ದಿನದಲ್ಲಿ ಅರ್ಧಗಂಟೆ ಮಾತ್ರ ನಿದ್ದೆ ಮಾಡುತ್ತಾರಂತೆ ಈ ವ್ಯಕ್ತಿ; 12 ವರ್ಷಗಳಿಂದಲೂ ಹೀಗೇ !

| Updated By: Lakshmi Hegde

Updated on: Sep 18, 2021 | 3:56 PM

ಡೈಸುಕೆ ಹೋರಿ ಅವರ ಜೀವನ ಶೈಲಿಯನ್ನು ಜಪಾನ್​​ನ ಖ್ಯಾತ ಟಿವಿ ಶೋದಲ್ಲಿ ತೋರಿಸಲಾಗಿದೆ. ಮೂರು ದಿನ ಅವರನ್ನು ಈ ಟಿವಿ ಫಾಲೋ ಮಾಡಿ ಶೂಟಿಂಗ್​ ಮಾಡಿದೆ.

ದಿನದಲ್ಲಿ ಅರ್ಧಗಂಟೆ ಮಾತ್ರ ನಿದ್ದೆ ಮಾಡುತ್ತಾರಂತೆ ಈ ವ್ಯಕ್ತಿ; 12 ವರ್ಷಗಳಿಂದಲೂ ಹೀಗೇ !
ದಿನಕ್ಕೆ 30 ನಿಮಿಷ ನಿದ್ದೆ ಮಾಡುವ ವ್ಯಕ್ತಿ
Follow us on

ದೆಹಲಿ: ಮನುಷ್ಯನಿಗೆ ಆಹಾರ, ನೀರುಗಳೆಷ್ಟು ಮುಖ್ಯವೋ ಅಷ್ಟೇ ನಿದ್ದೆಯೂ ಮುಖ್ಯ. ಸಾಮಾನ್ಯವಾಗಿ ಏಳು ತಾಸು ಸರಿಯಾಗಿ ನಿದ್ದೆ ಮಾಡಿದರೆ ಆರೋಗ್ಯ ಉತ್ತಮವಾಗಿರುತ್ತದೆ. ಅದರಾಚೆಗೂ ಹಲವರು ದಿನಕ್ಕೆ 5-4 ತಾಸು ನಿದ್ದೆ ಮಾಡುವವರೂ ಇದ್ದಾರೆ. ಆದರೆ ಜಪಾನ್​ನಲ್ಲಿ ಒಬ್ಬ ವ್ಯಕ್ತಿ ನಿದ್ದೆ ಮಾಡುವ ಸಮಯ ಕೇಳಿದರೆ ಅಚ್ಚರಿಯಾಗದೆ ಇರದು. 36 ವರ್ಷದ ಡೈಸುಕೆ ಹೋರಿ ಎಂಬುವರು ದಿನಕ್ಕೆ ಕೇವಲ 30 ನಿಮಿಷಗಳಷ್ಟೇ ಹೊತ್ತು ನಿದ್ದೆ ಮಾಡುತ್ತಿದ್ದಾರಂತೆ.  

ಡೈಸುಕೆ ಹೋರಿ ಜಪಾನ್​​ನ ಶಾರ್ಟ್​ ಸ್ಲೀಪರ್​ ಅಸೋಸಿಯೇಶನ್​​ನ ಅಧ್ಯಕ್ಷರಾಗಿದ್ದಾರೆ. ಕಡಿಮೆ ಸಮಯ ನಿದ್ದೆ ಮಾಡಿಯೂ ಕೂಡ ತಾವು ಆರೋಗ್ಯವಾಗಿ ಇರುವುದಾಗಿ ಹೇಳಿರುವ ಡೈಸುಕೆ ಹೋರಿ, ಇದೀಗ ನೂರಾರು ಜನರಿಗೆ ಕಡಿಮೆ ಸಮಯ ನಿದ್ದೆ ಮಾಡುವ ತಂತ್ರವನ್ನು ಹೇಳಿಕೊಡುತ್ತಿದ್ದಾರೆ.  ನಾನು ಮೊದಲು ದಿನಕ್ಕೆ 8 ತಾಸುಗಳ ಕಾಲ ನಿದ್ದೆ ಮಾಡುತ್ತಿದ್ದೆ. ಆದರೆ ನಾನು ಅಂದುಕೊಂಡಿದ್ದೆಲ್ಲ ಮಾಡಲು, ಸಾಧಿಸಲು ಉಳಿದ 16 ಗಂಟೆ ಯಾವುದಕ್ಕೂ ಸಾಕಾಗುವುದಿಲ್ಲ ಎಂದು ಅನ್ನಿಸಲು ಶುರುವಾಯಿತು. ಹಾಗಾಗಿ ನಿದ್ದೆಯ ಅವಧಿಯನ್ನು ಕಡಿಮೆ ಮಾಡುತ್ತ ಬಂದೆ. ಈಗ 12 ವರ್ಷಗಳಿಂದ ದಿನದಲ್ಲಿ ಕೇವಲ 30 ನಿಮಿಷ ಮಾತ್ರ ನಿದ್ದೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಡೈಸುಕೆ ಹೋರಿ ಅವರ ಜೀವನ ಶೈಲಿಯನ್ನು ಜಪಾನ್​​ನ ಖ್ಯಾತ ಟಿವಿ ಶೋದಲ್ಲಿ ತೋರಿಸಲಾಗಿದೆ. ಮೂರು ದಿನ ಅವರನ್ನು ಈ ಟಿವಿ ಫಾಲೋ ಮಾಡಿ ಶೂಟಿಂಗ್​ ಮಾಡಿದೆ. ಮೊದಲನೇ ದಿನ ಡೈಸುಕೆ, ರಾತ್ರಿ ಸುಮಾರು 2 ಗಂಟೆ ಹೊತ್ತಿಗೆ ಮಲಗಿದ್ದಾರೆ. ಅದಾದ 26 ನಿಮಿಷಗಳಲ್ಲಿ ಯಾವುದೇ ಅಲಾರಾಂ ಇಲ್ಲದೆ ಎಚ್ಚರಗೊಂಡಿದ್ದಾರೆ.  ಇನ್ನು ರಾತ್ರಿಯೆಲ್ಲ ವಿಡಿಯೋ ಗೇಮ್​ ಆಡುತ್ತಾರೆ.  ಸರ್ಫಿಂಗ್​ ಹೋಗುತ್ತಾರೆ. ಇನ್ನು ತಮ್ಮ ಶಾರ್ಟ್​ ಸ್ಲೀಪ್​ ಸ್ನೇಹಿತರ ಜತೆ ಮೋಜು-ಮಸ್ತಿ, ಮಾತುಕತೆಯಲ್ಲಿ ತೊಡಗುತ್ತಾರೆ ಎಂದು ಟಿವಿ ಶೋ ಹೇಳಿದೆ. ಇನ್ನು ತನಗೆ ಒಮ್ಮೊಮ್ಮೆ ನಿದ್ದೆ ಮಾಡಬೇಕು ಎನ್ನಿಸುತ್ತದೆ. ಆದರೆ ನಾನು ಕಫೇನ್​ ಅಂಶವಿರುವ ಪಾನೀಯ ಸೇವಿಸಿ ಹೋಗಲಾಡಿಸಿಕೊಳ್ಳುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ಕೊಡಗು: 80 ವರ್ಷದಿಂದ ವಾಸವಿದ್ದ ಮನೆ ತೆರವು; ಬೀದಿಗೆ ಬಿದ್ದ ಬಡ ಕುಟುಂಬ

ರಾಜಕೀಯದಿಂದ ದೂರ ಸರಿಯುವುದಾಗಿ ಘೋಷಿಸಿದ್ದ ಬಿಜೆಪಿ ಮಾಜಿ ನಾಯಕ ಬಾಬುಲ್ ಸುಪ್ರಿಯೋ ಟಿಎಂಸಿಗೆ ಸೇರ್ಪಡೆ

Published On - 3:52 pm, Sat, 18 September 21