ಜಪಾನ್‌ ನಿಜಕ್ಕೂ ಕ್ಲೀನ್‌ ಆಗಿದ್ಯಾ? ಬರೀ ಬಿಳಿ ಸಾಕ್ಸ್‌ ಧರಿಸಿ ಬೀದಿಯಲ್ಲಿ ನಡೆದಾಡುವ ಮೂಲಕ ಸ್ವಚ್ಛತೆಯನ್ನು ಪರೀಕ್ಷಿಸಿದ ಯುವತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 15, 2025 | 10:43 AM

ಜಪಾನ್‌ ದೇಶ ತುಂಬಾನೇ ಸ್ವಚ್ಛವಾಗಿರುವ ದೇಶ ಅಂತಾ ಅನೇಕರು ಹೇಳ್ತಾ ಇರ್ತಾರೆ. ಇದಕ್ಕೆ ಸಂಬಂಧಿಸಿದ ಸಾಕಷ್ಟು ವಿಡಿಯೋ, ಫೋಟೋಗಳು ಕೂಡಾ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಇದೀಗ ಇಲ್ಲೊಬ್ಳು ಯುವತಿ ಜಪಾನ್‌ ನಿಜಕ್ಕೂ ಅಷ್ಟೊಂದು ಕ್ಲೀನ್‌ ಆಗಿದ್ಯಾ ಎಂಬುದನ್ನು ಪರೀಕ್ಷಿಸಿದ್ದಾಳೆ. ಹೌದು ಬರೀ ಬಿಳಿ ಸಾಕ್ಸ್‌ ಧರಿಸಿ ನಗರದ ಬೀದಿಯಲ್ಲಿ ಓಡಾಡುವ ಮೂಲಕ ಅಲ್ಲಿನ ಸ್ವಚ್ಛತೆಯನ್ನು ಪರೀಕ್ಷಿಸಿದ್ದಾಳೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಜಪಾನ್‌ ಒಂದು ಪುಟ್ಟ ದೇಶವಾಗಿದ್ದರೂ ಅದು ತನ್ನ ಸೌಂದರ್ಯ, ಸ್ವಚ್ಛತೆ ಆಚಾರ ವಿಚಾರದ ಕಾರಣಕ್ಕಾಗಿಯೇ ಜಗತ್ತಿನಾದ್ಯಂತ ಗಮನ ಸೆಳೆದಿದೆ. ಅದರಲ್ಲೂ ಜಪಾನ್‌ ದೇಶದ ಸಂಸ್ಕೃತಿ, ಸ್ವಚ್ಛತೆಗೆ ಸಂಬಂಧಿಸಿದ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ಕಾಣಸಿಗುತ್ತಿರುತ್ತವೆ. ಇದೀಗ ಇಲ್ಲೊಬ್ಳು ಯುವತಿ ಜಪಾನ್‌ ದೇಶದ ಬೀದಿಗಳು ನಿಜಕ್ಕೂ ಅಷ್ಟೊಂದು ಕ್ಲೀನ್‌ ಆಗಿದ್ಯಾ ಎಂಬುದನ್ನು ಪರೀಕ್ಷಿಸಿದ್ದಾಳೆ. ಹೌದು ಬರೀ ಬಿಳಿ ಸಾಕ್ಸ್‌ ಧರಿಸಿ ನಗರದ ಬೀದಿಯಲ್ಲಿ ಓಡಾಡುವ ಮೂಲಕ ಅಲ್ಲಿನ ಸ್ವಚ್ಛತೆಯನ್ನು ಪರೀಕ್ಷಿಸಿದ್ದಾಳೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಭಾರತೀಯ ಮೂಲದ ಇನ್‌ಫ್ಲುಯೆನ್ಸರ್‌ ಸಿಮ್ರಾನ್‌ ಜೈನ್‌ ಕಳೆದ ವರ್ಷ ಅಕ್ಟೋಬರ್‌ ತಿಂಗಳಿನಲ್ಲಿ ಜಪಾನ್‌ಗೆ ಭೇಟಿ ನೀಡಿದ್ದಂತಹ ಸಂದರ್ಭದಲ್ಲಿ ಅಲ್ಲಿನ ನಗರದ ಬೀದಿಗಳಲ್ಲಿ ಬರೀ ಬಿಳಿ ಸಾಕ್ಸ್‌ ಧರಿಸಿ ಓಡಾಡುವ ಮೂಲಕ ಅಲ್ಲಿನ ಸ್ವಚ್ಛತೆಯನ್ನು ಪರೀಕ್ಷಿಸಿದ್ದಾಳೆ. ಜಪಾನ್‌ನ ಬೀದಿಗಳು ಎಷ್ಟು ಸ್ವಚ್ಛವಾಗಿದೆಯೆಂದರೆ ಆಕೆಯ ಬಿಳಿ ಸಾಕ್ಸ್‌ಗಳಲ್ಲಿ ಒಂದು ಸಣ್ಣ ಕಲೆ ಸಹ ಆಗಿಲ್ಲ. ಇಲ್ಲಿನ ಸ್ವಚ್ಛತೆಯನ್ನು ಕಂಡು ಸಿಮ್ರಾನ್‌ ಫುಲ್‌ ಶಾಕ್‌ ಆಗಿದ್ದಾಳೆ.

simranbalarajain ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಜಪಾನ್‌ ಬೀದಿಯ ಸ್ವಚ್ಛತೆಯನ್ನು ಪರೀಕ್ಷಿಸಲು ಸಿಮ್ರಾನ್‌ ಅಂಗಡಿಯೊಂದರಲ್ಲಿ ಬಿಳಿ ಸಾಕ್ಸ್‌ಗಳನ್ನು ಖರೀದಿಸುತ್ತಿರುವ ದೃಶ್ಯವನ್ನು ಕಾಣಬಹುದು. ತಾನು ಖರೀದಿಸಿದ ಸಾಕ್ಸ್‌ಗಳನ್ನೇ ಧರಿಸಿ ಒಂದು ರೌಂಡ್‌ ಓಡಾಡಿ ನೋಡಿ ಒಂದು ಚೂರು ಕಲೆಗಳು ಆಗಿಲ್ಲ, ಇಲ್ಲಿನ ಬೀದಿಗಳು ಅಷ್ಟು ಸ್ವಚ್ಛವಾಗಿದೆ ಎಂಬುದನ್ನು ತೋರಿಸಿದ್ದಾಳೆ.

ಇದನ್ನೂ ಓದಿ: ತಂದೆ-ಮಗಳ ಜುಗಲ್ಬಂದಿ… ಅಪ್ಪನೊಂದಿಗೆ ಮುದ್ದಾಗಿ ಹಾಡು ಹಾಡಿದ ಕಂದಮ್ಮ; ವಿಡಿಯೋ ವೈರಲ್‌

ಕೆಲ ಸಮಯಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 38.2 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಾನು ಕೂಡಾ ಜಪಾನ್‌ಗೆ ಭೇಟಿ ನೀಡಿದ್ದೆ, ನಿಜವಾಗಿಯೂ ಆ ದೇಶ ಸೂಪರ್‌ ಕ್ಲೀನ್‌ ಆಗಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಜಪಾನ್‌ ಸ್ವಚ್ಛವಾಗಿರುವ ದೇಶ ಅಂತ ನನಗೂ ಗೊತ್ತು, ಆದರೆ ಸಾಕ್ಸ್‌ ಮೇಲೆ ಒಂದು ಧೂಳಿನ ಕಲೆ ಕೂಡಾ ಆಗದಷ್ಟು ಕ್ಲೀನ್‌ ಆಗಿದೆ ಎಂಬುದನ್ನು ನಾನು ನಂಬೊಲ್ಲʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ದೇಶ ಇಷ್ಟೊಂದು ಸ್ವಚ್ಛವಾಗಿದ್ಯಾ ಎಂದು ಜಪಾನ್‌ನ ಸ್ವಚ್ಛತೆಯನ್ನು ಕಂಡು ಬೆರಗಾಗಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ