗಿದ್ದಾರೆ. ಸಾವಿನ ಹಿಂದಿನ ದಿನ ಹಿಮಾಚಲ ಪ್ರವಾಸದ ಫೋಟೋವನ್ನು ಟ್ವೀಟ್ ಮಾಡಿದ್ದರು.

ಹಿಮಾಚಲ ಭೀಕರ ಭೂಕುಸಿತದಿಂದ ಸಾಯುವ ಮೊದಲು ಜೈಪುರ ವೈದ್ಯರ ಟ್ವೀಟ್
ಹಿಮಾಚಲ ಭೀಕರ ಭೂಕುಸಿತದಿಂದ ಸಾಯುವ ಮೊದಲು ಜೈಪುರ ವೈದ್ಯರ ಟ್ವೀಟ್
Follow us on

ಹಿಮಾಚಲ ಪ್ರದೇಶದಲ್ಲಿ ಭಾನುವಾರ ನಡೆದ ಭೀಕರ ಭೂಕುಸಿತದಲ್ಲಿ 9 ಜನ ಸಾವಿಗೀಡಾಗಿದ್ದಾರೆ ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ತಿಳಿದು ಬಂದಿತ್ತು. ಭೀಕರವಾದ ಘಟನೆಯಲ್ಲಿ ಜೈಪುರದ ಆಯುರ್ವೇದ ವೈದ್ಯೆ ದೀಪಾ ಶರ್ಮಾ ಕೂಡಾ ಸಾವಿಗೀಡಾಗಿದ್ದಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ, ಅವರು ಸಾವಿನ ಹಿಂದಿನ ದಿನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಹಿಮಾಚಲದ ಫೋಟೋ  ಇದೀಗ  ಹರಿದಾಡುತ್ತಿದೆ.

ಭಾರತದ ಅಂಚಿನಲ್ಲಿ ನಾವು ನಿಂತಿದ್ದೇವೆ. ಸುಮಾರು 80 ಕಿ.ಮೀಟರ್ ದೂರದಲ್ಲಿ ಟಿಬೆಟ್ ಗಡಿ ಇದೆ ಎಂದು 34 ವರ್ಷದ ವೈದ್ಯೆ ದೀಪಾ ಟ್ವೀಟ್ ಮಾಡಿದ್ದರು. ಸಾಂಗ್ಲಾ ಕಣಿವೆಯಲ್ಲಿನ ಬಂಡೆಗಳು ನೆಲಕ್ಕುರುಳಿ 9 ಮಂದಿ ಸಾವಿಗೀಡಾಗಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ಶರ್ಮಾ ಅವರ ಟ್ವಿಟರ್ ಹಿಮಾಚಲ ಪ್ರದೇಶ ಪ್ರವಾಸದ ರಮಣೀಯ ದೃಶ್ಯಗಳಿಂದ ತುಂಬಿತ್ತು.

ಸಾವಿಗೀಡಾದ ಪ್ರವಾಸಿಗರ ಕುಂಟುಬಗಳಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ದುರಂತದಲ್ಲಿ ಗಾಯಗೊಂಡವರಿಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುವುದು. ಅವರೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹೇಳಿದ್ದಾರೆ. ಪ್ರಧಾನಿ ನರೆಂದ್ರ ಮೋದಿ ತಲಾ ₹2 ಲಕ್ಷ ಘೋಷಿಸಿದ್ದಾರೆ. ಭೀಕರ ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಕುಟುಂಬಕ್ಕೆ ಮತ್ತು ಗಾಯಾಳುಗಳಿಗೆ 50,000 ರೂಪಾಯಿ ನೀಡಲಾಗುವುದು ಎಂದು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ:

Landslide in Himachal Pradesh ಹಿಮಾಚಲ ಪ್ರದೇಶದಲ್ಲಿ ಭಾರೀ ಭೂಕುಸಿತ, ಮುರಿದು ಬಿತ್ತು ಸೇತುವೆ: 9 ಪ್ರವಾಸಿಗರು ಸಾವು

Published On - 2:42 pm, Mon, 26 July 21