ಜಪಾನ್ನಲ್ಲಿ ಕಳೆದ ಸಾವಿರ ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದ್ದ ಬೆತ್ತಲೆ ಹಬ್ಬ ಅವಸಾನದ ಅಂಚಿನಲ್ಲಿದೆ. ಕಾರಣ ಕೇಳಿದರೆ ಗಾಬರಿಯಾಗುತ್ತೀರಿ. ಜಪಾನ್ನಲ್ಲಿ ಈ ಹಬ್ಬದಲ್ಲಿ ಪಾಲ್ಗೊಳ್ಳಲು ಎದೆಗಾರಿಕೆ ಇರುವ ಯುವಕರ ಸಂಖ್ಯೆ ಬಹಳ ಕಡಿಮೆ ಆಗಿದೆ. ಅಂದರೆ ಜಪಾನ್ನಲ್ಲಿ ಈ ಸಂಪ್ರದಾಯವನ್ನು ಜೀವಂತ ಉಳಿಸಿಕೊಂಡಿದ್ದ ಹಿಂದಿನ ತಲೆಮಾರಿನ ಜನರಿಗೆ ಈಗ ವಯಸ್ಸಾಗಿ ಹೋಗಿದೆ. ಹತ್ತು ಶತಮಾನಗಳ ಕಾಲ ಚಿರಯೌವ್ವನಿಗನಂತೆ ರಣೋತ್ಸಾಹದಿಂದ ಆಚರಿಸಲಾಗುತ್ತಿದ್ದ ಹಡಕ ಮಟ್ಸುರಿ (Hadaka Matsuri) ಹಬ್ಬ ಈಗ ವೃದ್ಧಾಪ್ಯದ ಸಾವು ಅನುಭವಿಸುತ್ತಿದೆ. ವರದಿಯೊಂದರ ಪ್ರಕಾರ ಈ ಬಾರಿ ಜಪಾನ್ನಲ್ಲಿ ಆಚರಿಸಲಾಗಿರುವುದು ಕೊನೆಯ ಹಡಕ ಮಟ್ಸುರಿ ಹಬ್ಬವಂತೆ.
ಜಪಾನ್ನ ಉತ್ತರ ಭಾಗದಲ್ಲಿರುವ ಇವಾಟೆ (Iwate) ಪ್ರಾಂತ್ಯದಲ್ಲಿರುವ ಅರಣ್ಯದ ಕೋಕುಸೆಕಿ ಜಿ (Kokuseki-ji temple) ಮಂದಿರದಲ್ಲಿ ನಡೆದ ಹಡಕ ಮಟ್ಸುರಿ ಅಥವಾ ಸೋಮಿನ್ ಸೈ ಹಬ್ಬದಲ್ಲಿ ಬಹುತೇಕ ನಗ್ನಗೊಂಡಿದ್ದ ನೂರಾರು ಯುವಕರು ಪಾಲ್ಗೊಂಡಿದ್ದರು. ‘ಜಾಸ್ಸೋ, ಜೋಯಾಸ’ (Jasso Joyasa- ದುಷ್ಟತೆ ತೊಲಗಲಿ ಎಂದರ್ಥ) ಎಂಬ ಘೋಷಣೆಗಳು ಮಾರ್ದನಿಸಿದವು. ಪ್ರತೀ ವರ್ಷ ಸಾವಿರಾರು ಜಪಾನೀಯರು ಪಾಲ್ಗೊಳ್ಳುತ್ತಿದ್ದ ಮತ್ತು ವಿದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ಈ ವಿಶೇಷ ಬೆತ್ತಲೆ ಹಬ್ಬ ಈ ಬಾರಿಯೇ ಕೊನೆ ಎನ್ನಲಾಗಿದೆ. ಕಳೆದ ಕೆಲ ವರ್ಷಗಳಿಂದಲೇ ಈ ಹಬ್ಬ ಕಳೆಗುಂದಿತ್ತು. ಪಾಲ್ಗೊಳ್ಳುವವರ ಸಂಖ್ಯೆ ಇಳಿಮುಖವಾಗಿತ್ತು.
ಇದನ್ನೂ ಓದಿ: ಹುಡುಗಿಯ ಕೊರಳಿಗೆ ಬೆಲ್ಟ್ ಕಟ್ಟಿಕೊಂಡು ನಾಯಿಯಂತೆ ಬೀದಿಗಿಳಿದ ಮಹಿಳೆ
ಯುವಕರೇ ಆಚರಿಸುವ ಹಬ್ಬ ಇದು. ಬಿಳಿ ಬಣ್ಣದ ಸಣ್ಣ ಲಂಗೋಟಿ (white loincloths) ಹೊರತುಪಡಿಸಿ ಪೂರ್ಣ ಬೆತ್ತಲೆಯಾಗಿರುತ್ತಾ ಯುವಕರು. ಚಾಂದ್ರಮಾನ ಹೊಸ ವರ್ಷದ ಏಳನೇ ದಿನದಂದು ರಾತ್ರಿಯಿಡೀ ಈ ಹಬ್ಬದ ಆಚರಣೆ ನಡೆಯುತ್ತದೆ. ಮೊದಲಿಗೆ ನಗ್ನ ಯುವಕರು ಕೊರೆಯುವ ಚಳಿಯಲ್ಲೂ ಕೋಕುಸೆಕಿ ಜಿ ಮಂದಿರದ ಬಳಿಯ ಯಮೂಚಿ ನದಿಯಲ್ಲಿ ಮೈ ತೊಳೆದುಕೊಂಡು ಜಾಸ್ಸೋ ಜೋಯಾಸ ಎಂದು ಕೂಗುತ್ತಾ ದೇವಸ್ಥಾನ ಪ್ರವೇಶಿಸುತ್ತಾರೆ.
ಬಳಿಕ ಹಿಟಾಕಿ ನೊಬೋರಿ, ಬೆಟ್ಟೋ ನೊಬೋರಿ, ಓನಿಗೊ ನೊಬೋರಿ ಇತ್ಯಾದಿ ಸ್ಪರ್ಧೆಗಳು ಯುವಕರ ಮಧ್ಯೆ ನಡೆಯುತ್ತವೆ. ರಾತ್ರಿ ಆರಂಭವಾಗಿ ಬೆಳಗ್ಗೆವರೆಗೂ ಇದು ನಡೆಯುತ್ತಿರುತ್ತದೆ. ಕೊನೆಯಲ್ಲಿ ಸೋಮಿನ್ ಎಂಬ ಚೀಲ ಪಡೆಯಲು ಯುವಕರ ಮಧ್ಯೆ ಪೈಪೋಟಿ ನಡೆಯುತ್ತದೆ. ಇದು ಈ ಹಬ್ಬದ ಪ್ರಮುಖ ಆಕರ್ಷಣೆ.
ಇದನ್ನೂ ಓದಿ: 10 ವರ್ಷದ ಬಾಲಕಿಯ ಕನಸಲ್ಲಿ ಕಂಡ ಶ್ರೀ ಕೃಷ್ಣ; ಅದೇ ಸ್ಥಳದಲ್ಲಿ ವಿಗ್ರಹ ಪತ್ತೆ
ಪ್ಲೇಗ್ ಇತ್ಯಾದಿ ಮಹಾಮಾರಿಯನ್ನು ದೂರ ಇಡಲು ಈ ಆಚರಣೆ ಆರಂಭವಾಯಿತು ಎನ್ನಲಾಗುತ್ತಿದೆ. ಈ ಸೀಸನ್ನಲ್ಲಿ ಆ ಸ್ಥಳದಲ್ಲಿ ಕೊರೆಯುವ ಚಳಿ ಇರುತ್ತದೆ. ಇದರಲ್ಲಿ ಯುವಕರು ಬಹುತೇಕ ವಿವಸ್ತ್ರಗೊಂಡು ನದಿ ನೀರಿನಲ್ಲಿ ಝಳಕ ಮಾಡಿ ಹಬ್ಬ ಆಚರಿಸಬೇಕು.
ಈಗ ಜಪಾನ್ನಲ್ಲಿ ವೃದ್ಧರ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿದೆ. ಸೋಮಿನ್ಸೈ ಹಬ್ಬವನ್ನು ನಿಷ್ಠೆಯಿಂದ ಆಚರಿಸಿಕೊಂಡು ಬರುತ್ತಿದ್ದ ಹಿಂದಿನ ತಲೆಮಾರಿನವರಿಗೆ ವಯಸ್ಸಾಗಿ ಹೋಗಿದೆ. ಈಗಿನ ತಲೆಮಾರಿನವರ ಜನಸಂಖ್ಯೆ ಬಹಳ ದೊಡ್ಡದಿಲ್ಲ. ಹೀಗಾಗಿ, ಈ ಬೆತ್ತಲೆ ಹಬ್ಬ ಇತಿಹಾಸ ಪುಟ ಸೇರ್ಪಡೆಯಾಗುತ್ತಿದೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ